ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಶುಕ್ರವಾರ ಬರಲಿದೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ

|
Google Oneindia Kannada News

ಬೆಂಗಳೂರು, ಮೇ 21; ಒಂದು ವಾರದಿಂದ ಕರ್ನಾಟಕದಲ್ಲಿ ಕೋವಿಡ್ ಲಸಿಕೆ ಕೊರತೆ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಾಜ್ಯಕ್ಕೆ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬರಲಿದೆ. ಮೇ 22ರಿಂದ 18-44 ವರ್ಷದೊಳಗಿನ ವಯೋಮಾನದವರಿಗೆ ಲಸಿಕೆ ನೀಡುವುದಾಗಿ ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡಿರುವ ಅವರು ರಾಜ್ಯ ಸರ್ಕಾರ ಖರೀದಿ ಮಾಡಿರುವ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಇಂದು ಆಗಮಿಸಲಿದೆ. ಇದುವರೆಗೂ ರಾಜ್ಯ 9,50,000 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಕರ್ನಾಟಕ; ಮೇ 22ರಿಂದ 18-44 ವರ್ಷದವರಿಗೆ ಲಸಿಕೆಕರ್ನಾಟಕ; ಮೇ 22ರಿಂದ 18-44 ವರ್ಷದವರಿಗೆ ಲಸಿಕೆ

ಇದುವರೆಗೂ ಕರ್ನಾಟಕಕ್ಕೆ 1,24,20,510 ಡೋಸ್ ಲಸಿಕೆ ಬಂದಿದೆ. 1,01,60,060 ಕೋವಿಶೀಲ್ಡ್, 11,66,280 ಕೊವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪಡೆಯಲಾಗಿದೆ. 10,94,170 (9,50,000 ಕೋವಿಶೀಲ್ಡ್, 1,44,170 ಕೊವ್ಯಾಕ್ಸಿನ್) ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ.

ಝೈಡಸ್ ಕೋವಿಡ್ ಲಸಿಕೆ ಪ್ರಯೋಗ; ಕರ್ನಾಟಕದ 20 ಮಕ್ಕಳು ಭಾಗಿ ಝೈಡಸ್ ಕೋವಿಡ್ ಲಸಿಕೆ ಪ್ರಯೋಗ; ಕರ್ನಾಟಕದ 20 ಮಕ್ಕಳು ಭಾಗಿ

Karnataka To Receive 2 Lakh Doses Of Covishield Today From Order Placed By State Govt

ಕರ್ನಾಟಕ ಸರ್ಕಾರ 18-44 ವಯೋಮಿತಿಯ ಜನರಿಗೆ ಉಚಿತವಾಗಿ ಲಸಿಕೆ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಲಸಿಕೆ ತಯಾರಿಕಾ ಕಂಪನಿಗಳಿಂದ ನೇರವಾಗಿ ಖರೀದಿ ಮಾಡಲಾಗುತ್ತದೆ.

ಹಣ ಪಡೆದು ಲಸಿಕೆ ಹಾಕುತ್ತಿದ್ದ ಸರ್ಕಾರಿ ವೈದ್ಯೆ ಸೇರಿ ಇಬ್ಬರ ಬಂಧನ ಹಣ ಪಡೆದು ಲಸಿಕೆ ಹಾಕುತ್ತಿದ್ದ ಸರ್ಕಾರಿ ವೈದ್ಯೆ ಸೇರಿ ಇಬ್ಬರ ಬಂಧನ

ಕಳೆದ ವಾರ ಲಸಿಕೆಯ ತೀವ್ರ ಕೊರತೆ ಎದುರಾದ ಕಾರಣ ಮೇ 14ರಿಂದ 18-44 ವಯೋಮಿತಿಯ ಜನರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಮೇ 22ರಿಂದ ಲಸಿಕೆ ನೀಡುವುದನ್ನು ಪುನಃ ಆರಂಭಿಸಲಾಗುತ್ತದೆ.

Recommended Video

Dr sudhakar- ಆರೋಗ್ಯ ಸಚಿವರ ಮುಂದೆ , ಬಡವರ ಮೇಲೆ ಹಲ್ಲೆ !! | Oneindia Kannada

ಈಗಾಗಲೇ ಆರೋಗ್ಯ ಇಲಾಕೆ ಮೇ 22ರಿಂದ 18-44 ವರ್ಷದೊಳಗಿನ ವಯೋಮಾನದವರಿಗೆ ಕೊರೊನಾ ಲಸಿಕೆ ವಿತರಣೆ ಪುನರಾರಂಭಿಸಲಿದ್ದು, ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದೆ.

English summary
Health minister Dr. K. Sudhakar tweeted that Karnataka to receive 2 lakh doses of Covishield today from order placed by state govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X