Get Updates
Get notified of breaking news, exclusive insights, and must-see stories!

Rain Update: ಕರ್ನಾಟಕದಲ್ಲಿ ಮಳೆ ಕೊರತೆ: ಡ್ಯಾಮ್‌ಗಳಲ್ಲಿ ಕ್ಷೀಣಿಸಿದ ಒಳಹರಿವು- ಆತಂಕದಲ್ಲಿ ರೈತರು, ಎಲ್ಲಿ ತಿಳಿಯಿರಿ

ಬೆಂಗಳೂರು, ಜುಲೈ 13: ಈ ಬಾರಿಯ ಮಳೆಗಾಲವು ಕರ್ನಾಟಕದ ಕೆಲ ಭಾಗಗಳ ಜನರಿಗೆ ಖುಷಿಯನ್ನು ತಂದಿದ್ದರೆ, ಇನ್ನು ಕೆಲ ಭಾಗದ ಜನರನ್ನು ಆತಂಕದಲ್ಲಿ ತಳ್ಳಿದೆ. ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಆದರೆ, ಮಲೆನಾಡು, ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಇದರಿಂದ ಡ್ಯಾಮ್‌ಗಳಲ್ಲಿ ಒಳ ಹರಿವು ಕ್ಷೀಣಿಸಿದೆ.

ರಾಜ್ಯದಲ್ಲಿನ ಬಹುತೇಕ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿರುವುದರಿಂದ ರೈತ ಸಮುದಾಯವು ಚಿಂತೆಯಲ್ಲಿದೆ ಎಂದು ವರದಿಯಾಗಿದೆ.

Karnataka: Rain deficit causes concern for agriculture and water reservoirs

ಕೃಷ್ಣಾ ನದಿಯ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಕೇವಲ 18 ಪ್ರತಿಶತದಷ್ಟು ನೀರು ಉಳಿದಿದೆ. ಆದರೆ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಸುಮಾರು 34 ಪ್ರತಿಶತದಷ್ಟು ನೀರು ಇದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, 'ದಕ್ಷಿಣ ಕರ್ನಾಟಕವು ಜೂನ್‌ನಲ್ಲಿ ಶೇಕಡಾ 18 ರಷ್ಟು ಕಡಿಮೆ ಮಳೆಯನ್ನು ಪಡೆದಿದೆ. ಈ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ 66 ಮಿಮೀ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಕೇವಲ 54 ಮಿಮೀ ಮಳೆಯಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಾವಣಗೆರೆ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಜೂನ್‌ನಲ್ಲಿ ಶೇ.55ರಷ್ಟು ಮಳೆ ಕೊರತೆ ದಾಖಲಾಗಿದೆ. ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ ಮತ್ತು ಗದಗದಲ್ಲಿ ಶೇ.60 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ.

Karnataka: Rain deficit causes concern for agriculture and water reservoirs

ಜೂನ್‌ನಲ್ಲಿ ಮಲೆನಾಡು ಮತ್ತು ಕರಾವಳಿ ಕರ್ನಾಟಕ ಕ್ರಮವಾಗಿ ಶೇ 74 ಮತ್ತು 57 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಆದರೆ, ಕಳೆದ ವಾರದಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶೇ.95ರಷ್ಟು ಅಧಿಕ ಮಳೆ ದಾಖಲಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಹೆಚ್ಚಾಗಿದೆ.

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕೃಷ್ಣಾ ಜಲಾಶಯಗಳಿಗೆ ಒಳಹರಿವು ಇಲ್ಲ

ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿ ಒಂದು ತಿಂಗಳಾದರೂ, ಪಶ್ಚಿಮ ಘಟ್ಟದ ಕೆಲವು ಭಾಗಗಳು, ಮುಖ್ಯವಾಗಿ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಕಾರಣ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿದಿದೆ.

Karnataka: Rain deficit causes concern for agriculture and water reservoirs

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್‌) ಅಧಿಕಾರಿಗಳ ಪ್ರಕಾರ, ಆಲಮಟ್ಟಿ ಅಣೆಕಟ್ಟಿನಲ್ಲಿ ಒಟ್ಟು ಸಾಮರ್ಥ್ಯ 19.036 ಟಿಎಂಸಿ ಅಡಿ ಇದೆ. ಈಗ ನೀರಿನ ಸಾಮರ್ಥ್ಯ 1.416 ಟಿಎಂಸಿ ಅಡಿ ಇದೆ. ಅಣೆಕಟ್ಟಿಗೆ ಒಳಹರಿವು ಇಲ್ಲ. ಆದರೆ, ಹೊರಹರಿವು 578 ಕ್ಯೂಸೆಕ್ಸ್ ಇದೆ.

ಆಲಮಟ್ಟಿ ಅಣೆಕಟ್ಟಿನ ಸಾಮರ್ಥ್ಯವು ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ 2 ಟಿಎಂಸಿಎಫ್‌ಟಿಗಿಂತ ಕಡಿಮೆ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯಪುರ, ಬಾಗಲಕೋಟೆಯ ರೈತರು ಆತಂಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನೆರಡು ವಾರಗಳಲ್ಲಿ ಮಳೆಯಾಗದಿದ್ದರೆ, ಕರ್ನಾಟಕ ಸರ್ಕಾರ ಬರಗಾಲವೆಂದು ಘೋಷಿಸಬಹುದು ಎಂದು ತಜ್ಞರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+