SSLC Results 2026: 10ನೇ ತರಗತಿ ಫಲಿತಾಂಶ ಏ.24ರಂದು ಬಿಡುಗಡೆ ಅನುಮಾನ

ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಕೊಡಬೇಕೆ? ಅಥವಾ ಅಂಕ ನೀಡಬೇಕೆ? ಎಂಬುದರಲ್ಲಿ ಅಂತಿಮ ನಿರ್ಧಾರವಾಗಿಲ್ಲ. ಈ ವಿಚಾರದಲ್ಲಿ ಒಂದಷ್ಟು ಗೊಂದಲವಾಗಿದ್ದಂತೂ ಸತ್ಯ. ಸದ್ಯ ಇದೇ ವಿಚಾರ ಹೈಕೋರ್ಟ್‌ ಅಂಗಳದಲ್ಲಿರುವ ಕಾರಣ ನಿರೀಕ್ಷೆಯಂತೆ ಏಪ್ರಿಲ್ 24ರಂದು 10ನೇ ತರಗತಿ ಫಲಿತಾಂಶ 2026 (SSLC Exam Results 2026) ಪ್ರಕಟವಾಗುವುದು ಅನುಮಾನ ಎನ್ನಲಾಗಿದೆ.

ನ್ಯಾಯಾಲಯದಲ್ಲಿ ಸದರಿ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯು ಏಪ್ರಿಲ್ 21ರಂದು ನಡೆಯಲಿದೆ. ಅದಾದ ಬಳಿಕ ಕೋರ್ಟ್‌ನಿಂದ ಯಾವ ನಿರ್ಧಾರ (ತೀರ್ಪು) ಪ್ರಕಟವಾಗುತ್ತದೆ ಎಂಬುದರ ಮೇಲೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (KSEAB) ಹತ್ತನೇ ತರಗತಿ ಫಲಿತಾಂಶ ಬಿಡುಗಡೆಗೆ ಸಿದ್ಧವಾಗಲಿದೆ.

SSLC 2026 Result

ಮರುಪರಶೀಲನೆಗೆ ಸರ್ಕಾರ ಮೇಲ್ಮನವಿ

ರಾಜ್ಯ ಶಿಕ್ಷಣ ಇಲಾಖೆಯು ಹತ್ತನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ತೀರ್ಮಾನಕ್ಕೆ ಬಂದಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಕೋರ್ಟ್‌, ತೃತೀಯ ಭಾಷೆಗೆ ಗ್ರೇಡ್ ಬದಲು ಮೊದಲಿನಂತೆ ಅಂಕಗಳನ್ನು ನೀಡಲು ಅನುಮತಿ ನೀಡಿತ್ತು. ಇನ್ನೇನು ಎಲ್ಲವು ಸರಿ ಹೋಯಿತು ಎನ್ನುವಷ್ಟರಲ್ಲಿ ಈ ಆದೇಶವನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ವಿಚಾರಣೆ ನಾಳೆ ಏಪ್ರಿಲ್ 21ರಂದು ಹೈಕೋರ್ಟ್‌ ನಡೆಯಲಿದೆ.

CBSE 10 Results 2025: ಸಿಬಿಎಸ್‌ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್ಸ್ ಪಟ್ಟಿ ಇಲ್ಲಿದೆ
CBSE 10 Results 2025: ಸಿಬಿಎಸ್‌ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್ಸ್ ಪಟ್ಟಿ ಇಲ್ಲಿದೆ

ಏಪ್ರಿಲ್ 24ಕ್ಕೆ ಫಲಿತಾಂಶ ಬಿಡುಗಡೆ ಅನುಮಾನ ಏಕೆ?

ಹೈಕೋರ್ಟ್ ವಿಚಾರಣೆಯಲ್ಲಿ ವಾದ ವಿವಾದ ಆಲಿಸಿದ ಬಳಿಕ ಹೊರ ಬೀಳುವ ತೀರ್ಪಿನ ಆಧಾರದಲ್ಲಿ ಪರೀಕ್ಷಾ ಮಂಳಡಿಯು ಫಲಿತಾಂಶ ಪ್ರಕಟಿಸಬೇಕಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಸುಮಾರು 09 ಲಕ್ಷ ವಿದ್ಯಾರ್ಥಿಗಳ ಮೌಲ್ಯಮಾಪನ ಬಹುತೇಕ ಪೂರ್ಣಗೊಂಡಿದೆ. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರು ಅಂಕಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಿದ್ದಾರೆ. ಈ ನಡುವೆ ಸರ್ಕಾರ ಕೋರ್ಟ್‌ಗೆ ಮೇಲ್ಮನವಿ ಮಾಡಿದ್ದು, ಕೋರ್ಟ್ ಯಾವ ಅಂಕಗಳ ಆಧಾರದಲ್ಲಿ ಪರಿಗಣಿಸಿ ಎನ್ನುತ್ತೋ ಅಥವಾ ಗ್ರೇಡ್ ನೀಡುವಂತೆ ಸೂಚಿಸುತ್ತೋ ಎನ್ನುವುದರ ಮೇಲೆ ಫಲಿತಾಂಶ ಬಿಡುಗಡೆಯು ನಿಂತಿದೆ. ಈ ಕಾರಣಕ್ಕೆ ಏಪ್ರಿಲ್ 24ಕ್ಕೆ ಪ್ರಕಟವಾಗುವುದು ಅನುಮಾನ ಎನ್ನಲಾಗುತ್ತಿದೆ.

ಹಿಂದಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಿದರೆ ಅದು ಒಟ್ಟು ಅಂಕಗಳ ಮೇಲೆ ಪರಿಣಾಮ ಬೀರುತ್ತದೆ. ಕಾಲೇಜು ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಇನ್ನೊಂದೆಡೆ ಸಿಬಿಎಸ್‌ಇ ಫಲಿತಾಂಶ ಹೊರ ಬಿದ್ದಿದೆ, ಪದವಿ ಪೂರ್ವ ಕಾಲೇಜುಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶಗಳ ಮೇಲೆ ಕಣ್ಣಿಟ್ಟಿವೆ.

ಚಿರತೆಯಿಂದ ಅತ್ತೆ ರಕ್ಷಿಸಿದ ಸೊಸೆಗೆ ಸಿಗಲಿದೆ 'ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ': ಲಕ್ಷ್ಮೀ ಹೆಬ್ಬಾಳ್ಕರ್
ಚಿರತೆಯಿಂದ ಅತ್ತೆ ರಕ್ಷಿಸಿದ ಸೊಸೆಗೆ ಸಿಗಲಿದೆ 'ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ': ಲಕ್ಷ್ಮೀ ಹೆಬ್ಬಾಳ್ಕರ್

ಮೌಲ್ಯಮಾಪನ ಪೂರ್ಣ

ರಾಜ್ಯದಲ್ಲಿ ಪ್ರಸ್ತಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆದಿದ್ದವು. ಈ ಪರೀಕ್ಷೆಯಲ್ಲಿ ಒಟ್ಟು 09,02,889 ಮಂದಿ ಮಕ್ಕಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಸುಮಾರು 2000 ದಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗಿದೆ. ಬಹುತೇಕ ಮೌಲ್ಯಮಾಪನವು ಪೂರ್ಣಗೊಂಡಿದ್ದು, ಫಲಿತಾಂಶ ಇನ್ನೇನು ಬಿಡುಗಡೆ ಆಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+