Rain Alert: ಮಳೆ.. ಮಳೆ.. ಕರ್ನಾಟಕದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ!

ಮಳೆ.. ಮಳೆ.. ಮಳೆ.. ನೋಡ್ರಪ್ಪಾ ಇಷ್ಟುದಿನ ನಾವು ಕಾಯುತ್ತಿದ್ದ ಬಹು ನಿರೀಕ್ಷಿತವಾದ ಭರ್ಜರಿ ಮಳೆ ಬಂದೇ ಬಿಟ್ಟಿದೆ. ಇಂದು ಸುರಿದ ಭಾರಿ ಮಳೆಗೆ ಇಡೀ ದಕ್ಷಿಣ ಕರ್ನಾಟಕವೇ ಒದ್ದೆಯಾಗಿ ಹೋಗಿದೆ. ಅಷ್ಟಕ್ಕೂ ಹಿಂಗೆ, ಸೋಷಿಯಲ್ ಮೀಡಿಯಾದಲ್ಲಿ ಜನರು ಇವತ್ತು ಚರ್ಚೆ ಮಾಡುತ್ತಿದ್ದಾರೆ. ಯಾಕಂದ್ರೆ ಇವತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಭರ್ಜರಿ ಮಳೆಯಾಗಿದೆ. ಹಾಗಾದ್ರೆ ಮಳೆ ವಿಡಿಯೋ ನೀವು ನೋಡಿದ್ರಾ? ಬನ್ನಿ ನೋಡೋಣ.

ಇವತ್ತು ಬೆಳಗ್ಗೆ ಜನರಿಗೆ ಬಿಸಿ ಬಿಸಿ ಸುಡು ಬಿಸಿಲು ಕಾಡುತ್ತಿತ್ತು. ಜನರು ಮಧ್ಯಾಹ್ನದ ತನಕ ಸೂರ್ಯನಿಗೆ ಶಾಪ ಹಾಕಿಕೊಂಡೇ ಕೂತಿದ್ದರು. ಆದರೆ ದಿಢೀರ್ ಅಂತಾ ಮಧ್ಯಾಹ್ನ 2 ಗಂಟೆ ನಂತರ ಮಳೆಯ ಅಬ್ಬರ ಶುರುವಾಯಿತು. ನೋಡ ನೋಡುತ್ತಲೇ ಭೀಕರವಾಗಿ ಮಳೆಯೂ ಬಂತು. ಈ ಮೂಲಕ ಬಿಸಿಬಿಸಿ ಆಗಿದ್ದ ಭೂಮಿಗೆ ಒಂದಷ್ಟು ನೆಮ್ಮದಿಯೂ ಸಿಕ್ಕಾಗಿದೆ. ಈ ಸಮಯದಲ್ಲಿ ವಾತಾವರಣ ಕೂಡ ತಂಪಾಗಿದೆ. ಹಾಗಾದ್ರೆ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಮಳೆ ಬಂತು ಗೊತ್ತಾ? ಬನ್ನಿ ಮಳೆಯ ವಿಡಿಯೋ ಸಮೇತ ಸುದ್ದಿ ತಿಳಿಯೋಣ.

Karnataka Received Heavy Rain On May 3 Of 2024

ಮಳೆ.. ಮಳೆ.. ಮಳೆ!

ಇವತ್ತು ಯಾವ ಜಿಲ್ಲೆಗೆ ಮಳೆ ಬಂದು ಖುಷಿ ಆಯ್ತೋ ಇಲ್ವೋ ಗೊತ್ತಿಲ್ಲ, ಆದರೆ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ನೆಮ್ಮದಿ ನೀಡಿತು. ಅದರಲ್ಲೂ ಇಷ್ಟುದಿನ ಮಳೆ, ನೀರು ಇಲ್ಲದೆ ಪರದಾಡಿದ್ದ ನಮ್ಮ ಜನರಿಗೆ ಭರ್ಜರಿ ಮಳೆಯ ರಸದೌತಣ ಸಿಕ್ಕಿತು. ನೋಡ ನೋಡುತ್ತಲೇ ಇಡೀ ಬೆಂಗಳೂರಿಗೆ ಮುತ್ತಿಗೆ ಹಾಕಿದ ಮಳೆಯ ಮೋಡಗಳು, ಗಂಟೆಗಟ್ಟಲೇ ಮಳೆ ಸುರಿಸಿದವು. ಈ ಮೂಲಕ ಭರ್ಜರಿ ಮಳೆ ಕಂಡು, ಜನರು ಕೂಡ ಕುಣಿದಾಡಿದರು.

ಮೈಸೂರು ಜಿಲ್ಲೆಯಲ್ಲಿ ಆಲಿಕಲ್ಲು ಮಳೆ

ಹಾಗೇ ಮಂಡ್ಯ & ಮೈಸೂರು ಭಾಗದಲ್ಲಿ ಕೂಡ ಭಾರಿ ಮಳೆ ತಂಪು ಹರಿಸಿದೆ. ಕಾವೇರಿಯ ಮಡಿಲಿನಲ್ಲಿ ಇದ್ದರೂ ನೀರು ಇಲ್ಲದೆ ನರಳಿದ್ದರು ಕನ್ನಡಿಗರು. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಕಾವೇರಿ ನದಿ ಕೂಡ ಬತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿಯೇ, ಮಳೆ ಬರಲಿ ಅಂತಾ ಜನರು ಪ್ರಾರ್ಥನೆ ಮಾಡುತ್ತಿದ್ದರು.

