Karnataka Rain: ಆಗಸ್ಟ್‌ 20ರ ಬಳಿಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲೆಲ್ಲಿ?, ಇಲ್ಲಿದೆ ವಿವರ

ಕರ್ನಟಕ, ಆಗಸ್ಟ್‌, 18: ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳ ಕೆರೆ, ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದವು. ಅಲ್ಲದೆ ಬತ್ತಿಹೋಗಿದ್ದ ಜಲಾಶಯಗಳಿಗೆ ಜೀವ ಕಳೆ ಬಂದಂತಾಗಿತ್ತು. ಆದರೆ ಆಗಷ್ಟ್‌ ತಿಂಗಳ ಆರಂಭದಿಂದಲೂ ಮಳೆರಾಯನ ಆರ್ಭಟ ಸಂಪೂರ್ಣವಾಗಿ ನಿಂತು ಹೋಗಿದ್ದು, ಪರಿಣಾಮ ಬಿಸಿಲಿನ ತಾಪಮಾನಕ್ಕೆ ಜಲಮೂಲಗಳೆಲ್ಲ ಬರಿದಾಗುತ್ತಲೇ ಇವೆ. ಇನ್ನು ಮತ್ತೊಂದೆಡೆ ಹವಾಮಾನ ಇಲಾಖೆ ಆಗಸ್ಟ್‌ 20ರ ಬಳಿಕ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಆಗಸ್ಟ್​ 20ರ ಬಳಿನ‌ ಮುಂಗಾರು ಮತ್ತೇ ಚುರುಕು ಪಡೆಯಲಿದ್ದು, ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರರ್ಭಟ ಶುರು ಮಾಡಲಿದ್ದಾನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Karnataka Rain: Heavy rain forecast in many districts of state after August 20

ಆಗಸ್ಟ್‌ ತಿಂಗಳಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಇಲ್ಲದೆ ಬಿಸಿಲಿನ ಧಗೆಗೆ ಜನರು ಬೇಸತ್ತು ಹೋಗಿದ್ದಾರೆ. ಇನ್ನು ಮುಂಗಾರು ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಸೊರಗುತ್ತಿವೆ. ಒಂದು ವೇಳೆ ಆಗಸ್ಟ್‌ 20ರ ನಂತರವೂ ಮಳೆರಾಯ ಕರುಣೆ ತೋರದಿದ್ದರೆ ಬರದ ಛಾಯೆ ಆವರಿಸುವುದಂತೂ ನಿಶ್ಚಿತ ಎನ್ನುವಂತಾಗಿದೆ.

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಇಷ್ಟರಲ್ಲೇ ಮಳೆ ಆರ್ಭಟಿಸುವ ಮುನ್ಸೂಚನೆ ಇದ್ದು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಆಗಸ್ಟ್‌ 20ರ ನಂತರ ಮಳೆರಾಯ ಕೃಪೆ ತೋರುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಇನ್ನು ಕೋಡಿಮಠದ ಶ್ರೀಗಳು ಆಗಾಗ ಭಯಾನಕ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಮಠದಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆಯ ಕೊರತೆ ಆಗುವುದಿಲ್ಲ. ಶ್ರಾವಣ ಮಾಸದ ಮಧ್ಯದಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಅಂತಲೂ ಭವಿಷ್ಯ ನುಡಿದಿದ್ದರು. ಒಂದು ವೇಳೆ ಶ್ರೀಗಳು ಹೇಳಿದಂತೆ ಮಳೆಯಾದರೆ ಬೆಳೆದ ಬೆಳೆಗಳು ಸುಧಾರಿಸುವುದರೊಂದಿಗೆ ರಾಜ್ಯದ ಜನ ಹಾಗೂ ರೈತರಿಗೆ ಹೋದ ಜೀವ ಬಂದಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+