ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ನಿಲ್ದಾಣದಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಲು ನೂತನ ಆ್ಯಪ್

By Nayana
|
Google Oneindia Kannada News

ಬೆಂಗಳೂರು, ಮೇ 1: ರೈಲುಗಳು ಅಥವಾ ರೈಲ್ವೆ ಪ್ಲಾಟ್ ಫಾರಂಗಳಲ್ಲಿ ಜನಸಂದಣಿ ನಡುವೆ ಮಕ್ಕಳು ಕಾಣಿಯಾಗುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಇಂತಹ ಸಂದರ್ಭದಲ್ಲಿ ಕಾಣೆಯಾದ ಮಕ್ಕಳ ತುರ್ತು ಪತ್ತೆಗೆ ನೆರವಾಗುವಂತೆ ಇದೇ ಮೊದಲ ಬಾರಿಗೆ ರೈಲ್ವೆ ಸುರಕ್ಷಾ ದಳ (ಆರ್‌ಪಿಎಫ್) ರಿಯಲ್ ಟೈಮ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಅಳವಡಿಸಲು ಮುಂದಾಗಿದೆ.

ದೂರುಗಳ ಸುರಿಮಳೆ: ಬಿಎಂಟಿಸಿ ಆ್ಯಪ್ ಮೇಲ್ದರ್ಜೆಗೇರಿಸಲು ಚಿಂತನೆದೂರುಗಳ ಸುರಿಮಳೆ: ಬಿಎಂಟಿಸಿ ಆ್ಯಪ್ ಮೇಲ್ದರ್ಜೆಗೇರಿಸಲು ಚಿಂತನೆ

ಸದ್ಯ ತಮಿಳುನಾಡಿನ ಗುಪ್ತಚರ ಇಲಾಖೆ ಹಾಗೂ ತಿರುಪತಿ ಪೊಲೀಸರು ಮಾತ್ರ ಈ ಮಾದರಿಯ ಆ್ಯಪ್ ಬಳಕೆ ಮಾಡುತ್ತಿದ್ದು, ರೈಲ್ವೆ ಪೊಲೀಸರು ಕರ್ನಾಟಕದಲ್ಲಿ ಬಳಸಲು ಮುಂದಾಗಿದ್ದಾರೆ. ರೈಲ್ವೆ ಸುರಕ್ಷಾ ದಳ
ಅಳವಡಿಸಿಕೊಳ್ಳಲಿರುವ ಈ ಆ್ಯಪ್ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಖೋಯಾ-ಪಾಯಾ ವೆಬ್‌ಸೈಟ್ ಜತೆ ಲಿಂಕ್ ಆಗಲಿದೆ.

Karnataka RPF first to use app for tracking missing kids

ಆ ವೆಬ್‌ಸೈಟ್‌ನಲ್ಲಿ ಕಾಣಿಯಾದ 3.5 ಲಕ್ಷ ಮಕ್ಕಳ ಮಾಹಿತಿ ಅಡಕವಾಗಿದೆ. ಇದರಿಂದ ತಪ್ಪಿಸಿಕೊಂಡ ಮಕ್ಕಳ ಕುರಿತ ಮಾಹಿತಿ ಕ್ಷಣಾರ್ಧದಲ್ಲಿ ರೈಲ್ವೆ ಪೊಲೀಸರಿಗೆ ಲಭ್ಯವಾಗಲಿದೆ. ಇದರಿಂದ ಮಕ್ಕಳನ್ನು ಪತ್ತೆ ಮಾಡಲು ನೆರವಾಗುತ್ತದೆ ಎನ್ನುತ್ತಾರೆ ರೈಲ್ವೆ ಕರ್ನಾಟಕ ಡಿಐಜಿ ಡಿ.ಬಿ.ಕಸರ್.

ರೈಲ್ವೆ ಪೊಲೀಸರಿಗೆ ಯಾವುದಾದರೂ ಮಗುವಿನ ಮಾಹಿತಿ ಸಿಕ್ಕ ಕೂಡಲೇ ಆ್ಯಪ್ ಮುಖಾಂತರ ಮಗುವಿನ ಫೋಟೊವನ್ನು ಇಲಾಖೆಯ ವೆಬ್ ಸೈಟ್‌ಗೆ ರವಾನಿಸಲಾಗುವುದು. ಆಗ ಆ ಮಗುವಿನ ಪೋಷಕರು ಅಥವಾ ಸಂಬಂಧಿಗಳೊಂದಿಗೆ ಮಾಹಿತಿ ವಿನಿಮಿಯಕ್ಕೆ ನೆರವಾಗಲಿದೆ. ಇದರಿಂದ ರಿಯಲ್ ಟೈಮ್ ಪತ್ತೆಗಾರಿಕೆ ಮಾಹಿತಿ ಸಿಗಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರಾಯೋಗಿಕಾಗಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ರೈಲು ನಿಲ್ದಾಣಗಳಲ್ಲಿ ಮುಂದಿನ 15 ದಿನಗಳೊಳಗಾಗಿ ಈ ಆ್ಯಪ್ ಬಳಕೆ ಆರಂಭವಾಗಲಿದೆ. ಮುಂದೆ ಎಲ್ಲೆಡೆ ವಿಸ್ತರಿಸಲು ಆರ್‌ಪಿಎಫ್ ನಿರ್ಧರಿಸಿದೆ.

English summary
To help real-time tracking of missing children across the state, the railway protection force will shortly be deploying an app that will instantly track the background of missing children and help in reuniting them with their families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X