Karnataka Rain: ವಾರಾಂತ್ಯದಲ್ಲಿ ರಾಜ್ಯದಲ್ಲಿ ಮಳೆ ಅಬ್ಬರ! ಎಲ್ಲೆಲ್ಲಿ ತಿಳಿಯಿರಿ

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ವಾರಾಂತ್ಯದಲ್ಲಿ ಕೂಡ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.

ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಗುರುವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಡಗೂರಿನಲ್ಲಿ 59.5 ಮಿಮೀ ಮಳೆಯಾಗಿದ್ದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ.

Karnataka Rain: Heavy Rain expected in South and Central Karnataka

ತುಮಕೂರು ಜಿಲ್ಲೆಯ ಅರಿಯೂರಿನಲ್ಲಿ 36.5 ಮಿ.ಮೀ, ಹೇರೂರಿನಲ್ಲಿ 23.5 ಮಿ.ಮೀ, ಜಿ ಹೊಸಹಳ್ಳಿಯಲ್ಲಿ 23 ಮಿ.ಮೀ, ಬೆಲವತ್ತದಲ್ಲಿ 22.5 ಮಿ.ಮೀ, ಗಳಿಗೇನಹಳ್ಳಿ 19 ಮಿ.ಮೀ, ಕರಡಿಯಲ್ಲಿ 18.5 ಮಿ.ಮೀ, ಹೆಗ್ಗೆರೆಯಲ್ಲಿ 18 ಮಿ.ಮೀ, ಮಾರಶೆಟ್ಟಿಹಳ್ಳಿಯಲ್ಲಿ 15.5 ಮಿ.ಮೀ, ಹುಲಿಕುಂಟೆಯಲ್ಲಿ 15.5 ಮಿ.ಮೀ ಮಳೆಯಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 37 ಮಿ.ಮೀ. ಮಳೆಯಾಗಿದೆ. ದೇವರಾಯಶೆಟ್ಟಿಪುರ 18.5 ಮಿ.ಮೀ, ಆವರ್ಥಿ 12.5 ಮಿಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಮಾರ್ನೆಯಲ್ಲಿ 37 ಮಿ.ಮೀ ಮಳೆಯಾಗಿದೆ. ನಡಪಾಲು 28.5 ಮಿ.ಮೀ, ಮಿಯಾರುನಲ್ಲಿ 28 ಮಿ.ಮೀ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಲವಂತಿಗೆಯಲ್ಲಿ 34 ಮಿಮೀ ಮಳೆಯಾಗಿದ್ದು, ಅರಸಿನಮಕ್ಕಿಯಲ್ಲಿ 29 ಮಿ.ಮೀ ಮಳೆಯಾಗಿದೆ. ಕವಲಮುದುರುವಿನಲ್ಲಿ 28 ಮಿ.ಮೀ, ಅಂದಿಂಜೆಯಲ್ಲಿ 23.5 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೋವೆಯಲ್ಲಿ 29.5 ಮಿ.ಮೀ ಮಳೆಯಾಗಿದೆ. ಬಣಕಲ್‌ನಲ್ಲಿ 26.5 ಮಿ.ಮೀ, ಕುಂದೂರಿನಲ್ಲಿ 22 ಮಿ.ಮೀ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಪೈಲಗುರ್ಕಿಯಲ್ಲಿ 29 ಮಿ.ಮೀ, ನ್ಯಾಮಗೊಂಡ್ಲುವಿನಲ್ಲಿ 23.5 ಮಿ.ಮೀ, ಅರೂರುನಲ್ಲಿ 19.5 ಮಿ.ಮೀ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಜ್ಯೋತಿಗೌಡನಪುರದಲ್ಲಿ 21 ಮಿ.ಮೀ ಮಳೆಯಾಗಿದೆ. ಕೋಗಲವಾಡಿ 21 ಮಿ.ಮೀ, ಕೂಡ್ಲೂರು 18 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಕೂಡ ಮಳೆ

ಗುರುವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕೂಡ ಮಳೆಯಾಗಿದೆ. ಸದಾಶಿವನಗರ, ಶೇಷಾದ್ರಿಪುರ, ಮಲ್ಲೇಶ್ವರ, ಸಿವಿ ರಾಮನ್ ನಗರ, ಹೂಡಿ, ಮಹದೇವಪುರ, ಮಾರತ್ತಹಳ್ಳಿ, ಉತ್ತರಹಳ್ಳಿ, ಮೆಜೆಸ್ಟಿಕ್, ಕಂಟೋನ್ಮೆಂಟ್, ಶಿವಾಜಿನಗರ, ವಸಂತನಗರ, ನಾಯಂಡಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಮುಂದಿನ ಎರಡು ದಿನ ವ್ಯಾಪಕ ಮಳೆ

ಮುಂದಿನ ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+