ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಉದ್ಯೋಗಾಕಾಂಕ್ಷಿಗಳಿಗೆ ಕರವೇಯಿಂದ ಯಶಸ್ವಿ ಶಿಬಿರ

By Mahesh
|
Google Oneindia Kannada News

ಬೆಂಗಳೂರು, ಜ.19: ಕರವೇ ಐಟಿ ಘಟಕದ ವತಿಯಿಂದ 5ನೇ ಉದ್ಯೋಗ ಮಾರ್ಗದರ್ಶನ ಶಿಬಿರ ಇತ್ತೀಚೆಗೆ ಯಶಸ್ವಿಯಾಗಿದೆ. ನಾಡಿನ ವಿವಿಧ ಭಾಗಗಳಿಂದ ಕನ್ನಡದ ಐಟಿ ಉದ್ಯೋಗಾಕಾಂಕ್ಷಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕದ ವತಿಯಿಂದ 'ಐ.ಟಿ. ಕ್ಷೇತ್ರ'ದಲ್ಲಿ ಕೆಲಸ ಹುಡುಕುತ್ತಿರುವವರಿಗಾಗಿ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಲ್ಲಿ ನಡೆಸಲಾಯಿತು. ಬೆಳಿಗ್ಗೆ 9.30 ಯಿಂದ ಮಧ್ಯಾಹ್ನ 1.30 ವರೆಗೂ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಭ್ಯರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. [ಕನ್ನಡಿಗರಿಗೆ ಉದ್ಯೋಗ, ಅದೇ ನಿಜವಾದ ರಾಜ್ಯೋತ್ಸವ]

Karnataka Rakshana Vedike Free Career Guidance Camp report

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಐ.ಟಿ. ಕಂಪನಿಯೊಂದರ ಮುಖ್ಯಸ್ಥರು ಉದ್ಯೋಗ/ಉದ್ಯಮ ಕ್ಷೇತ್ರದಲ್ಲಿ ಮುನ್ನುಗ್ಗಲು ಕನ್ನಡಿಗರು ಬೆಳೆಸಿಕೊಳ್ಳಬೇಕಾದ ಗುಣಗಳ ಬಗ್ಗೆ ಮಾತನಾಡಿ ನೆರಿದಿದ್ದ ಉದ್ಯೋಗಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕರವೇ ಐಟಿ ಘಟಕದ ಪದಾಧಿಕಾರಿಗಳು ನೆರೆದಿದ್ದ ಕನ್ನಡಿಗ ಉದ್ಯೋಗಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಉದ್ಯೋಗದ ವಿಚಾರದಲ್ಲಿ ಕರವೇ ಮಾಡಿರುವ ಹೋರಾಟಗಳು ಮತ್ತು ಕನ್ನಡಿಗರು ಮುನ್ನುಗ್ಗುವ ಸ್ವಭಾವವನ್ನು ಬೆಳೆಸಿಕೊಂಡು ವಿಫುಲ ಉದ್ಯೋಗಾವಕಾಶಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಐ.ಟಿ. ಕ್ಷೇತ್ರದಲ್ಲೇ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಅನೇಕ ಪರಿಣತರು ತಮ್ಮ ಅನುಭವವನ್ನು ಕನ್ನಡದ ಯುವಕ-ಯುವತಿಯಡೊರಡನೆ ಹಂಚಿಕೊಂಡರು. ಐ.ಟಿ. ಕ್ಷೇತ್ರದಲ್ಲಿರುವ ಅನೇಕ ಉಪ-ಕ್ಷೇತ್ರಗಳು, ಅಲ್ಲಿರುವ ಕಂಪನಿಗಳು, ಅಲ್ಲಿನ ಉದ್ಯೋಗಾವಕಾಶಗಳು, ಅವನ್ನು ಪಡೆಯಲು ಬೇಕಾದ ಕೌಶಲ್ಯಗಳು, ನೇಮಕಾತಿ ಪ್ರಕ್ರಿಯೆ, ಅದಕ್ಕೆ ಬೇಕಾದ ತಯಾರಿ, ಸಂದರ್ಶನ ಎದುರಿಸುವ ಬಗೆ, ಇತ್ಯಾದಿ ಎಲ್ಲ ವಿಚಾರಗಳ ಬಗ್ಗೆ ಎಲ್ಲ ಪರಿಣತರು ಸಲಹೆ ಸೂಚನೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಅಭ್ಯರ್ಥಿಗಳನ್ನು ಚಿಕ್ಕ ಚಿಕ್ಕ ಗುಂಪುಗಾಳಾಗಿ ವಿಂಗಡಿಸಿ, ಕೆಲಸ ಪಡೆಯಲು ಬೇಕಾದ ತಯಾರಿಯ ಕುರಿತ ಚರ್ಚೆಗಳನ್ನು ನಡೆಸಿ, ತಮ್ಮೆಲ್ಲರ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕರವೇ ಐ.ಟಿ. ಘಟಕದ ಪದಾಧಿಕಾರಿಗಳು ಮತ್ತು ಕೆಲವು ಐ.ಟಿ. ಕಂಪನಿಗಳ ಮುಖ್ಯಸ್ಥರೂ ಸಹ ಭಾಗಿಯಾಗಿದ್ದರು. (ಒನ್ ಇಂಡಿಯಾ ಸುದ್ದಿ)

English summary
Information Technology unit of Karnataka Rakshana Vedike has organised a free Career Guidance Camp for the job aspirants. The event held at IIWC, BP Wadia road, Basavanagudi, Bengaluru on Jan.17. Here is the report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X