Karnataka Rain: ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

Karnataka Rain: ಜೂನ್‌ ಆರಂಭದಿಂದಲೂ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಈ ಹಿನ್ನೆಲೆ ಕೆರೆ-ಕಟ್ಟೆಗಳು ಸೇರಿದಂತೆ ಅನೇಕ ಜಲಮೂಲಗಳು ಉಕ್ಕಿಹರಿಯುತ್ತಿವೆ. ಮತ್ತೊಂದೆಡೆ ಜಲಮೂಲಗಳಿಗೂ ಜೀವಕಳೆ ಬಂದಂತಾಗಿದೆ.

ಮತ್ತೊಂದೆಡೆ ಇಂದು (ಜೂನ್‌ 16) ಇನ್ನು ಮೂರು ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Karnataka Rain Heavy rain thunderstorm forecast in these districts in the next 3 hours on june 16

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಬೀದರ್, ವಿಜಯಪುರ, ಚಾಮರಾಜನಗರ, ಧಾರವಾಡ, ಗದಗ, ಮೈಸೂರು, ಉಡುಪಿಯಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಶನಿವಾರ ರಾಯಚೂರಿನ ಗಬ್ಬೂರಿನಲ್ಲಿ 6 ಸೆಂ.ಮೀ ಮಳೆ ಆಗಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದಿರುವ ಸ್ಥಳ ಎಂದು ವರದಿಯಾಗಿದೆ. ಇನ್ನು ಉಡುಪಿ, ಯಾದಗಿರಿ, ಸೈದಾಪುರ, ಅಂಕೋಲಾದಲ್ಲಿ ತಾಲಾ 3 ಸೆಂಟಿ ಮೀಟರ್‌ ಗೋಕರ್ಣ, ಕುಮಟಾ, ಕೆಂಭಾವಿ, ತಾವರಗೇರಾ, ಮುದಗಲ್‌, ಮಂಠಾಳ, ಕೋಟದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ.

ಹಾಗೆಯೇ ಹೊನ್ನಾವರ, ಕಾರ್ಕಳ , ಸಿದ್ದಾಪುರ, ಮಂಕಿ, ಯಲ್ಲಾಪುರ, ಯಡ್ರಾಮಿ, ದೇವದುರ್ಗ, ಕವಡಿಮಟ್ಟಿ, ಮಸ್ಕಿ, ಕಲಬುರ್ಗಿ, ಕಕ್ಕೇರಿ, ಕಮಲಾಪುರ, ಮಾನ್ವಿ ಸೇರಿದಂತೆ ಹಲವೆಡೆ ತಲಾ 1 ಸೆಂಟಿ ಮೀಟರ್‌ ಮಳೆಯಾದ ವರದಿಯಾಗಿದೆ. ಹಾಗೆಯೇ ಇನ್ನು ಇಂದು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+