ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಗಣತಿಗೆ ಸಿದ್ಧರಾಗಿ, ಯಾವ ಜಾತಿಗೆ ಯಾವ ಕಾಲಂ

By Mahesh
|
Google Oneindia Kannada News

ಬೆಂಗಳೂರು, ಏ.10: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ ಮೊದಲ ಬಾರಿಗೆ ಜಾತಿ ಗಣತಿ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಮುಂದಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ಕಮ್ ಸಮೀಕ್ಷೆ ಕಾರ್ಯ ಏ.11ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿದೆ. ಏ.30ರ ವರೆಗೂ 20 ದಿನಗಳ ಕಾಲ ನಿರಂತರವಾಗಿ ಸಮೀಕ್ಷಾ ಕಾರ್ಯ ನಡೆಯಲಿದೆ.

ಸುಮಾರು 1.3 ಲಕ್ಷ ಗಣತಿದಾರ ಅಧಿಕಾರಿಗಳು 1.26 ಕೋಟಿಗೂ ಅಧಿಕ ಮನೆ ಮನೆ ಸಮೀಕ್ಷೆ ಮೂಲಕ ಜಾತಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಕೌಟುಂಬಿಕ, ಮೀಸಲಾತಿ, ರಾಜಕೀಯ ಸೇರಿದಂತೆ 55 ವಿವಿಧ ಅಂಶಗಳನ್ನು ಒಳಗೊಂಡ ಪ್ರಶ್ನೆಗಳನ್ನು ಈಗಾಗಲೇ ಸಮೀಕ್ಷೆಗಾಗಿ ಸಿದ್ಧಪಡಿಸಲಾಗಿದೆ. 1 ರಿಂದ 31 ಪ್ರಶ್ನೆಗಳು ವೈಯಕ್ತಿಕ ವಿಷಯಗಳು ಹಾಗೂ ಕುಟುಂಬದ ಬಗ್ಗೆ ಇರುತ್ತದೆ.

ರಾಜ್ಯದ ಎಲ್ಲ ಜಿಲ್ಲಾಡಳಿತ ಸಾಮಾಜಿಕ ಸಮೀಕ್ಷೆಗಾಗಿ ಸಜ್ಜುಗೊಂಡಿವೆ. ವಿವಿಧ ಜಾತಿ ಆಧಾರಿತ ಸಂಘಟನೆಗಳು ತಮ್ಮ ತಮ್ಮ ಜಾತಿ ಹಾಗೂ ಉಪಜಾತಿಗಳ ನಮೂದು ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿವೆ. [ಜಾತಿ ಜನಗಣತಿ ವಿರೋಧಿಸಿ ವೀರಶೈವರ ಜಾಥಾ]

ರಜಾ ದಿನಗಳಲ್ಲೂ ಕೂಡ ಸಮೀಕ್ಷೆ ನಡೆಸಲಾಗುತ್ತದೆ. ಪ್ರತಿಯೊಂದು ಮಾಹಿತಿಯನ್ನೂ ನಿಖರವಾಗಿ ನೀಡಬೇಕು. ತಪ್ಪು ಮಾಹಿತಿಯನ್ನು ನೀಡಬಾರದೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್ ಕಾಂತರಾಜ್ ಕೋರಿದ್ದಾರೆ.

Karnataka State all set for caste census

ಜಾತಿ ಕಾಲಂನಲ್ಲಿ ಏನೆಂದು ನಮೂದಿಸಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಕೆಲ ಉದಾಹರಣೆ:

ಒಕ್ಕಲಿಗ: ಕಾಲಂ ಸಂಖ್ಯೆ 6ರಲ್ಲಿ ಒಕ್ಕಲಿಗ ಎಂದೂ ಹಾಗೂ ಒಕ್ಕಲಿಗ ಸಮುದಾಯದ ಸಂಕೇತ ಸಂಖ್ಯೆ (ಕೋಡ್) -1334 ಎಂದು ನಮೂದಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅ. ದೇವೇಗೌಡ ಮನವಿ ಮಾಡಿದ್ದಾರೆ.

ನಾಯಕ: ನಾಯಕ, ಊರ ನಾಯಕ, ಮ್ಯಾಸ ನಾಯಕ, ಬೇಡ, ತಳವಾರ, ಪಾಳೇಗಾರ, ವಾಲ್ಮೀಕಿ, ಬೇಡರ್, ವಡರ್ ಹೀಗೆ 18 ಪರ್ಯಾಯ ಪದಗಳಿಂದ ಕರೆಯಲ್ಪಡುವ ಜನಾಂದ ನಾಯಕ ಎಂದು ನಮೂದಿಸಬೇಕು ಎಂದು ನಾಯಕ ಜನಾಂಗದ ಮುಖಂಡ ‌ಟಿ. ದಾಸಕರಿಯಪ್ಪ ಕೋರಿದ್ದಾರೆ.

