ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka TET Result 2022: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟ: ದಿನಾಂಕ, ವೆಬ್‌ಸೈಟ್‌ ವಿವರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 9: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) 2022ರ ಫಲಿತಾಂಶ ಮುಂದಿನ ವಾರಾಂತ್ಯಕ್ಕೆ ಪ್ರಕಟಗೊಳ್ಳಲಿದೆ.

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2022 ಅನ್ನು ಮುಂದಿನ ವಾರಾಂತ್ಯದಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

KARTET 2022 ಫಲಿತಾಂಶವನ್ನು ಪ್ರಕಟಿಸಲಿದೆ. schooleducation.kar.nic.in ನಲ್ಲಿ ಲಭ್ಯವಿರುತ್ತದೆ.

ಈ ವಿಚಾರವಾಗಿ ತಮ್ಮ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಬರೆದುಕೊಂಡಿರುವ ನಾಗೇಶ್‌, 'ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶವನ್ನು ಮುಂದಿನ ವಾರಾಂತ್ಯದಲ್ಲಿ ಪ್ರಕಟಿಸಲಾಗುವುದು' ಎಂದು ತಿಳಿಸಿದ್ದಾರೆ.

ನವೆಂಬರ್ 6ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿತ್ತು. ನವೆಂಬರ್‌ 9ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು.

ಈ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾತಿ ಶೇ.92 ಇದೆ. ಈ ಕುರಿತು ಬಿ.ಸಿ.ನಾಗೇಶ್ ಈ ಹಿಂದೆ ಟ್ವೀಟ್ ಮಾಡಿದ್ದರು. ನವೆಂಬರ್ 6 ರಂದು ಎರಡು ಅವಧಿಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು - ಪತ್ರಿಕೆ 1 ಅನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಪತ್ರಿಕೆ 2 ಅನ್ನು ಮಧ್ಯಾಹ್ನ 1:30 ರಿಂದ 4:30 ರವರೆಗೆ ನಡೆಸಲಾಯಿತು.

Karnataka TET result to be released next weekend: BC Nagesh

ಅದರ ನಂತರ, ನವೆಂಬರ್ 9ರಂದು ಪತ್ರಿಕೆ 1 ಮತ್ತು 2 ರ ಉತ್ತರ ಕೀಗಳನ್ನು ಬಿಡುಗಡೆ ಮಾಡಲಾಯಿತು. ತಾತ್ಕಾಲಿಕ ಉತ್ತರ ಕೀ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ನವೆಂಬರ್ 17 ರ ಸಂಜೆ 5:30 ರ ವರೆಗೆ ಸಮಯವಿತ್ತು.

ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಿಸಿಕೊಳ್ಳಲು KARTET ಪರೀಕ್ಷೆಯನ್ನು ನಡೆಸಲಾಗುತ್ತದೆ. ಪೇಪರ್ 1 ಅನ್ನು ಕೆಳ ಪ್ರಾಥಮಿಕ ಶಿಕ್ಷಕರನ್ನು (1 ರಿಂದ 5 ನೇ ತರಗತಿಗಳು) ನೇಮಕ ಮಾಡಲು ನಡೆಸಲಾಗುತ್ತದೆ. 6 ರಿಂದ 8 ನೇ ತರಗತಿಗಳಿಗೆ ಶಿಕ್ಷಕರನ್ನು ಶಿಕ್ಷಕರನ್ನು ನೇಮಿಸಿಕೊಳ್ಳಲು ಪೇಪರ್‌ 2 ಅನ್ನು ನಡೆಸಲಾಗುತ್ತದೆ.

English summary
Karnataka Teacher Eligibility Test (TET) 2022 result will be declared next weekend. Karnataka Primary Education Minister BC Nagesh said that the Karnataka Teacher Eligibility Test 2022 will be declared next weekend,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X