Get Updates
Get notified of breaking news, exclusive insights, and must-see stories!

ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶಕ್ಕೆ ನಂಬರ್ 1

ಬೆಂಗಳೂರು, ಆಗಸ್ಟ್ 21: ಈಗ ದೇಶದಲ್ಲೇ ಅತೀ ಹೆಚ್ಚು ಆನೆಗಳಿರುವುದು ನಮ್ಮ ಕರ್ನಾಟಕದಲ್ಲಿ. ಹುಲಿಗಳ ನಂತರ ಇದೀಗ ಕರ್ನಾಟಕದಲ್ಲೇ ಅತೀ ಹೆಚ್ಚಿನ ಆನೆಗಳಿವೆ. 'ಆನೆ ಗಣತಿ 2017'ರ ಅಂಕಿ ಅಂಶಗಳಲ್ಲಿ ಇದು ಬಯಲಾಗಿದೆ.

ಗಣತಿ ಪ್ರಕಾರ ಕರ್ನಾಟಕದಲ್ಲಿ 6,049 ಆನೆಗಳಿದ್ದರೆ ಎರಡನೇ ಸ್ಥಾನದಲ್ಲಿರುವ ಅಸ್ಸಾಂನಲ್ಲಿ 5,719 ಆನೆಗಳಿವೆ. ಮೂರನೇ ಸ್ಥಾನದಲ್ಲಿ ಕೇರಳ ಇದ್ದು, ಅಲ್ಲಿ 3,054 ಆನೆಗಳಿವೆ.

Karnataka’s elephant population goes up to 6,049

ಒಟ್ಟಾರೆ ದಕ್ಷಿಣ ಭಾರತದಲ್ಲಿ 11,960 ಆನೆಗಳಿದ್ದು ದೇಶದ್ಲಲೇ ಮೊದಲ ಸ್ಥಾನದಲ್ಲಿದೆ. ಈಶಾನ್ಯ ಭಾರತದಲ್ಲಿ 10,139, ಮಧ್ಯ ಪೂರ್ವ ಭಾಗದಲ್ಲಿ 3,128 ಮತ್ತು ಉತ್ತರ ಭಾಗದಲ್ಲಿ 2,085 ಆನೆಗಳಿವೆ.

ರಾಜ್ಯದ ನಾಗರಹೊಳೆ, ಬಂಡೀಪುರ ಮತ್ತು ಭದ್ರಾ ಅಭಯಾರಣ್ಯಗಳಲ್ಲಿ ಹೆಚ್ಚಿನ ಆನೆಗಳಿರುವುದು ತಿಳಿದು ಬಂದಿದೆ. ಜತೆಗೆ ಎಲ್ಲಾ ಅರಣ್ಯ ವಲಯಗಳಲ್ಲೂ ಆನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂಬುದು ಈ ಬಾರಿಯ 7ನೇ ಆನೆ ಗಣತಿಯಿಂದ ತಿಳಿದು ಬಂದಿದೆ.

Karnataka’s elephant population goes up to 6,049

ಆನೆಗಳ ಸಂಖ್ಯೆ ಹೆಚ್ಚಾಗಿರುವುದು ಅರಣ್ಯ ಇಲಾಖೆ ಶ್ಲಾಘನೆಗೆ ಪಾತ್ರವಾಗಿದೆ. ಮೇಲಿಂದ ಮೇಲೆ ಕಾಡ್ಗಿಚ್ಚು, ಮಾನವ ಮತ್ತು ಆನೇಗಳ ಸಂಘರ್ಷ, ಹಲವು ಆನೆಗಳ ನಿಗೂಢ ಸಾವಿನ ಮಧ್ಯೆಯೂ ಆನೆಗಳ ಸಂಖ್ಯೆ ಹೆಚ್ಚಾಗಿರುವುದು ನಿಸರ್ಗಪ್ರಿಯರ ಮೆಚ್ಚುಗೆ ಗಳಿಸಿದೆ.

Karnataka’s elephant population goes up to 6,049

ಈ ಹಿಂದೆ ಹುಲಿ ಗಣತಿಯಲ್ಲೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಹುಲಿಗಳು ಕಂಡು ಬಂದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+