Karnataka SSLC Exam 2023 : ಹಾಲ್‌ಟಿಕೆಟ್ ಸಿಗದೆ ಪರದಾಡಿದ ವಿದ್ಯಾರ್ಥಿಗಳು
ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು ಹಾಲ್‌ಟಿಕೆಟ್‌ಗಾಗಿ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ. ಹಲವೆಡೆ ಹಾಲ್ ಟಿಕೆಟ್ ನೀಡಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಪರೀಕ್ಷೆ ಹತ್ತಿರ ಬಂದರೂ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ನಿರ್ಲಕ್ಷ ಮಾಡಿರುವುದು ಕಂಡು ಬಂದಿದೆ.
ಪರೀಕ್ಷೆಗೆ ಹಾಲ್‌ಟಿಕೆಟ್ ನೀಡಿಲ್ಲವೆಮದು ಶಿಕ್ಷಣ ಸಚಿವರಿಗೆ ಫೋನ್ ಮಾಡಿ ಪೋಷಕರು ದೂರು ನೀಡಿದ್ದಾರೆ. ಇದಕ್ಕೆ ಬಿಸಿ ನಾಗೇಶ್ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಶಿಕ್ಷಕರು ಹಾಲ್‌ಟಿಕೆಟ್ ನೀಡಿಲ್ಲ ಎಂದು ಪರೀಕ್ಷೆ ಆರಂಭವಾಗುವ ಕೊಂಚ ಸಮಯದ ಹಿಂದೆ ಸಚಿವರಿಗೆ ಕರೆ ಮಾಡಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿ ನಾಗೇಶ್ ಅವರು, ಫೋಷಕರು ಕರೆ ಮಾಡುತ್ತಿದ್ದಂತೆ ಪರಿಶೀಲನೆ ಮಾಡಿ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಸೆಂಟ್ ಮೇರಿಸ್ ಶಾಲೆಯ ಮುಖ್ಯೋಪಾಧ್ಯಾಯನ ಜೊತೆ ಮಾತನಾಡಿ ಮಕ್ಕಳಿಗೆ ಪರೀಕ್ಷೆ ಬರಿಯುವಂತೆ ಅನುಮತಿಸಿದ್ದಾರೆ.
ಎಂಟು ವಿದ್ಯಾರ್ಥಿಗಳು ಹಾಲ್‌ಟಿಕೆಟ್ ಸಿಗದೆ ಪರೀಕ್ಷೆ ಸಮಯದಲ್ಲಿ ಅಂತಂತ್ರರಾಗಿರುವುದು ಕಂಡು ಬಂದಿದೆ. ಈ ವೇಳೆ ಕೋಪಗೊಂಡ ಪೋಷಕರು ಹೇಗಾದರೂ ಮಕ್ಕಳು ಪರೀಕ್ಷೆ ಬರೆಯುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರ ಒಂದು ವರ್ಷದ ಭವಿಷ್ಯ ಹಾಳಾಗಬಾರದು ಎಂದು ಶಚಿವರಿಗೆ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಲಗ್ಗೆರೆಯ ಸೆಂಟ್ ಪಬ್ಲಿಕ್ ಶಾಲೆಯಲ್ಲಿ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಇಲ್ಲಿನ ಮುಖ್ಯೋಪಾದ್ಯಾಯರು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಹಾಲ್ ಟಿಕೆಟ್ ನೀಡಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಹೀಗಾಗಿ ಮಕ್ಕಳು ಕೂಡ ಪರೀಕ್ಷೆಯನ್ನ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೆ ಸಮಸ್ಯೆ ಎದುರಿಸಿದ ಘಟನೆ ಲಗ್ಗೆರೆಯಲ್ಲಿರುವ ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ. ಮಾತ್ರವಲ್ಲದೆ 1 ರಿಂದ 8 ನೇ ತರಗತಿವರೆಗೆ ಮಾತ್ರ ಅನುಮತಿ ಇದೆ. ಆದ್ರೆ 9 ಹಾಗೂ 10 ನೇ ತರಗತಿಯವರೆಗೆ ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದೆ ಅಂತ ಆರೋಪಿಸಲಾಗಿದೆ. ಪೂಜೆ ಮಾಡಿ ಹಾಲ್ ಟಿಕೆಟ್ ಕೊಡ್ತಿವಿ ಎಂದು ಕೊಡಲೇ ಇಲ್ಲ. ಸಚಿವರು ಮಾತನಾಡಿದ ಬಳಿಕ ಕೊನೆಗೆ ಹಾಲ್ ಟಿಕೆಟ್ ಸಿಕ್ಕಿದೆ. ಇದಕ್ಕಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಂದಿನಿ ಪೋಷಕರು ಧನ್ಯವಾದ ತಿಳಿಸಿದ್ದಾರೆ. 'ನನ್ನ ಮಗಳು ಪರೀಕ್ಷೆ ಬರಿಯೋದಿಲ್ಲ ಅಂದುಕೊಂಡ್ವಿ. ಆದರೆ ಕೊನೆ ಪರೀಕ್ಷೆ ಬರೆಯುವಂತಾಯಿತು ಎಂದು ಪೋಷಕರು ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ 31-03-2023 ರಿಂದ 15-04-2023 ರವರೆಗೆ ನಡೆಯಲಿದೆ. ಪರೀಕ್ಷೆಯ ದಿನಗಳ ವೇಳೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ನಿಷೇಧಾಜ್ಞೆಯನ್ನು ಜಾರಿಗೊಳಿಸದ ಪ್ರದೇಶದಲ್ಲಿ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರೆಯುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.