ವೀರಶೈವ - ಲಿಂಗಾಯತ: ಜಾತಿ ಕಾಲಂನಲ್ಲಿ ವೀರಶೈವ - ಲಿಂಗಾಯತಕ್ಕೆ ಕೊಟ್ಟ ಸಂಕೇತ ಸಂಖ್ಯೆ 1319. ಕಾಲಂ 7ರಲ್ಲಿ ಉಪಜಾತಿಗಳು ಇದ್ದಲ್ಲಿ ಆ ಕುರಿತ ಸಂಕೇತ ಕೋಡ್ ನೀಡಬೇಕು. [ಬ್ರಾಹ್ಮಣ, ವೈಶ್ಯರಿಗೂ ಮೀಸಲಾತಿ: ಆಂಜನೇಯ]

ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಆದರೂ ಸಹ ಸರ್ಕಾರ ಜಾತಿ ಗಣತಿಯಲ್ಲಿ ವೀರಶೈವ - ಧರ್ಮಕ್ಕೆ ಪ್ರತ್ಯೇಕ ಕೋಡ್ ನೀಡಿರುವುದಿಲ್ಲ. ಇತರೆ ಎಂಬ ಕಾಲಂನಲ್ಲಿ ಲಿಂಗಾಯತ - ವೀರಶೈವರು ಗುರುತಿಸಿಕೊಳ್ಳುವುದರಿಂದ ಸಂಖ್ಯೆಯನ್ನು ನಿಖರವಾಗಿ ಗುರುತಿಸಲು ಅನುಕೂಲವಾಗುತ್ತದೆ.

ಕೊರಚ ಸಮಾಜ : ಕುಳುವ, ಕುಂಚಿ ಕೊರಚ, ಪುಟ್ಟಿಕೊರಚ, ಕೊರವ, ಕೊರವರ್, ಭಜಂತ್ರಿ, ಕೊರಚರ್ ಈ ಯಾವುದೇ ಉಪನಾಮಗಳನ್ನು ನಮೂದಿಸಬಾರದು. ಜಾತಿ ಕಾಲಂನಲ್ಲಿ 'ಕೊರಚ' ಎಂದು ನಮೂದಿಸಿದರೇ ಸಾಕು ಎಂದು ಸಮಾಜದ ಮುಖ್ಯಸ್ಥ ಕೆ.ಎನ್. ಓಂಕಾರಪ್ಪ ಮನವಿ ಮಾಡಿಕೊಂಡಿದ್ದಾರೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]

ಬೇಡ ಜಂಗಮ: ಜಾತಿ ಗಣತಿಯಲ್ಲಿ ಬೇಡ ಜಂಗಮರು ಜಾತಿ ಕಾಲಂ ನಲ್ಲಿ ಬಿ022 ಎಂದು ನಮೂದಿಸಬೇಕೆಂದು ಜಿಲ್ಲಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ಗೌರವಾಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ ಅವರು ಕರೆ ನೀಡಿದ್ದಾರೆ.

ಧರ್ಮದ 5ನೇ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಬೇಡ ಜಂಗಮ (ಪರಿಶಿಷ್ಟ ಜಾತಿ), ಕೋಡ್ ಬಿ022 ಎಂದು ನಮೂದಿಸಬೇಕು. ಉಪಜಾತಿಯನ್ನು ಬರೆಸಬಾರದು, ಕಡ್ಡಾಯವಾಗಿ ಪೆನ್ನಿನಲ್ಲಿ ನಮೂದು ಮಾಡಬೇಕು.

ಮಡಿವಾಳ ಸಮಾಜ: ಮಡಿವಾಳ ಸಮಾಜದವರು ಜಾತಿ ಕಾಲಂನಲ್ಲಿ 'ಮಡಿವಾಳ' ಎಂದು ಮತ್ತು ಉಪ ಜಾತಿಯ ಕಾಲಂನಲ್ಲೂ ಮಡಿವಾಳ ಹಾಗೂ ಪರ್ಯಾಯ ಜಾತಿಯ ಕಾಲಂ ನಂ.8ರಲ್ಲಿ ಅಗಸ ಅಥವಾ ಧೋಬಿ ಎಂದು ಬರೆಸಬಹುದು.

English summary
Karnataka State all set for caste census. As many as 1.3 lakh surveyors will conduct the caste census involving 1.26 crore households across the State from April 11 said H. Kantharaj, Chairman of Karnataka State Commission for Backward Classes. Various community leaders urged the public to provide accurate information during socio-educational survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X