ಕೆಆರ್‌ಎಸ್ ಜಲಾಶಯದ 136 ಕ್ರೆಸ್ಟ್ ಗೇಟ್ ಬದಲಾವಣೆ

ಮಂಡ್ಯ, ಆಗಸ್ಟ್ 21 : ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯವನ್ನು 59 ಕೋಟಿ ರೂ.ವೆಚ್ಚದಲ್ಲಿ ದುರಸ್ತಿಗೊಳಿಸಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದೆ. ಜಲಾಶಯದ 136 ಗೇಟ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮೊದಲ ಹಂತದ ಕಾಮಗಾರಿಗಳಿಗಾಗಿ 18 ಕೋಟಿ ರೂ. ಬಿಡುಗಡೆಯಾಗಿದೆ. ಕೇಂದ್ರ ಜಲ ಆಯೋಗವೂ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದೆ. [KRS ಬಗ್ಗೆ ಓದಿ]

krs

ಕೆಲವು ದಿನಗಳ ಹಿಂದೆ ಕೇಂದ್ರ ಜಲ ಆಯೋಗದ ತಜ್ಞರ ತಂಡ ಕೆಆರ್‌ಎಸ್‌ಗೆ ಭೇಟಿ ನೀಡಿ ದುರಸ್ತಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದಿತ್ತು. ಆಗ, ಅಗತ್ಯವಿರುವ ದುರಸ್ತಿ ಕಾರ್ಯಗಳ ಮಾಹಿತಿ ನೀಡಲಾಗಿತ್ತು. ಈಗ ಕಾಮಗಾರಿಗೆ ಒಪ್ಪಿಗೆ ದೊರೆತಿದೆ ಎಂದು ಬಸವರಾಜೇಗೌಡ ಹೇಳಿದ್ದಾರೆ. [ಕೈ ಕೊಟ್ಟ ಮುಂಗಾರು, KRS ನಲ್ಲಿ ಎಷ್ಟು ನೀರಿದೆ?]

ಕೆಆರ್‌ಎಸ್ ಜಲಾಶಯದಲ್ಲಿ 136 ಗೇಟ್‌ಗಳಿವೆ. ಎಲ್ಲಾ ಗೇಟ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ. ಕಾವೇರಿ ನೀರಾವರಿ ನಿಗಮ ದುರಸ್ತಿ ಕಾರ್ಯಕ್ಕಾಗಿ ಒಟ್ಟು 59 ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿದೆ. 18 ಕೋಟಿ ರೂ. ಹಣ ಬಿಡುಗಡೆಯಾಗಿದೆ.

ಅಂದಹಾಗೆ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 108.25 ಅಡಿ ನೀರಿದೆ. 15,000 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 14,896 ಅಡಿ ನೀರನ್ನು ನದಿ ಮತ್ತು ನಾಲೆಗಳಿಗೆ ಬಿಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+