Rain Alert: ಕರ್ನಾಟಕದ ಮೇಲೆ ವರುಣನ ಕೃಪೆ: ಇಂದು ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ- ಜನತೆ ಫುಲ್ ಖುಷ್
ಬೆಂಗಳೂರು, ಏಪ್ರಿಲ್ 17: ಕರ್ನಾಟಕದ ಜನತೆ ಬಿರು ಬಿಸಿಲಿನಿಂದ ತತ್ತರಿಸಿ ಹೋಗಿದ್ದು, ಕೊನೆಗೂ ವರುಣ ಕೃಪೆ ತೋರಿದ್ದಾನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಸದ್ಯ ಕರ್ನಾಟಕದ ಕೆಲವು ಭಾಗಗಳಲ್ಲಿ ತಂಪಾದ ವಾತಾವರಣವಿದೆ. ಇನ್ನೂ ಕುಂದನಗರಿಯಲ್ಲಿ ವರುಣ ಇಂದು ಕೃಪೆ ತೋರಿದ್ದು, ಜನತೆ ಫುಲ್ ಖುಷ್ ಆಗಿದ್ದಾರೆ.
ಹೌದು, ರಾಜ್ಯದಲ್ಲಿ ಬಿರುಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಮಳೆಗಾಗಿ ವರುಣ ದೇವನನ್ನ ಪ್ರಾರ್ಥಿಸುತ್ತಿದ್ದಾರೆ, ರಾಜ್ಯದ ಕೆಲವೆಡೆ ಅಲ್ಪಸ್ವಲ್ಪ ಮಳೆಯ ಸಿಂಚನ ಮೂಡಿದ್ದು, ಚಿಕ್ಕೋಡಿ ತಾಲೂಕಿನಾದ್ಯಂತ ಇಂದು ಸುಮಾರು ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆ ಸುರಿದಿದ್ದು, ಬೇಸಿಗೆಯಲ್ಲೂ ಆಲಿಕಲ್ಲು ಸಹಿತ ಮಳೆಯಾಗಿದೆ.

ಕಳೆದ ವರ್ಷದ ಬರಗಾಲದಿಂದ ರೋಸಿ ಹೋಗಿದ್ದ ಜನತೆ, ಮಳೆಗಾಗಿ ಹಲವು ತಿಂಗಳಿನಿಂದ ಕಾದುಕುಳಿತಿದ್ದು, ಏಕಾಏಕಿ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿಕ್ಕೋಡಿಯಲ್ಲಿ ಸುರಿ ಮಳೆಯಿಂದ ಜನತೆ ಕುಣಿದು ಕುಪ್ಪಳಿಸಿದ್ದಾರೆ. ದಿಢೀರ್ ಚಿಕ್ಕೋಡಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಜನತೆ ಸಂತಸಗೊಂಡಿದ್ರೆ, ಇತ್ತ ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.












Click it and Unblock the Notifications