Karnataka Rains: ಚಂಡಮಾರುತ ತೀವ್ರತೆ! ರಾಜ್ಯಾದ್ಯಂತ ಏಪ್ರಿಲ್ 24ರವರೆಗೆ ಭರ್ಜರಿ ಮಳೆ, ಹವಾಮಾನ ವರದಿ

ಬೆಂಗಳೂರು, ಏಪ್ರಿಲ್ 18: ಪೂರ್ವ ಮುಂಗಾರು ಆಗಮಿಸಿದ ಆರಂಭದಿಂದಲೂ ಕರ್ನಾಟಕದಾದ್ಯಂತ ಸಕ್ರಿಯವಾಗಿದೆ. ಆಗಾಗ ಬೆಂಗಳೂರು ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯು ಸುರಿಯುತ್ತಿದೆ. ಈ ಮಳೆ ಆರ್ಭಟ (Karnataka Rain Forecast) ಮುಂದಿನ ಐದು ದಿನಗಳ ಕಾಲ ಮುಂದುವರಿಯಲಿದೆ. ಏಪ್ರಿಲ್ 24ರವರೆಗೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯ ಜೋರು ಅಬ್ಬರ ಕಂಡು ಬರಲಿದೆ. ಮುಂದಿನ ಎರಡು ದಿನ ಸಾಧಾರಣ ಮಳೆ ಆಗಲಿದ್ದು, ನಂತರ ಮತ್ತಷ್ಟು ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಅಬ್ಬರಿಸುತ್ತಿರುವ ಮಳೆ, ಮಲೆನಾಡಿ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿದೆ. ಆದರೆ ಉತ್ತರ ಒಳನಾಡಿನ ಒಣಹವೆಯ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಿರೀಕ್ಷತದಷ್ಟು ಆಗುತ್ತಿಲ್ಲ. ಅಲ್ಲಲ್ಲಿ ಸಾಧಾರಣ ಮಳೆ ಆಗುತ್ತಿದೆ. ರೈತರು ಮುಂಗಾರು ಬಿತ್ತನೆಗೆ ಹೊಲ ಹದ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

Karnataka Rains IMD Predicts Heavy Rain Alert in These Parts of Karnataka until April 24th

ಪೂರ್ವ ಮುಂಗಾರು ಮಳೆಯ ಆರ್ಭಟವು ಹೆಚ್ಚಾಗುವ ಸಂಭವವಿದೆ. ಬಳಗಾಳಕೊಲ್ಲಿ ಸಮುದ್ರದಲ್ಲಿ ಮಾತ್ರವಲ್ಲದೇ ರಾಜಸ್ಥಾನ, ರಾಯಸೀಮಾ ಪ್ರದೇಶಗಳು ಭೂಮಿ ಮೇಲ್ಮೈನಲ್ಲೂ ಉಂಟಾಗಿರುವ ಹವಾಮಾನ ಬದಲಾವಣೆ ಕಾರಣದಿಂದ ಕರ್ನಾಟಕದಲ್ಲಿ ಮಳೆ ಆವರಿಸುವ ಲಕ್ಷಣಗಳು ಗೋಚರಿಸಿವೆ.

ಈ ಜಿಲ್ಲೆಗಳಿಗೆ ಸಾಧಾರಣದಿಂದ ಭಾರೀ ಮಳೆ..

ಮುಂದಿನ 2-3ದಿನ ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೋಲಾರ, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ನಂತರ ಏಪ್ರಿಲ್ 24ರವರೆಗೆ ರಾಜ್ಯಾವ್ಯಾಪಿ ಮಳೆ ಮತ್ತಷ್ಟು ಅಬ್ಬರಿಸಲಿದೆ. ಆಗ ಈ ಮೇಲಿನ ಜಿಲ್ಲೆಗಳು ಒಳಗೊಂಡಂತೆ ಚಿಕ್ಕಬಳ್ಳಾಪುರ, ಹಾಸನ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಗದಗ, ಕೊಪ್ಪಳ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್,ಕಲಬುರಗಿ, ರಾಯಚೂರು, ಯಾದಗಿರಿ ಹೀಗೆ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rains IMD Predicts Heavy Rain Alert in These Parts of Karnataka until April 24th

ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ಯಲಹಂಕ ಸೇರಿದಂತೆ ಅನೇಕ ಭಾಗಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ರಾಜ್ಯಾದ್ಯಂತ ಇದ್ದ ಒಣಹವೆಯ ಪ್ರಮಾಣ ಕೆಲವೆಡೆ ಇಳಿಕೆ ಆಗಿದೆ. ಮಳೆ ಬಂದು ಹೋದ ಬಳಿಕ ಸೆಕೆಯ ವಾತಾವರಣ ನಿರ್ಮಾಣವಾಗುತ್ತಿದೆ. ಮಳೆ ಬೀಳುವ ಪ್ರದೇಶಗಳಲ್ಲಿ ಬಿಸಿಲ ತಾಪ ಕಡಿಮೆಯಾಗಿದ್ದು, ಮಬ್ಬು ವಾತಾವರಣ ಅಲ್ಲಲ್ಲಿ ನಿರ್ಮಾಣವಾಗಿದೆ.

ಸಮುದ್ರ ಮೇಲ್ಮೈನಿಂದ 1.5 ಕಿಲೋ ಮೀಟರ್ ಎತ್ತರದಲ್ಲಿ ಆವರಿಸಿರುವ ಈ ಹವಾಮಾನ ವೈಪರೀತ್ಯಗಳು ಮತ್ತಷ್ಟು ತೀವ್ರಗೊಂಡಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಬಹುದೆಂದು ಹವಾಮಾನ ತಜ್ಞರು ಊಹಿಸಿದ್ದಾರೆ. ಹೀಗಾದಾಗ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+