ರೈಲ್ವೆ ಬಜೆಟಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ರೂ. 3174 ಕೋಟಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ 2: ಈ ಬಾರಿಯ ಕೇಂದ್ರ ಬಜೆಟಿನಲ್ಲಿ ಕರ್ನಾಟಕ ರೈಲ್ವೇಗೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ನೈರುತ್ಯ ರೈಲ್ವೇ ವಲಯದ ವ್ಯಾಪ್ತಿಗೆ ಬರುವ ಕರ್ನಾಟಕಕ್ಕೆ ಒಟ್ಟು 3174 ಕೋಟಿ ರೂಪಾಯಿಗಳ ಅನುದಾನ ಬಜೆಟಿನಲ್ಲಿ ಸಿಕ್ಕಿದೆ.

'ಕಳೆದ ಬಾರಿಯ ಬಜೆಟಿನಲ್ಲಿ 2,663.42 ಕೋಟಿ ರೂಪಾಯಿ ನೈರುತ್ಯ ರೈಲ್ವೆಗೆ ನೀಡಲಾಗಿತ್ತು. ನಾವು ಈ ಬಾರಿ 2,900 ಕೋಟಿ ನೀಡುವಂತೆ ಕೇಳಿಕೊಂಡಿದ್ದೆವು. ಆದರೆ ಸರಕಾರ ನಮ್ಮ ನಿರೀಕ್ಷೆಗೂ ಮೀರಿ ಈ ಬಾರಿ 3,174 ಕೋಟಿ ರೂಪಾಯಿ ನೀಡಿದೆ," ಎಂದು ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಹೇಳಿದ್ದಾರೆ.[ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಪೂರಕವಲ್ಲದ ಬಜೆಟ್:ಸಿದ್ದರಾಮಯ್ಯ]

Karnataka Railway Awarded with 3,174 Crores in 2017 Budget

ಕೇಂದ್ರ ಬಜೆಟಿನಲ್ಲಿ ಕರ್ನಾಟಕ್ಕೆ ಸಿಕ್ಕಿದ ಹೊಸ ಯೋಜನೆಗಳು ಹೀಗಿವೆ,

*ಕೊಪ್ಪಳ ಜಿಲ್ಲೆ ಚಿಕ್ಕಬೆಣಕಲ್ ನಿಂದ ಗಂಗಾವತಿಗೆ 13 ಕಿಲೋಮೀಟರ್ ಹೊಸ ಮಾರ್ಗ

*ಮಹಾರಾಷ್ಟ್ರದ ದೌಂಡ್ ನಿಂದ ಕಲಬುರ್ಗಿವರೆಗಿನ 46.81 ಕಿಲೋಮಿಟರ್ ಲೈನ್ ಡಬ್ಲಿಂಗ್

*ಬೆಂಗಳೂರಿನ 'ನಮ್ಮ ಮೆಟ್ರೋ' 2 ಹೊಸ ಲೈನ್, ಎರಡನೇ ಹಂತದ ನಾಲ್ಕು ಮಾರ್ಗಗಳ ವಿಸ್ತರಣೆಗೆ ಅನುಮತಿ.[ಬಜೆಟ್ 2017: ಮೂಲ ಸೌಕರ್ಯಕ್ಕೆ ಜೇಟ್ಲಿ ಕೊಟ್ಟಿದ್ದು ಬರೀ ಸಪ್ಪೆ ಸಪ್ಪೆ..]

*ಬೆಂಗಳೂರಿನ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಗಳ ಮರು ಅಭಿವೃದ್ಧಿ

*ಗುಂತಕಲ್-ಬಳ್ಳಾರಿ-ಹೊಸಪೇಟೆ-ತೋರಣಗಲ್-ರಣಜಿತ್ ಪುರ ಮಾರ್ಗದ ವಿದ್ಯುದ್ದೀಕರಣ

*ಹೊಸಪೇಟೆ-ಗದಗ ಮಾರ್ಗ ವಿದ್ಯುದೀಕರಣ

*ನೈರುತ್ಯ ರೈಲ್ವೆಯ 34 ನಿಲ್ದಾಣಗಳಿಗೆ 100ಮೆಗಾ ವ್ಯಾಟ್ ಸೌರ ವಿದ್ಯುತ್ ಸೌಲಭ್ಯ

*914 ರೈಲುಗಳಿಗೆ ಬಯೋ ಶೌಚಾಲಯ ಸೌಲಭ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rupees 3,174 crores kept in 2017 central budget for the development of Karnataka Railway network, which comes under South Western Railway Zone.
Please Wait while comments are loading...