ಕೇರಳ ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್! ಕನ್ನಡಿಗರ ಕೋಪಕ್ಕೆ ಕಾರಣವೇನು?

ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದುರಂತದಲ್ಲಿ 148 ಜನ ಮೃತಪಟ್ಟಿದ್ದು, 150 ಜನ ಗಾಯಗೊಂಡಿದ್ದಾರೆ, ಇನ್ನೂ ಸಾಕಷ್ಟು ಮಂದಿ ಭೂಕುಸಿತದಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕೇರಳದ ಘಟನೆ ನಡೆಯಬಾರದಿತ್ತು, ಅದೊಂದು ಭೀಕರ ದುರಂತ. ಆದರೆ, ಕರ್ನಾಟಕ ಸರ್ಕಾರದ ನಡೆ ಈಗ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಕಾರಣ, ಕೇರಳ ದುರಂತಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸುತ್ತಿರುವ ರೀತಿ.

Karnataka Residents Frustrated with Government s Neglect Amid Kerala s Landslide Support

ವಯನಾಡು ಭೂಕುಸಿತದಲ್ಲಿ ಕನ್ನಡಿಗರು ಕೂಡ ಸಿಲುಕಿದ್ದು, ಅವರ ರಕ್ಷಣೆಗೆ ಕರ್ನಾಟಕ ಸರ್ಕಾರ ಕ್ರಮ ತೆಗೆದುಕೊಳ್ಳುವುದು ಸರಿ. ಆದರೆ ಕರ್ನಾಟಕದಲ್ಲಿ ಏನೂ ಆಗೇ ಇಲ್ಲ ಎನ್ನುವಂತೆ ನಿರ್ಲಕ್ಷ್ಯ ಮಾಡುತ್ತಿರುವುದು ಎಷ್ಟು ಸರಿ.

ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಗುಡ್ಡಗಳು ಕುಸಿಯುತ್ತಿವೆ. ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ನೆರೆ ಬಂದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇದೆಲ್ಲವನ್ನೂ ಬಿಟ್ಟು ಕೇರಳದ ದುರಂತದ ಬಗ್ಗೆ ಹಚ್ಚು ಕಾಳಜಿ ಮಾಡುತ್ತಿದೆ ಎನ್ನುವುದು ಕನ್ನಡಿಗರ ಸಿಟ್ಟಿಗೆ ಕಾರಣ.

ಎಕ್ಸ್‌ನಲ್ಲಿ ಟೀಕೆಗಳ ಸುರಿಮಳೆ

ಸಚಿವ ಕೆ.ಜೆ. ಜಾರ್ಜ್ ಕರ್ನಾಟಕದ ಶಿರೂರಿನಲ್ಲಿ ಗುಡ್ಡ ಕುಸಿದಾಗ ಒಂದು ಪೋಸ್ಟ್ ಕೂಡ ಮಾಡದೇ ಸುಮ್ಮನಿದ್ದವರು, ಈಗ ಕೇರಳ ದುರಂತದ ಬಗ್ಗೆ ಕಂಬನಿ ಮಿಡಿದಿದ್ದಾರೆ. ಕನ್ನಡಿಗರ ಜೀವಕ್ಕೆ ಬೆಲೆಯಿಲ್ಲವಾ, ಅಥವಾ ನೂರಾರು ಜನ ಸತ್ತರೆ ಮಾತ್ರ ನಿಮ್ಮ ಗಮನಕ್ಕೆ ಬರುವುದಾ ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ.

ರಾಹುಲ್ ಗಾಂಧಿ ಅವರ ಕ್ಷೇತ್ರವೆಂದು ವಯನಾಡು ಮೇಲೆ ಇಷ್ಟೊಂದು ಕಾಳಜಿ ತೋರಿಸುತ್ತಿರುವುದಾ? ಹೈಕಮಾಂಡ್ ಸೂಚನೆಯಂತೆ ಕೇರಳಕ್ಕೆ ಸಹಾಯ ಮಾಡುತ್ತಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡಲಾಗಿದೆ.

ಶಿರೂರು ಗುಡ್ಡ ಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ನಿರ್ಲಕ್ಷ್ಯ ತೋರಿ ಕೇರಳದ ದುರಂತಕ್ಕೆ ಇಷ್ಟೊಂದು ತುರ್ತಾಗಿ ಸ್ಪಂದಿಸಿದ್ದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳನ್ನು ಕನ್ನಡಿಗರು ಕೇಳಿದ್ದಾರೆ.

ಮಾನವೀಯತೆ ಮೇಲೆ ಕೇರಳಕ್ಕೆ ಸಹಾಯ ಮಾಡಿ ತಪ್ಪಲ್ಲ, ಆದರೆ ನಮ್ಮ ರಾಜ್ಯದಲ್ಲೇ ಪ್ರವಾಹ ಪರಿಸ್ಥಿತಿ, ಹಲವು ಕಡೆ ಗುಡ್ಡ ಕುಸಿತ ಸಂಭವಿಸಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆ ಎನ್ನುವ ಆತಂಕ ಇರುವಾಗ ರಾಜ್ಯದ ಬಗ್ಗೆಯೋ ಯೋಚಿಸಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+