• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?

|

ಕರ್ನಾಟಕದ ಜನತೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಏಪ್ರಿಲ್ 11 ರಿಂದ ಮನೆ ಮನೆ ಸಮೀಕ್ಷೆ ಆರಂಭವಾಗುವುದರೊಂದಿಗೆ ಜಾತಿ ಗಣತಿಗೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗಗಳಲ್ಲಿ ಅಸಮಾನತೆ ತೊಲಗಿಸಿ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕೆಂಬ ಭಾರತ ಸಂವಿಧಾನದಲ್ಲಿನ ಆಶಯಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರಈ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.

175 ಕೋಟಿ ವೆಚ್ಚ : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳಲಿರುವ ಜಾತಿ ಗಣತಿಗೆ 175 ಕೋಟಿ ರೂ. ವೆಚ್ಚವಾಗು ನಿರೀಕ್ಷೆ ಇದೆ. ಈ ಬಾರಿಯ ಬಜೆಟ್‌ನಲ್ಲಿ 84 ಕೋಟಿ ಹಾಗೂ 2015-16 ನೇ ಸಾಲಿನ ಬಜೆಟ್‌ನಲ್ಲಿ 58 ಕೋಟಿ ರೂ. ಜಾತಿಗಣತಿಗಾಗಿ ಮೀಸಲಿಡಲು ತೀರ್ಮಾನಿಸಲಾಗಿದೆ. [ಏ.11ರಿಂದ ಮಹತ್ವಾಕಾಂಕ್ಷಿ ಜಾತಿ ಗಣತಿ ಆರಂಭ]

1 ಲ್ಷಕ ಸಿಬ್ಬಂದಿ ಭಾಗಿ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಒಳಗೊಂಡಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯಕ್ಕೆ 1,26,928 ಗಣತಿ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ ಸಮೀಕ್ಷೆಗಾಗಿ 2,588 ಮಾಸ್ಟರ್ ಟ್ರೈನರ್‌ಗಳು, 22,190 ಮೇಲ್ವಿಚಾರಕರು ಹಾಗೂ 1,33,140 ಗಣತಿದಾರರೂ ಒಳಗೊಂಡಂತೆ 1,75,288 ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

55 ಪ್ರಶ್ನೆಗಳು : ಫೆಬ್ರವರಿ ಎರಡನೇ ವಾರದಲ್ಲಿ ಗಣತಿ ಬ್ಲಾಕ್‌ಗೆ ಭೇಟಿ ನೀಡಿ, ಬ್ಲಾಕ್‌ನ ಗಡಿ ಗುರುತಿಸಿ, ಮನೆ ಮನೆ ಪಟ್ಟಿ ಸಿದ್ದಪಡಿಸಿ ಪ್ರಾಯೋಗಿಕವಾಗಿ ಕುಟುಂಬಗಳ ಅಣುಕು ಸಮೀಕ್ಷಾ ಕಾರ್ಯ ಪ್ರಾರಂಭವಾಗಲಿದೆ. ತದ ನಂತರ, ಏಪ್ರಿಲ್ 11 ರಿಂದ 30ರ ವರೆಗೆ ಮನೆ ಮನೆ ಸಮೀಕ್ಷೆ ನಡೆಯಲಿದೆ. ಪ್ರತಿ ಮನೆಗೂ ಭೇಟಿ ನೀಡುವ ಗಣತಿದಾರರು ಕುಟುಂಬದ ಎಲ್ಲಾ ಸದಸ್ಯರಿಗೆ ಸಂಬಂಧಿಸಿದಂತೆ 55 ಅಂಶಗಳುಳ್ಳ ಪ್ರಶ್ನಾವಳಿಗೆ ಮಾಹಿತಿ ಪಡೆಯುತ್ತಾರೆ. ಒಂದು ಮನೆಯ ಮಾಹಿತಿ ಸಂಗ್ರಹಿಸಲು ಸುಮಾರು 45 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ : ನಿಖರ ಹಾಗೂ ವಾಸ್ತವಿಕ ಅಂಕಿ-ಅಂಶಗಳನ್ನು ಸಂಗ್ರಹಿಸಲು ಈ ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರ ಸೇವೆಯನ್ನು ಬಳಸಲು ನಿರ್ಧರಿಸಲಾಗಿದೆ. ಶಿಕ್ಷಕರ ಸೇವೆ ಬಳಸಲು ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಸಮೀಕ್ಷಾ ಕಾರ್ಯವು ರಜಾ ಅವಧಿಯಲ್ಲಿ ನಡೆಯುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗುವುದಿಲ್ಲ ಎಂಬುದು ಸರ್ಕಾರದ ಆಶಯ.

ಕಠಿಣ ಕ್ರಮದ ಎಚ್ಚರಿಕೆ : ಸಮೀಕ್ಷಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸದೆ, ಮನೆ ಮನೆಗೆ ತೆರಳದೆ ಮರದಡಿಯಲ್ಲಿಯೇ ಕುಳಿತು ಅಂಕಿ-ಅಂಶಗಳನ್ನು ದಾಖಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.ಗಣತಿದಾರರ ಎಲ್ಲಾ ಚಟುವಟಿಕೆಗಳನ್ನು ಹಿರಿಯ ಅಧಿಕಾರಿಗಳು ನಿಗಾವಹಿಸಲಿದ್ದಾರೆ.

