ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲ ವಿಷಯಗಳಲ್ಲಿಯೂ ಸೆಂಚುರಿ ಬಾರಿಸಿದವರು
Recommended Video

ಬೆಂಗಳೂರು, ಮೇ 07 : ಕರ್ನಾಟಕ ಎಸ್ಸೆಸ್ಸೆಲ್ಸಿಯಲ್ಲಿ ಒಂದೆರಡಲ್ಲ, ಎಲ್ಲ ಆರಕ್ಕೆ ಆರೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ (625ಕ್ಕೆ 625) ಪಡೆದು ತಂದೆ, ತಾಯಿ, ಗುರುಗಳು, ತಾವು ಓದಿದ ಶಾಲೆಗೆ ಕೀರ್ತಿ ತಂದವರು ಈ ವಿದ್ಯಾರ್ಥಿಗಲು.
* ಯಶಸ್ ಎಂಎಸ್ - ಮೈಸೂರಿನ ಸದ್ವಿದ್ಯಾ ಹೈಸ್ಕೂಲ್
* ಸುದರ್ಶನ್ ಕೆಎಸ್ - ಬೆಂಗಳೂರಿನ ಹೋಲಿ ಚೈಲ್ಸ್ ಹೈಸ್ಕೂಲ್
ಒಟ್ಟಿನಲ್ಲಿ ಇಡೀ ವರ್ಷ ಶ್ರದ್ಧೆಯಿಂದ, ಭಕ್ತಿಯಿಂದ ಓದಿದ್ದಕ್ಕೂ ಈ ಸಾಧನೆ ಸಾರ್ಥಕತೆಯ ಭಾವ ಉಕ್ಕಿಸುತ್ತದೆ. ಇಬ್ಬರಿಗೂ ಒನ್ಇಂಡಿಯಾ ಕನ್ನಡ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಒಂದು ಅಂಕ ಕೂಡ ಕಳೆದುಕೊಳ್ಳದಂತೆ ಪರೀಕ್ಷೆ ಬರೆದು ಪಾಸಾದದ್ದು ನಿಜಕ್ಕೂ ಅದ್ಭುತ ಸಾಧನೆ.

ಒಂದು ಅಂಕ ಕಡಿಮೆ ಪಡೆದವರು ಕಡಿಮೆ ಪ್ರತಿಭಾವಂತರೇನಲ್ಲ. ಒಂದು ಅಂಕವನ್ನು ದೇವರಿಗೆ ಕೊಟ್ಟು 625ರಲ್ಲಿ 624 ಅಂಕ ಪಡೆದವರು 8 ವಿದ್ಯಾರ್ಥಿಗಳಿದ್ದಾರೆ. 623 ಅಂಕ ಪಡೆದವರ ಸಂಖ್ಯೆ 12. ಹಾಗೆಯೆ, 622 ಮಾರ್ಕ್ಸ್ ಗಳನ್ನು 22 ವಿದ್ಯಾರ್ಥಿಗಳು ಪಡೆದಿದ್ದರೆ, 621 ಅಂಕಗಳನ್ನು 31 ಮತ್ತು 620 ಮಾರ್ಕ್ಸ್ ಗಳನ್ನು 35 ವಿದ್ಯಾರ್ಥಿಗಳು ಗಳಿಸಿದ್ದಾರೆ.
ಎಂದಿನಂತೆ ವಿದ್ಯಾರ್ಥಿನಿಯರು ಶೇ.78.01ರಷ್ಟು ಮತ್ತು ವಿದ್ಯಾರ್ಥಿಗಳು ಶೇ.66.56ರಷ್ಟು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷಕ್ಕಿಂತ ಶೇ.4.06ರಷ್ಟು ಫಲಿತಾಂಶ ಹೆಚ್ಚಾಗಿದೆ. ಇದು ನಿಜಕ್ಕೂ ಸಂತಸದ ಸಂಗತಿಯ. ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯೂ ಕಳೆದ ವರ್ಷಕ್ಕಿಂತ ಹೆಚ್ಚಿದೆ.












Click it and Unblock the Notifications