ಕರ್ನಾಟಕದಲ್ಲಿ ಕೋವಿಡ್ ಸ್ಫೋಟ; 4,225 ಹೊಸ ಪ್ರಕರಣ

ಬೆಂಗಳೂರು, ಮಾರ್ಚ್ 31; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆಯ ಪರಿಣಾಮ ಜೋರಾಗಿದೆ. ರಾಜ್ಯದಲ್ಲಿ ಒಂದೇ ದಿನ 4,225 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 28,248.

ಆರೋಗ್ಯ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇಂದು 1492 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 26 ಜನರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 9,97,004ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇದುವರೆಗೂ 956170 ಜನರು ಗುಣಮುಖಗೊಂಡಿದ್ದಾರೆ. 12567 ಜನರು ಮೃತಪಟ್ಟಿದ್ದಾರೆ. 266 ಜನರು ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

 Karnataka Reported 4,225 New COVID 19 Cases

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ 2,928 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 4,34,827ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 19,613. ಇಂದು ಮೃತಪಟ್ಟವರು 18 ಜನ.

ಅತಿ ಹೆಚ್ಚು ಹೊಸ ಪ್ರಕರಣಗಳು; ಬೀದರ್ 159, ಕಲಬುರಗಿ 137, ಮೈಸೂರು 142, ತುಮಕೂರು 138. ಬಳ್ಳಾರಿ 68, ಬೆಂಗಳೂರು ಗ್ರಾಮಾಂತರ 80, ದಕ್ಷಿಣ ಕನ್ನಡ 43, ಧಾರವಾಡ 62, ಹಾಸನ 74.

ಕಡಿಮೆ ಪ್ರಕರಣಗಳು; ಬಾಗಲಕೋಟೆ 8, ಚಾಮರಾಜನಗರ 3, ಹಾವೇರಿ 1, ರಾಮನಗರ 6, ಯಾದಗಿರಿ 10.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+