ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮಳೆ: ಡಿಸೆಂಬರ್‌ 12ವರೆಗೆ ಜಿಲ್ಲಾವಾರು ಸುರಿದ ಗರಿಷ್ಠ ಮಳೆಯ ವಿವರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌, 12: ಮಾಂಡೌಸ್ ಚಂಡಮಾರುತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿದ ಮಳೆ ಸುರಿಯುತ್ತಲೇ ಇದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯೊಂದಿಗೆ ಅತೀವ ಚಳಿಯಿಂದಲೂ ಜನರು ಮನೆಯಲ್ಲಿಯೇ ಕಾಲ ಕಳೆಯುವಂತೆ ಆಗಿದೆ. ಹಾಗೆಯೇ ಡಿಸೆಂಬರ್‌ 12 ರಂದು ಚಾಮರಾಜನಗರ 69 ಮಿಲಿ ಮೀಟರ್‌, ಶಿವಮೊಗ್ಗ, 57.5 ಮಿಲಿ ಮೀಟರ್‌, ಚಿಕ್ಕಮಗಳೂರು 53 ಮಿಲಿ ಮೀಟರ್‌, ತುಮಕೂರು 48.5 ಮಿಲಿ ಮೀಟರ್‌, ಮಂಡ್ಯ 46 ಮಿಲಿ ಮೀಟರ್‌, ಮೈಸೂರು 44.5 ಮಿಲಿ ಮೀಟರ್, ದಾವಣಗೆರೆ 42.5 ಮಿಲಿ ಮೀಟರ್‌, ಹಾಸನ 39ಮಿಲಿ ಮೀಟರ್‌, ಕೋಲಾರ 33 ಮಿಲಿ ಮೀಟರ್, ಬಳ್ಳಾರಿ 31 ಮಿಲಿ ಮೀಟರ್‌ ಹಾಗೂ ಬೆಂಗಳೂರು ನಗರದಲ್ಲಿ 31 ಮಿಲಿ ಮೀಟರ್‌ ಮಳೆ ಆಗಿದೆ ಎಂದು ಕರ್ನಾಟಕ ಹವಾನ ಇಲಾಖೆ ತಿಳಿಸಿದೆ.

ಈಗಾಗಲೇ ಹವಾಮಾನ ವೈಪರಿತ್ಯತೆಯಿಂದ ಹಾಗೂ ಶಾಲಾ ಕಾಲೇಜು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿ ರಜೆ ನೀಡಿದ್ದಾರೆ. ಹಾಗೆಯೇ ಕೋಲಾರ ಜಿಲ್ಲೆಯಲ್ಲಿ ಸೋಮವಾರ (ಡಿಸೆಂಬರ್‌12) ಮಾತ್ರ 1ರಿಂದ 10ರವರೆಗಿನ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ಮಾಹಿತಿ ನೀಡಿದ್ದಾರೆ.

Karnataka rain: 'ಮಾಂಡೌಸ್' ದುರ್ಬಲ, ಡಿ.13ಕ್ಕೆ ಮತ್ತೆ ವೈಪರಿತ್ಯ ಕರ್ನಾಟಕಕ್ಕೆ ಭಾರಿ ಮಳೆKarnataka rain: 'ಮಾಂಡೌಸ್' ದುರ್ಬಲ, ಡಿ.13ಕ್ಕೆ ಮತ್ತೆ ವೈಪರಿತ್ಯ ಕರ್ನಾಟಕಕ್ಕೆ ಭಾರಿ ಮಳೆ

Recommended Video

ಚೆನ್ನೈನಲ್ಲಿ ಸೈಕ್ಲೋನ್ ಹೊಡೆತಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಬೈಕ್ | *Shorts | OneIndia Kannada
ಹಲವು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ

ಹಲವು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ

ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ನಿಂತಿಲ್ಲ. ಕೊರೆಯುವ ಚಳಿಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾನುವಾರ ಕೂಡ ಬೆಂಗಳೂರಿನಲ್ಲಿ ಸಾಧರಣವಾಗಿ ಮಳೆಯಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ನಗರದಲ್ಲಿ ಹಳದಿ ಅಲರ್ಟ್‌ ಮುಂದುವರೆಸಿತ್ತು. ಮಳೆ ಅಥವಾ ಗುಡುಗು ಸಹಿತ ಮಳೆ ಮತ್ತು ಮೋಡ ಕವಿದ ವಾತಾವರಣವು ಡಿಸೆಂಬರ್ 13 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಡಿಸೆಂಬರ್ 13 ರವರೆಗೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು. ಜೊತೆಗೆ ಜೋರಾದ ಗಾಳಿ ಬೀಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ನಿರಂತರ ಮಳೆ, ಬೆಂಗಳೂರಿನಲ್ಲಿ 12 ವರ್ಷಗಳ ಕನಿಷ್ಠ ತಾಪಮಾನನಿರಂತರ ಮಳೆ, ಬೆಂಗಳೂರಿನಲ್ಲಿ 12 ವರ್ಷಗಳ ಕನಿಷ್ಠ ತಾಪಮಾನ