ಹೀಗಾಗಿ ಜನರ ಮನವಿಗೆ ಇಂದು ಮಳೆರಾಯ ಅಸ್ತು ಎಂದ ಕಾರಣಕ್ಕೆ ಮೈಸೂರು & ಮಂಡ್ಯ ಭಾಗದಲ್ಲಿ ಭರ್ಜರಿ ಮಳೆ ಬಂದಿದೆ. ಅಲ್ಲದೆ ಮೈಸೂರಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದೆ. ಅಲ್ಲದೆ ಕೋಲಾರ & ಚಿಕ್ಕಬಳ್ಳಾಪುರ, ತುಮಕೂರಿನ ಕೆಲ ಭಾಗಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆ ಸಿಂಚನ ಆಗಿದೆ.

ಎಸಿ ಸಿಟಿ ಬೆಂಗಳೂರಲ್ಲಿ ನರಳಾಟ!

ಬೆಂಗಳೂರು ಅಂದ್ರೆ 20 ವರ್ಷಗಳ ಹಿಂದೆ ಎಸಿ ಸಿಟಿ ಎಂಬ ಹೆಸರು ಇತ್ತು. ಯಾಕಂದ್ರೆ ಈ ನಮ್ಮ ಬೆಂಗಳೂರು ಬೇಸಿಗೆ ಸಮಯದಲ್ಲೂ ಕೂಲ್ ಕೂಲ್ ಆಗಿ ಇರೋದು. ಆದ್ರೆ ಏನ್ ಮಾಡೋದು, ಬೆಂಗಳೂರು ಈಗ ಕಾಂಕ್ರಿಟ್ ಕಾಡು ಆಗಿದೆ. ಬೆಂಗಳೂರಲ್ಲಿ ಇದ್ದ ಗಿಡ & ಮರ ಎಲ್ಲಾ ನಾಶವಾಗಿ ಹೋಗುತ್ತಿವೆ. ಹೀಗಾಗಿ ಬೆಂಗಳೂರಲ್ಲಿ ಅಂತರ್ಜಲ ಕೂಡ ಕುಸಿದು ಹೋಗಿ, ಕೋಟ್ಯಂತರ ಜನ ನರಳುತ್ತಿದ್ದಾರೆ. ಈ ನಡುವೆ ಮಳೆ ಬೇಕು, ಮಳೆ ಬೇಕು ಅಂತ ದೇವರ ಮೊರೆ ಹೋಗುವ ಪರಿಸ್ಥಿತಿ ಕೂಡ ಬಂದಿತ್ತು. ಇದೀಗ ಜನರ ಮೇಲೆ ಮಳೆರಾಯ ಕರುಣೆ ತೋರಿಸಿ ಮಳೆ ಬರಿಸಿದ್ದಾನೆ.

ಮಳೆ ನೀರು ಸಂಗ್ರಹ ಮಾಡಿ

ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲದ ಆರಂಭಕ್ಕೆ ಇನ್ನು ಕೇವಲ 1 ತಿಂಗಳು ಬಾಕಿ ಇದೆ. ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಈಗಲಾದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.

ನೀರು ವ್ಯರ್ಥವಾಗುವುದನ್ನು ತಪ್ಪಿಸಿ

ಮಳೆ ನೀರು ಅತ್ಯುತ್ತಮ ಜಲಮೂಲ ಎನ್ನಬಹುದು ಯಾಕಂದ್ರೆ ಮಳೆಗಾಲದಲ್ಲಿ ಬೀಳುವ ಭಾರಿ ಮಳೆಯನ್ನ ಸಂಗ್ರಹ ಮಾಡಿಕೊಂಡರೆ ನಿಮಗೆ ಉತ್ತಮ. ಇದಕ್ಕಾಗಿ ಹಲವು ದಾರಿ ಇದೆ. ನಿಮ್ಮ ಮನೆಯ ಮೇಲೆ ಮಳೆ ನೀರು ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬಹುದು. ಇದರಿಂದ, ನಿಮ್ಮ ಮನೆಯು ಕೂಡ ತಂಪು ತಂಪು ಕೂಲ್ ಕೂಲ್ ಆಗಿ ಇರಲು ಸಾಧ್ಯ.

ಅಂತರ್ಜಲ ಮಟ್ಟ ಏರಿಕೆ ಮಾಡಿ

ಕರ್ನಾಟಕದಲ್ಲಿ ಎಲ್ಲೇ ಬೋರ್ ತೆಗೆದರೂ ನೀರು ಸರಿಯಾಗಿ ಸಿಗುತ್ತಿಲ್ಲ. ಇನ್ನು ನೀರು ಸಿಕ್ಕಿರುವ ಹಲವು ಬೋರ್‌ಗಳು ಈಗಾಗಲೇ ಬತ್ತಿ ಹೋಗಿದ್ದು, ಜನರು ಪರದಾಡುತ್ತಿದ್ದಾರೆ. ಹೀಗಾಗಿ ಇಂಗು ಗುಂಡಿ ನಿರ್ಮಾಣವನ್ನ ಮಾಡಿದರೆ ನಿಮಗೆ ನೀರಿನ ಸಮಸ್ಯೆ ಬಹುತೇಕ ಸರಿಯಾದಂತೆ. ಹೀಗಾಗಿ ಸೂಕ್ತವಾಗಿ ಅಂತರ್ಜಲ ಮರುಪೂರ್ಣ ಮಾಡಬೇಕು. ಈ ಮೂಲಕ ಬೋರ್ ನೀರಿನ ಸಮಸ್ಯೆಗು ಮುಕ್ತಿ ಸಿಗಲಿದೆ

ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...

ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ..

ತಂಪು.. ತಂಪು.. ಕೂಲ್.. ಕೂಲ್..!

ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?

ಮುಂಗಾರು ಮಳೆ ಅಬ್ಬರ ಶುರು!

ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+