Karnataka Rain: ಕರ್ನಾಟಕದ ಈ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರವರೆಗೂ ಮಳೆರಾಯನ ಆರ್ಭಟ ಜೋರು!
ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕದಲ್ಲಿ ಈ ಬಾರಿ ವಾಡಿಯಂತೆಯಾಗದ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಸೆಪ್ಟೆಂಬರ್ ಮೊದಲ ವಾರದಿಂದಲೂ ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಉತ್ತಮಕ ಮಳೆಯಾಗುತ್ತಿದೆ.
ಇನ್ನೂ ಗಣೇಶ್ ಹಬ್ಬದಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 27ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಮುಂದಿನ ಐದಾರು ದಿನ ಭಾರಿ ಮಳೆಯಾಗಲಿದೆ.

ಅಲ್ಲದೇ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರದಲ್ಲಿ ಮಳೆಯಾಗಲಿದೆ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ.
ಕೊಟ್ಟಿಗೆಹಾರ, ಕಾರವಾರ, ಉಡುಪಿ, ಮಂಚಿಕೆರೆ, ಅಂಕೋಲಾ, ಕಾರ್ಕಳ, ಬೆಳ್ತಂಗಡಿ, ಹೊಸಕೋಟೆ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಮಾಲೂರು, ಧರ್ಮಸ್ಥಳ, ಗೇರುಸೊಪ್ಪ, ಯಲ್ಲಾಪುರ, ಲೋಂಡ, ಬೆಳಗಾವಿ ನಗರ, ಬಾಗಲಕೋಟೆ, ಕೂಡಲಸಂಗಮ, ಭಾಗಮಂಡಲ, ಶೃಂಗೇರಿ, ಪೊನ್ನಂಪೇಟೆ, ಗೌರಿಬಿದನೂರು, ದೊಡ್ಡಬಳ್ಳಾಪುರ, ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ.
ರಾಯಚೂರು ಜಿಲ್ಲೆಯ ಪೂರ್ವಭಾಗ, ಚಿತ್ರದುರ್ಗದ ದಕ್ಷಿಣ ಭಾಗ, ತುಮಕೂರಿನ ಪಶ್ಚಿಮ ಭಾಗ,ಕೊಡಗು ಜಿಲ್ಲೆಯ ಪಶ್ಚಿಮ ಭಾಗ, ಹಾಸನ ಜಿಲ್ಲೆಯ ಪಶ್ಚಿಮ- ಉತ್ತರ- ಪೂರ್ವ ಭಾಗ, ಚಿಕ್ಕಮಗಳೂರಿನ ಪೂರ್ವಭಾಗ, ಶಿವಮೊಗ್ಗ ಜಿಲ್ಲೆಯ ಪಶ್ಚಿಮ- ಮಧ್ಯ ಹಾಗೂ ಉತ್ತರ ಭಾಗ, ವಿಜಯಪುರ ಜಿಲ್ಲೆಯ ದಕ್ಷಿಣ ಭಾಗ, ಯಾದಗಿರಿಯ ದಕ್ಷಿಣ ಭಾಗ, ರಾಮನಗರ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಕ್ಷಿಣ ಭಾಗ, ಚಾಮರಾಜಗರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಲಿದೆ.
ಇನ್ನೂ ಬೆಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆಯ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications