Karnataka SSLC Exam 2023 : ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವೇಳಾಪಟ್ಟಿ ಮತ್ತು ಮಾರ್ಗಸೂಚಿ ಇಲ್ಲಿದೆ
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 31ರಂದು ಆರಂಭವಾಗುತ್ತದೆ. ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ 31-03-2023 ರಿಂದ 15-04-2023 ರವರೆಗೆ ನಡೆಯಲಿದೆ. ಪರೀಕ್ಷೆಯ ದಿನಗಳ ವೇಳೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ನಿಷೇಧಾಜ್ಞೆಯನ್ನು ಜಾರಿಗೊಳಿಸದ ಪ್ರದೇಶದಲ್ಲಿ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರೆಯುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

SSLC ಪರೀಕ್ಷೆ ಸಮಯ
ಮೊದಲ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಪರಿಕ್ಷಾ ಸಮಯ 3 ಗಂಟೆಗಳು ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳು.
ಎರಡನೇ ಮತ್ತು ತೃತೀಯ ಭಾಷೆಯ ಪತ್ರಿಕೆಗಳಿಗೆ ಉತ್ತರ ಬರೆಯಲು 2 ಗಂಟೆ ಮತ್ತು 45 ನಿಮಿಷಗಳು ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
ದಿನಾಂಕ-ದಿನ- ವರ್ಗ-ವಿಷಯ-ಸಮಯ
| ದಿನಾಂಕ | ದಿನ | ವರ್ಗ | ವಿಷಯ | ಸಮಯ |
| 31.3.2023 | ಶುಕ್ರವಾರ | ಪ್ರಥಮ ಭಾಷೆ | ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್,ಇಂಗ್ಲಿಷ್, ಸಂಸ್ಕೃತ, | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 |
| 3.4.2023 | ಸೋಮವಾರ | - | ಗಣಿತ, ಸಮಾಜಶಾಸ್ತ್ರ: | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ |
| 6.4.2023 | ಗುರುವಾರ | ದ್ವಿತೀಯ ಭಾಷೆ | ಇಂಗ್ಲಿಷ್, ಕನ್ನಡ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 |
| 8.4.2023 | ಶನಿವಾರ | ಕೋರ್ ಸಬ್ಜೆಕ್ಟ್ ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ | |
| 8.4.2023 | ಮೆಕ್ಯಾನಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್,ANSI ಪ್ರೋಗ್ರಾಮಿಂಗ್, ಕಂಪ್ಯೂಟರ್ ವಿಜ್ಞಾನ, ಅರ್ಥಶಾಸ್ತ್ರ, ಎಂಜಿನಿಯರಿಂಗ್ ಗ್ರಾಫಿಕ್ಸ್ (Elements of Mechanical Engineering, Elements of Mechanical and Electrical Engineering, Elements of Electronics Engineering, Elements of Electronics Engineering,Programming in ANSI, Elements of Computer Science,Economics, Engineering Graphics) | ಮಧ್ಯಾಹ್ನ 2.30 ರಿಂದ 5.45 ರವರೆಗೆ | ||
| 10.4.2023 | ಸೋಮವಾರ | ವಿಜ್ಞಾನ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 | |
| 10.4.2023 | ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ | ಮಧ್ಯಾಹ್ನ 2 ರಿಂದ 3.45 ರವರೆಗೆ | ||
| 10.4.2023 | ಕರ್ನಾಟಕ ಸಂಗೀತ ಪ್ರಾಯೋಗಿಕ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ | ಮಧ್ಯಾಹ್ನ 3.45 ರಿಂದ 5.15 | ||
| 12.4.2023 | ಬುಧವಾರ | ಹಿಂದಿ (NCERT) | ಬೆಳಿಗ್ಗೆ 10.30 ರಿಂದ 1.30 ರವರೆಗೆ | |
| 12.4.2023 | ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, / NSQF ಪರೀಕ್ಷೆಯ ವಿಷಯಗಳು ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ, | 10.30 ರಿಂದ 12.45 ರವರೆಗೆ | ||
| 15.4.2023 | ಶನಿವಾರ | ಸಮಾಜ ವಿಜ್ಞಾನ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 |
ಪ್ರಮುಖ ಸೂಚನೆಗಳು
ಪ್ರಥಮ ಭಾಷೆಗೆ ಗರಿಷ್ಠ ಅಂಕ 100 ಮತ್ತು ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ 80 ಅಂಕಗಳು.
NSQF ವಿಷಯಗಳ ಪರೀಕ್ಷೆಯನ್ನು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:45 ರವರೆಗೆ ನಡೆಸಲಾಗುತ್ತದೆ.
JTS (56, 57, 58, 59 ಮತ್ತು 75, 76, 77) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಏಪ್ರಿಲ್ 17, 2023 ರಂದು ನಡೆಸಲಾಗುವುದು.
ವಿಕಲಚೇತನ ಅಭ್ಯರ್ಥಿಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ.












Click it and Unblock the Notifications