ಜಯಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಖರ್ಚು ಮಾಡಿದ್ದು 5 ಕೋಟಿ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ 16: ಬರೋಬ್ಬರಿ ಎರಡು ದಶಕಗಳ ಕಾಲ ತನಿಖೆ, ವಿಚಾರಣೆ, ರಾಜಕೀಯ ದೊಂಬರಾಟಗಳನ್ನು ದಾಟಿ ಕೊನೆಗೂ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಪೂರ್ಣ ವಿರಾಮ ಹಾಕಲಾಗಿದೆ. ಇದೀಗ ಪ್ರಕರಣದಲ್ಲಾದ ಖರ್ಚನ್ನು ಕರ್ನಾಟಕ ತಮಿಳುನಾಡು ಸರಕಾರದಿಂದ ಪಡೆದುಕೊಳ್ಳಬೇಕಾಗಿದೆ.

2003 ರಲ್ಲಿ ಸುಪ್ರಿಂ ಕೋರ್ಟ್ ಈ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಿತ್ತು. ತಮಿಳುನಾಡಿನಲ್ಲಿ ಸರಿಯಾಗಿ ವಿಚಾರಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿತ್ತು. ಹೀಗೆ 2003ರಿಂದ ಪ್ರಕರಣದ ಎಲ್ಲಾ ಖರ್ಚು ವೆಚ್ಚಗಳನ್ನು ಕರ್ನಾಟಕ ಸರಕಾರವೇ ಭರಿಸುತ್ತಾ ಬಂದಿದೆ.[ಜಯಲಲಿತಾ 100 ಕೋಟಿ ದಂಡವನ್ನು ಕೊರ್ಟ್ ಹೀಗೆ ವಸೂಲಿ ಮಾಡುತ್ತೆ!]

Karnataka spent over Rs 5 conducting Jayalalitha DA case

ಕೋರ್ಟ್ ಹಾಲ್ ಸಿದ್ಧಪಡಿಸುವುದು, ನ್ಯಾಯಾಧೀಶರ ಸಂಬಳ, ಅನುವಾದ ಮಾಡುವ ವೆಚ್ಚ, ಲಾಯರ್ ಗಳ ಫೀಸು ಎಂದು 2015ರ ಅಂತ್ಯಕ್ಕೆ ಪ್ರಕರಣದಲ್ಲಿ ಕರ್ನಾಟಕ ಸರಕಾರ ಬರೋಬ್ಬರಿ 5 ಕೋಟಿ ಖರ್ಚು ಮಾಡಿದೆ.

ಇದು ಕೋರ್ಟಗಳ ಖರ್ಚಾದರೆ ಇನ್ನೂ ಹಲವು ವೆಚ್ಚಗಳನ್ನು ಕರ್ನಾಟಕ ಸರಕಾರವೇ ಭರಿಸಿದೆ. ಅವುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಂತಾದವು ಸೇರಿದೆ. ಈಗಾಗಲೇ ಕಾನೂನು ಸಚಿವ ಟಿಬಿ ಜಯಚಂದ್ರ, "ಖರ್ಚುಗಳನ್ನು ಲೆಕ್ಕ ಹಾಕಲಾಗುತ್ತಿದೆ. ನಾವೀಗಾಗಲೇ ದೊಡ್ಡ ಮೊತ್ತದ ಹಣ ಖರ್ಚು ಮಾಡಿದ್ದೇವೆ. ವೆಚ್ಚಗಳನ್ನು ಪಾವತಿಸುವಂತೆ ತಮಿಳುನಾಡು ಸರಕಾರ ಪತ್ರ ಬರೆಯಲಿದ್ದೇವೆ," ಎಂದು ತಿಳಿಸಿದ್ದಾರೆ.[ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಕೈದಿ ನಂಬರ್ 9934]

ಖರ್ಚುಗಳ ಪಟ್ಟಿ ಒಮ್ಮೆ ಅಂತಿಮವಾದ ನಂತರ ಕರ್ನಾಟಕ ಸರಕಾರ ತಮಿಳುನಾಡು ಮುಖ್ಯಕಾರ್ಯದರ್ಶಿಗೆ ಖರ್ಚು ವೆಚ್ಚಗಳನ್ನು ಪಾವತಿಸುವಂತೆ ಪತ್ರ ಬರೆಯಲಿದೆ. ಸುಪ್ರಿಂ ಕೋರ್ಟಿನ ಆದೇಶದಂತೆ ಕರ್ನಾಟಕ ಸರಕಾರಕ್ಕೆ ಈ ಹಣವನ್ನು ತಮಿಳುನಾಡು ಪಾವತಿ ಮಾಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the two decade old Jayalalithaa disproportionate assets case finally coming to an end, Karnataka has decided to seek a reimbursement from Tamil Nadu. Karnataka has borne all the expenses towards this case since 2003. Till 2015 the cost incurred by Karnataka was at Rs 5 crore.
Please Wait while comments are loading...