ಟ್ರಾಫಿಕ್‌ ಜಾಮ್‌, ವಾಹನ ಸವಾರರ ಪರದಾಟ

ಟ್ರಾಫಿಕ್‌ ಜಾಮ್‌, ವಾಹನ ಸವಾರರ ಪರದಾಟ

ಹವಾಮಾನ ಇಲಾಖೆ ಬಿಡುಗಡೆ ಮಾಡಿದ್ದ ಬುಲೆಟಿನ್‌ನಲ್ಲಿ, ಬೆಂಗಳೂರಿನಲ್ಲಿ ಶನಿವಾರ 12 ಮಿಲಿ ಮೀಟರ್‌ ಮಳೆಯಾಗಿದೆ ಎಂದು ತಿಳಿಸಿದೆ. ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಸಹ ಮಳೆಯಾಗಿದೆ. ಶನಿವಾರ ಬೆಳಗ್ಗೆ ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಬೆಂಗಳೂರಿನಲ್ಲಿ ಮಾಂಡೌಸ್ ಚಂಡಮಾರುತದ ಪರಿಣಾಮ ಕಂಡುಬಂದಿದೆ. ದಾವಣಗೆರೆಯಲ್ಲಿ ಶನಿವಾರದ ಕನಿಷ್ಠ ತಾಪಮಾನ 13.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರವೂ ಸಹ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ. ಮಳೆಯ ಕಾರಣ ನಗರದಾದ್ಯಂತ ಟ್ರಾಫಿಕ್ ಜಾಮ್, ಆಹಾರ ವಿತರಣೆ ಮತ್ತು ಟ್ಯಾಕ್ಸಿ ಸೇವೆಗಳ ಮೇಲೆ ಪರಿಣಾಮ ಬೀರಿತ್ತು.

ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ

ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ

ಡಿಸೆಂಬರ್ 12ರಂದು ಕರ್ನಾಟಕದ ಕರಾವಳಿ ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ದಾವಣಗೆರೆ, ಬೆಂಗಳೂರು ನಗರ, ಹಾಸನ, ಬಳ್ಳಾರಿ, ಕೋಲಾರ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಬಿಟ್ಟುಬಿಡದೆ ಸುರಿದಿದ್ದ ಮಳೆ

ಬಿಟ್ಟುಬಿಡದೆ ಸುರಿದಿದ್ದ ಮಳೆ

ಶನಿವಾರ, ಬೆಂಗಳೂರು ನಗರದಲ್ಲಿ ಕಳೆದ 12 ವರ್ಷಗಳಲ್ಲಿ ಡಿಸೆಂಬರ್‌ನಲ್ಲಿ ಕನಿಷ್ಠ, ಗರಿಷ್ಠ ತಾಪಮಾನ ದಾಖಲಾಗಿತ್ತು. ಸಂಜೆ 5:30ರ ಸುಮಾರಿಗೆ ಗರಿಷ್ಠ ತಾಪಮಾನವು 19.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಸಾಮಾನ್ಯಕ್ಕಿಂತ ಸುಮಾರು 7 ಡಿಗ್ರಿ ಸೆಲ್ಸಿಯಸ್ ಕುಸಿತವಾದ ಪ್ರಮಾಣವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕನಿಷ್ಠ ತಾಪಮಾನವು 16.8 ಡಿಗ್ರಿ ಸೆಲ್ಸಿಯಸ್‌, ವಾಡಿಕೆಗಿಂತ 0.8 ಡಿಗ್ರಿ ಸೆಲ್ಸಿಯಸ್‌ಯಷ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಹವಾಮಾನ ಕೇಂದ್ರವು ಇನ್ನೂ ಕಡಿಮೆ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ವಾತಾವರಣದ ತೇವಾಂಶದ ಅಂಶವನ್ನು ಸೂಚಿಸುವ ಸಾಪೇಕ್ಷ ಆರ್ದ್ರತೆ ಕೂಡ ಅಧಿಕವಾಗಿರುತ್ತದೆ. ನಗರದಲ್ಲಿ ಸಂಜೆ 5:30ರ ವೇಳೆಗೆ ಶೇಕಡಾ 92ರಷ್ಟಿದ್ದು, ಸಾಮಾನ್ಯಕ್ಕಿಂತ ಶೇಕಡಾ 38ರಷ್ಟು ಹೆಚ್ಚಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣವು 100 ಶೇಕಡಾ ಸಾಪೇಕ್ಷ ಆರ್ದ್ರತೆಯನ್ನು ದಾಖಲಿಸಿದೆ. ಇದು ಸಾಮಾನ್ಯಕ್ಕಿಂತ ಶೇಕಡಾ 45 ರಷ್ಟು ಹೆಚ್ಚಾಗಿದೆ. ಹೆಚ್ಚಿನ ಸಾಪೇಕ್ಷ ಆರ್ದ್ರತೆ ಮತ್ತು ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳ ನಡುವಿನ ಸಣ್ಣ ವ್ಯತ್ಯಾಸದಿಂದಾಗಿ ದಿನವಿಡೀ ಗಾಳಿಯಲ್ಲಿ ಚಳಿ ಇತ್ತು. ಇದು ನಾಗರಿಕರು ತಮ್ಮ ವಾರಾಂತ್ಯದ ಯೋಜನೆಗಳನ್ನು ರದ್ದುಗೊಳಿಸಲು ಮತ್ತು ಮನೆಯೊಳಗೆ ಇರುವಂತೆ ಮಾಡಿತು. ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರದ ಕೆಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

English summary
Karnataka Rain: Chamarajanagar, Shivamogga, Chikkamagaluru, Tumakuru, Mandya, Mysuru, Davanagere, Hassan, Kolar, Ballari and Bengaluru will receive maximum rainfall on December 12. weather forecas, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X