Karnataka rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಮಳೆ ಮುನ್ಸೂಚನೆ, ವಿವರ ಇಲ್ಲದೆ

ಕರ್ನಾಟಕ, ಸೆಪ್ಟೆಂಬರ್‌, 03: ಆಗಸ್ಟ್‌ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಗಾಗ ಜಿನುಗು ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಬರೀ ಬಿಸಿಲಿನ ವಾತಾರವಣವೇ ಮುಂದುವರೆದಿದೆ. ಇನ್ನು ಇಂದಿನಿಂದ ನಾಲ್ಕು ದಿನಗಳ ಕಾಲ ಅಬ್ಬರದ ಮಳೆಯಾಗಲಿದೆ ಎಂದಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗಾದರೆ ಯಾವ ಭಾಗಗಳಲ್ಲಿ ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಹಾಗೂ ಕರಾವಳಿಯ ಕೆಲವು ಭಾಗದಲ್ಲಿ ಆಗಾಗ ಜಿನುಗು ಮಳೆಯಾಗುತ್ತಿದ್ದು, ಇನ್ನು ಕೆಲವೆಡೆ ಬಿಸಿಲಿನ ವಾತಾರಣವೇ ಮುಂದುವರೆದಿದೆ ಎನ್ನುವ ವರದಿಗಳು ಆಗುತ್ತಲೇ ಇವೆ. ಮತ್ತೊಂದೆಡೆ ರಾಜ್ಯದಲ್ಲಿ ಸೆಪ್ಟೆಂಬರ್​ನಲ್ಲಿ ವಾಡಿಕೆಯಂತೆ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka rain: Rainfall forecast for next 4 days in these districts of state

ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೇ ಇಂದು (ಸೆಪ್ಟೆಂಬರ್‌ 03) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಅಲ್ಲಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಹಲವೆಡೆ ಅಬ್ಬರದ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದ್ದವು. ಇದೀಗ ಮತ್ತೇ ಮಳೆ ಚುರುಕು ಪಡೆಯುವ ಮುನ್ಸೂಚನೆ ಇದ್ದು, ಮತ್ತೇನು ಗತಿ ಕಾದಿದಿಯೋ ಎನ್ನುವ ಆತಂಕ ಇಲ್ಲಿನ ಜನರದ್ದಾಗಿದೆ.

ಎರಡು ದಿನಗಳ ಹಿಂದೆ ದಾವಣಗೆರೆ, ಬೆಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿತ್ತು. ಬಳಿಕ ಎರಡು ದಿನ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೇ ಈ ಭಾಗಗಳಲ್ಲಿ ಆರ್ಭಟ ಶುರು ಮಾಡಲಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಎರಡು ವಾರಗಳಿಂದ ಬಿಸಿಲಿನ ಬೇಗೆಯಿಂದ ಬೆದಿದ್ದ ಕೋಲಾರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಇದರಿಂದ ಇಲ್ಲಿನ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗೆಯೇ ಇಲ್ಲಿ ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.

ಜಿಲ್ಲಾವಾರು ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ (ಸೆಲ್ಸಿಯಸ್‌ಗಳಲ್ಲಿ)

ಬೆಂಗಳೂರು: 28-20,
ಚಿಕ್ಕಬಳ್ಳಾಪುರ: 29-19
ಕೋಲಾರ: 29-21
ಬೆಂಗಳೂರು ಗ್ರಾಮಾಂತರ: 28-20
ರಾಮನಗರ 30-21
ಮಂಡ್ಯ: 30-22
ಮೈಸೂರು: 31-21

ಚಾಮರಾಜನಗರ: 30-21
ಮಡಿಕೇರಿ: 24-17
ಹಾಸನ: 28-19
ಶಿವಮೊಗ್ಗ: 30-22
ಮಂಗಳೂರು: 31-25
ಬೆಳಗಾವಿ: 28-21
ವಿಜಯಪುರ: 28-22

ಧಾರವಾಡ: 29-21
ಚಿತ್ರದುರ್ಗ: 31-21
ಚಿಕ್ಕಮಗಳೂರು: 27-19
ಉಡುಪಿ: 31-25
ತುಮಕೂರು: 29-21
ಕಾರವಾರ: 30-26
ಕೊಪ್ಪಳ: 30-23

ದಾವಣಗೆರೆ: 31-22
ಬೀದರ್: 29-22
ಹುಬ್ಬಳ್ಳಿ: 31-22
ಕಲಬುರಗಿ: 29-33
ಹಾವೇರಿ: 31-22
ಗದಗ: 32-22
ರಾಯಚೂರು: 29-23
ಬಳ್ಳಾರಿ: 35-24
ಯಾದಗಿರಿ: 29-23
ಬಾಗಲಕೋಟೆ: 29-22

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+