SSLC ಪರೀಕ್ಷೆ ಸಮಯ
ಮೊದಲ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಪರಿಕ್ಷಾ ಸಮಯ 3 ಗಂಟೆಗಳು ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳು.
ಎರಡನೇ ಮತ್ತು ತೃತೀಯ ಭಾಷೆಯ ಪತ್ರಿಕೆಗಳಿಗೆ ಉತ್ತರ ಬರೆಯಲು 2 ಗಂಟೆ ಮತ್ತು 45 ನಿಮಿಷಗಳು ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
| ದಿನಾಂಕ | ದಿನ | ವರ್ಗ | ವಿಷಯ | ಸಮಯ |
| 31.3.2023 | ಶುಕ್ರವಾರ | ಪ್ರಥಮ ಭಾಷೆ | ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್,ಇಂಗ್ಲಿಷ್, ಸಂಸ್ಕೃತ, | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 |
| 3.4.2023 | ಸೋಮವಾರ | - | ಗಣಿತ, ಸಮಾಜಶಾಸ್ತ್ರ: | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ |
| 6.4.2023 | ಗುರುವಾರ | ದ್ವಿತೀಯ ಭಾಷೆ | ಇಂಗ್ಲಿಷ್, ಕನ್ನಡ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 |
| 8.4.2023 | ಶನಿವಾರ | ಕೋರ್ ಸಬ್ಜೆಕ್ಟ್ ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ | |
| 8.4.2023 | ಮೆಕ್ಯಾನಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್,ANSI ಪ್ರೋಗ್ರಾಮಿಂಗ್, ಕಂಪ್ಯೂಟರ್ ವಿಜ್ಞಾನ, ಅರ್ಥಶಾಸ್ತ್ರ, ಎಂಜಿನಿಯರಿಂಗ್ ಗ್ರಾಫಿಕ್ಸ್ (Elements of Mechanical Engineering, Elements of Mechanical and Electrical Engineering, Elements of Electronics Engineering, Elements of Electronics Engineering,Programming in ANSI, Elements of Computer Science,Economics, Engineering Graphics) | ಮಧ್ಯಾಹ್ನ 2.30 ರಿಂದ 5.45 ರವರೆಗೆ | ||
| 10.4.2023 | ಸೋಮವಾರ | ವಿಜ್ಞಾನ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 | |
| 10.4.2023 | ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ | ಮಧ್ಯಾಹ್ನ 2 ರಿಂದ 3.45 ರವರೆಗೆ | ||
| 10.4.2023 | ಕರ್ನಾಟಕ ಸಂಗೀತ ಪ್ರಾಯೋಗಿಕ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ | ಮಧ್ಯಾಹ್ನ 3.45 ರಿಂದ 5.15 | ||
| 12.4.2023 | ಬುಧವಾರ | ಹಿಂದಿ (NCERT) | ಬೆಳಿಗ್ಗೆ 10.30 ರಿಂದ 1.30 ರವರೆಗೆ | |
| 12.4.2023 | ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, / NSQF ಪರೀಕ್ಷೆಯ ವಿಷಯಗಳು ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ, | 10.30 ರಿಂದ 12.45 ರವರೆಗೆ | ||
| 15.4.2023 | ಶನಿವಾರ | ಸಮಾಜ ವಿಜ್ಞಾನ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 |











Click it and Unblock the Notifications