ಮುಂಗಡ ಪಾವತಿ : ಸಮೀಕ್ಷೆ ಹಾಗೂ ಗಣತಿ ಕಾರ್ಯ ನಡೆದಾಗಲೆಲ್ಲಾ ಗಣತಿದಾರರಿಗೆ ಸಕಾಲದಲ್ಲಿ ಸಂಭಾವನೆ ಪಾವತಿಯಾಗುವುದಿಲ್ಲ ಎಂಬ ಅಪಸ್ವರಗಳು ಕೇಳಿ ಬರುತ್ತವೆ. ಆದ್ದರಿಂದ ಜಾತಿ ಗಣತಿಯನ್ನು ಪ್ರಾಮಾಣಿಕವಾಗಿ ನಡೆಸಲು ಪೂರಕವಾತಾವರಣ ಕಲ್ಪಿಸಲು ಶೇಕಡಾ 50 ರಷ್ಟು ಸಂಭಾವನೆಯ ಮೊತ್ತವನ್ನು ಗಣತಿದಾರಿಗೆ ಮುಂಗಡವಾಗಿಯೇ ಆನ್‌ಲೈನ್ ಮೂಲಕ ಪಾವತಿಸಲು ಸರ್ಕಾರ ಸಿದ್ಧವಿದೆ.

ಜಾತಿ ಗಣತಿ ಏಕೆ : ಸುಪ್ರೀಂಕೋರ್ಟ್ ಒತ್ತಾಸೆಯಂತೆ ಜಾತಿ ಗಣತಿ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆದಾಗಲೆಲ್ಲಾ, ಜಾತಿ ಆಧಾರಿತ ಮೀಸಲಾತಿಗೆ ಆಧಾರಗಳೇನು? ಎಂದು ಕೋರ್ಟ್ ಪ್ರಶ್ನಿಸುತ್ತಲೇ ಬಂದಿದೆ.

ನ್ಯಾಯಾಲಯ ಕೇಳುತ್ತಲೇ ಬಂದಿರುವ ಇಂತಹ ಪ್ರಶ್ನೆಗಳಿಗೆ ಯಾವ ಸರ್ಕಾರಕ್ಕೂ ಸಮರ್ಪಕವಾದ ಉತ್ತರ ನೀಡಲು ಸಾಧ್ಯವಾಗಿಲ್ಲ. ಏಕೆಂದರೆ ಸ್ವತಂತ್ರ ಭಾರತದಲ್ಲಿ ಜಾತಿ ಗಣತಿ ನಡೆದೇ ಇಲ್ಲ. ಈಗಿನ ಜಾತಿ ಲೆಕ್ಕಾಚಾರವೇನಿದ್ದರೂ 1931 ರ ಜಾತಿ ಗಣತಿಯನ್ನು ಆಧರಿಸಿದ್ದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸಲ್ಮಾನರು, ಕ್ರೈಸ್ತರು, ಈಡಿಗರು, ಕಮ್ಮಾರರು, ಕುಂಬಾರರು, ಕುರುಬರು, ನೇಕಾರರು ಕ್ಷೌರಿಕರು ಹೀಗೆ ಎಲ್ಲಾ ಜಾತಿಗಳಿಗೆ ಪ್ರತ್ಯೇಕವಾದ ಯೋಜನೆಗಳನ್ನು ಸರ್ಕಾರಗಳು ಘೋಷಿಸುತ್ತಲೇ ಇರುತ್ತದೆ. ಆದರೆ, ಸರ್ಕಾರದಲ್ಲಿ ಸಮಗ್ರ ಸ್ವರೂಪದ ಜಾತಿ ಗಣತಿಯ ಮಾಹಿತಿಯೇ ಇಲ್ಲದಿರುವ ಕಾರಣ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿಯೇ ಅನಿವಾರ್ಯವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

ವಿವಿಧ ಜಾತಿ, ಜನಾಂಗಗಳ ಅಭಿವೃದ್ಧಿಯಲ್ಲಿ ವ್ಯತ್ಯಾಸಗಳನ್ನು ಕಡಿಮೆ ಮಾಡಲು, ಜಾತಿವಾರು ಜನಗಣತಿ ಅನಿವಾರ್ಯವೂ ಹೌದು. ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಳ್ಳಲಿರುವ ಈ ಸಮೀಕ್ಷೆ ದಿಕ್ಸೂಚಿಯಾಗಲಿದೆ.

ಮಾಹಿತಿದಾರರು ಕೇಳುವ ಎಲ್ಲಾ ಮಾಹಿತಿಗಳನ್ನು ಪ್ರಾಮಾಣಿಕವಾಗಿ ನೀಡಬೇಕು.ಮಾಹಿತಿ ನೀಡುವುದರಿಂದ ತಪ್ಪಿಸಿಕೊಂಡರೆ ಅಥವಾ ತಪ್ಪು ಮಾಹಿತಿ ನೀಡಿದರೆ ತಮಗೆ ಮಾತ್ರವಲ್ಲ ಮುಂದಿನ ಪೀಳಿಗೆಗಳಿಗೂ ತಾವು ಅನ್ಯಾಯ ಮಾಡಿದಂತಾಗುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿ ನೈಜ ಮತ್ತು ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಸಹಕರಿಸಬೇಕೆಂಬುದು ಸರ್ಕಾರ ಜನರಿಗೆ ಮನವಿ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Government has decided to conduct a caste census form April 11 to 30 to identify the social and economic conditions of the entire population of the State. Know about cast census.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more