Karnataka Rain Alert: ರಾಜ್ಯದ ಈ 8 ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಣೆ
ಬೆಂಗಳೂರು, ಜೂನ್ 19: ಕರ್ನಾಟಕದಲ್ಲಿ ಮುಂದಿನ ಒಂದು ವಾರ ಭಾರೀ ಮಳೆ ಅಬ್ಬರಿಸಲಿದೆ. ಈ ಪೈಕಿ ಐದನೇ ದಿನ ಅಂದರೆ ಜೂನ್ 24ರಂದು ಗುಡುಗು ಸಹಿತ ಧಾರಾಕಾರ ಮಳೆ ಆರ್ಭಟಕ ಕಂಡು ಬರಲಿದೆ. ವಿಶೇಷವೆಂದರೆ ವಿವಿಧ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಣೆ ಆಗಿದೆ.
ನಾಳೆ ಗುರುವಾರದಿಂದ ಭಾನುವಾರದವರೆಗೆ ರಾಜ್ಯಕ್ಕೆ ವ್ಯಾಪಕ ಮಳೆಯ ಆಗಮನವಾಗಲಿದೆ. ಈ ಪೈಕಿ ಮುಂದಿನ 48 ಗಂಟೆಗೆ (ಜೂನ್ 21ರವರೆಗೆ) ಕರಾವಳಿ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಅತ್ಯಧಿಕ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಎರಡು ದಿನ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ನಂತರದ ಎರಡು ದಿನ ಅಂದರೆ ಜೂನ್ 22 ಮತ್ತು 23 ರಂದು 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ನಂತರ ಜೂನ್ 24ರಂದು ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಶಿವಮೊಗ್ಗ, ಮಂಡ್ಯ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 20 ಸೆಂಟಿ ಮಿಟರ್‌ಗಿಂತಲೂ ಅಧಿಕ ಮಳೆ ಆಗುವ ಸಾಧ್ಯತೆಗಳು ಇವೆ. ಹೀಗಾಗಿ ಅಂದು ಈ 08 ಜಿಲ್ಲೆಗಳಿಗೆ 'ರೆಡ್ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ಇಂದಿನ ಮಳೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಮುಂದಿನ ಮೂರು ದಿನ ಸಾಧಾರಣ ಮಳೆ
ಜೂನ್ 22ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದರ್ಗು, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ, ಮೈಸೂರು ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಿಗಿರಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಹಗುರದಿಂದ ಸಾಧಾರಣದಿಂದ ಮಳೆ ಬರಲಿದೆ.

ಜೂನ್ 23 ಮತ್ತು 24ರಂದು ಮೇಲಿನ ಇದೇ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಭಾರೀಯಿಂದ ಅತ್ಯಧಿಕ ಮಳೆ ಆಗಲಿದೆ. ಗರಿಷ್ಠ 20ರಿಂದ 30 ಸೆಂಟಿ ಮೀಟರ್ ವರೆಗೆ ಮಳೆ ಆಗಬಹುದು ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಬೆಂಗಳೂರು ಮಳೆ ಮುನ್ಸೂಚನೆ
ಹಲವು ದಿನಗಳಿಂದ ಇಳಿಕೆ ಆಗಿದ್ದ ಮಳೆ ಅಬ್ಬರ ಇದೀಗ ಮತ್ತೆ ಮುಂದುವರಿದಿದೆ. ಮುಂಗಾರು ಮಳೆ ರಾಜ್ಯದಲ್ಲಿ ಮತ್ತೊಮ್ಮೆ ಹೆಚ್ಚು ಸಕ್ರಿಯವಾಗಿದ್ದು, ಅಬ್ಬರಿಸಲು ಸಜ್ಜಾಗಿದೆ. ಕರಾವಳಿಯಲ್ಲಿ ಬಿರುಗಾಳಿ ಬೀಸಲಿದೆ. ಕ್ರಮೇಣ ಗಾಳಿಯ ವೇಗದಲ್ಲಿ ಏರಿಕೆ ಆಗಲಿದೆ. ಇನ್ನೂ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಅತ್ಯಧಿಕ ಮಳೆ ಆಗಲಿದೆ.
ಇನ್ನೂ ರಾಜ್ಯದಲ್ಲಿ ಕಳೆದ 19 ದಿನಗಳಲ್ಲಿ ಉತ್ತರ ಮಲೆನಾಡು ಹಾಗೂ ಉತ್ತರ ಒಳನಾಡಿನ ಒಂದಷ್ಟು ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲಾಗಿದೆ. ವಾಡಿಕೆಗಿಂತ ಹೆಚ್ಚುಮಳೆ ಆಗಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೀಗ ಜೂನ್ ಅಂತ್ಯದವರೆಗೂ ಉತ್ತಮ ಮುಂಗಾರು ಮಳೆ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications