Congress Government: ಮುಂದಿನ ವಾರ ಕೈ ಸರ್ಕಾರ:ಯಾರು ಸಿಎಂ? ಕೈ ಸಂಪುಟದಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಪಟ್ಟಿ!
ಬೆಂಗಳೂರು, ಮೇ 14: ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೇರಿರುವ ಕಾಂಗ್ರೆಸ್ ಮುಂದಿನ ವಾರ ಹೊಸ ಸರ್ಕಾರ ರಚನೆಗೆ ಸಿದ್ದತೆ ನಡೆಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಪೈಪೋಟಿ ಜೋರಾಗಿದ್ದು, ಇಂದು(ಭಾನುವಾರ) ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಜಿದ್ದಾಜಿದ್ದಿಯ ಹೋರಾಟದ ಕಣವಾಗಿದ್ದ ರಾಜ್ಯದಲ್ಲಿ ಎಲ್ಲ ನಿರೀಕ್ಷೆಗಳನ್ನು ಸುಳ್ಳಾಗಿಸಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿದ್ದು, ಹೊಸ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿಚಾರವಾಗಿ ಎಲ್ಲ ಶಾಸಕರಿಗೆ ಭಾನುವಾರ ಬೆಂಗಳೂರಿಗೆ ಬರಲು ಸೂಚನೆ ನೀಡಲಾಗಿದೆ. ಸಂಜೆ 6ಕ್ಕೆ ಶಾಸಕಾಂಗ ಪಕ್ಷದ ಸಭೆಯನ್ನು ಖಾಸಗಿ ಹೋಟೆಲ್ನಲ್ಲಿ ಕರೆಯಲಾಗಿದೆ. ಅಲ್ಲಿ ಎಲ್ಲಾ ಶಾಸಕರ ಅಭಿಪ್ರಾಯವನ್ನ ಸಂಗ್ರಹಿಸಲಾಗಿದ್ದು, ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಗ್ರೀನ್ ಸಿಗ್ನಲ್ ನೀಡಿದ್ರೆ ಬುಧವಾರ ಅಥವಾ ಗುರುವಾರ ಅಧಿಕಾರದ ಪ್ರಮಾಣವಚನ ಸ್ವೀಕರಿಸುವ ಕುರಿತು ಕಾಂಗ್ರೆಸ್ ಸಿದ್ದತೆಯನ್ನ ಮಾಡಿಕೊಳ್ಳಲಿದೆ.

ಇನ್ನೂ ಕಾಂಗ್ರೆಸ್ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಮೊದಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ದೆಹಲಿ ನಾಯಕರ ಜೊತೆಗೆ ಚರ್ಚೆ ನಡೆಸಿದ ಬಳಿಕ ಸಂಪುಟ ರಚನೆಗೆ ತಯಾರಿ ನಡೆಸಲಾವುದು ಎಂದು ಹೇಳಲಾಗಿದೆ. ಇತ್ತ ಒಂದೇ ಹಂತದಲ್ಲಿ 32 ಜನರನ್ನ ಸಂಪುಟಕ್ಕೆ ಸೇರಿಸುವ ನಿಟ್ಟಿನಲ್ಲಿ ಚಿಂತಿಸಿದ್ದಾರೆ. ಒಂದು ವೇಳೆ ಹೈಕಮಾಂಡ್ ಎರಡು ಹಂತದಲ್ಲಿ ಸಂಪುಟ ರಚನೆ ಮಾಡಲು ಅವಕಾಶ ಮಾಡಿಕೊಟ್ಟರೇ ಎರಡು ಕಂತುಗಳಲ್ಲಿ ಸಂಪುಟ ವಿಸ್ತರಣೆಯ ಸಾಧ್ಯತೆ ಇದೆ ಎನ್ನಲಾಗಿದೆ.
ಯಾರಿಗೆ ಯಾವ ಹುದ್ದೆ?
ಮುಖ್ಯಮಂತ್ರಿ: ಸಿದ್ದರಾಮಯ್ಯ
ಉಪ ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಸಂಪುಟದಲ್ಲಿರುವ ಸಂಭಾವ್ಯ ಸಚಿವರ ಪಟ್ಟಿ?
ಬಿ.ಕೆ. ಹರಿಪ್ರಸಾದ್
ಕೆ.ಎಚ್. ಮುನಿಯಪ್ಪ
ಆರ್.ವಿ. ದೇಶಪಾಂಡೆ
ಯು.ಟಿ. ಖಾದರ್
ಎಂ.ಬಿ.ಪಾಟೀಲ್
ರಾಮಲಿಂಗಾರೆಡ್ಡಿ
ಕೃಷ್ಣ ಬೈರೇಗೌಡ
ಕೆ.ಜೆ. ಜಾರ್ಜ್
ಎಚ್.ಸಿ. ಮಹದೇವಪ್ಪ
ಲಕ್ಷ್ಮಣ ಸವದಿ
ಶಿವಲಿಂಗೇಗೌಡ
ಚಲುವರಾಯಸ್ವಾಮಿ
ಡಾ. ಜಿ. ಪರಮೇಶ್ವರ್
ಪ್ರಿಯಾಂಕ್ ಖರ್ಗೆ
ಸತೀಶ್ ಜಾರಕಿಹೊಳಿ
ಎಚ್.ಕೆ. ಪಾಟೀಲ್
ಲಕ್ಷ್ಮೀ ಹೆಬ್ಬಾಳ್ಕರ್
ಎಚ್.ವೈ, ಮೇಟಿ
ಅಬ್ಬಯ್ಯ ಪ್ರಸಾದ್
ನಾಗೇಂದ್ರ
ಎಸ್.ಎಸ್. ಮಲ್ಲಿಕಾರ್ಜುನ್
ಕೊತ್ತೂರು ಮಂಜುನಾಥ್
ನರೇಂದ್ರ ಸ್ವಾಮಿ
ಆರ್ ವಿ ತಿಮ್ಮಾಪುರ.
ಈಶ್ವರ್ ಖಂಡ್ರೆ
ದಿನೇಶ್ ಗುಂಡೂರಾವ್
ತನ್ವೀರ್ ಸೇಠ್
ಅಜಯ್ ಸಿಂಗ್
ಪುಟ್ಟರಂಗ ಶೆಟ್ಟಿ
ಜಮೀರ್ ಅಹಮ್ಮದ್ ಖಾನ್












Click it and Unblock the Notifications