ದಿಢೀರ್ 400 ರೂಪಾಯಿ ತಲುಪುತ್ತಾ ಕೋಳಿ ಬೆಲೆ? ಚಿಕನ್ ಸಪ್ಲೈ ಬಂದ್ ಮಾಡಲು ಚಿಂತನೆ... Karnataka Poultry Farmers
ಪ್ರಪಂಚದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎಂಬ ಎರಡು ಗುಂಪು ಇದ್ದು, ಹಲವರು ಈ ಎರಡನ್ನೂ ತಿನ್ನುತ್ತಾರೆ. ಹೀಗಿದ್ದಾಗ ಪ್ರತಿವರ್ಷ ಸುಮಾರು 25,000 ಮೆಟ್ರಿಕ್ ಟನ್ ಅಂದ್ರೆ 2.5 ಕೋಟಿ ಕೆಜಿಗೂ ಹೆಚ್ಚು ಕೋಳಿ ಮಾಂಸಕ್ಕೆ ಕರ್ನಾಟಕ ರಾಜ್ಯ ಒಂದರಲ್ಲೇ ಡಿಮ್ಯಾಂಡ್ ಇದೆ. ಇದೇ ಕಾರಣಕ್ಕೆ ಲಕ್ಷಾಂತರ ರೈತರು ಕೋಳಿ ಸಾಕಾಣಿಕೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬುದು ರೈತರ ಬೇಸರ. ಹೀಗಾಗಿ ನಮಗೆ ಈ ವಿಚಾರದಲ್ಲಿ ನ್ಯಾಯ ಬೇಕು ಎಂದು ಕರ್ನಾಟಕದ ರೈತರು ಸಿಡಿದೆದ್ದು, ಚಿಕನ್ ಸಪ್ಲೈ ಬಂದ್ ಮಾಡಲು ಮಹತ್ವದ ಚಿಂತನೆ ನಡೆಸಿದ್ದಾರೆ. ಹಾಗಾದ್ರೆ ದಿಢೀರ್ 400 ರೂಪಾಯಿ ತಲುಪುತ್ತಾ ಚಿಕನ್ ಬೆಲೆ?
ರೈತರಿಗೆ ಎಲ್ಲಾ ವಿಚಾರದಲ್ಲೂ ಮೋಸ ಮಾಡಲಾಗುತ್ತದೆ, ಅದರಲ್ಲೂ ಬ್ಯುಸಿನೆಸ್ ಮಾಡುವವರು ಹೆಚ್ಚು ಲಾಭ ಪಡೆಯಲು ರೈತರಿಗೆ ಮೋಸ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದ ಕೂಡ ಇದೆ. ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ಕೂಡ ಇದು ಹೊರತಾಗಿಲ್ಲ, ಪದೇ ಪದೇ ಬೇಡಿಕೆ ಈಡೇರಿಸಲು ಕರ್ನಾಟಕದ ಕೋಳಿ ಸಾಕಾಣಿಕೆ ರೈತರು ಮನವಿ ಮಾಡಿದರೂ ಇದಕ್ಕೆ ಉದ್ಯಮಿಗಳು ಸ್ಪಂದಿಸಿಲ್ಲ. ಹೀಗಾಗಿ ತಮಿಳುನಾಡು ರೀತಿಯಲ್ಲೇ ಚಿಕನ್ ಸಪ್ಲೈ ಬಂದ್ ಮಾಡಿ ದೊಡ್ಡ ಹೋರಾಟ ನಡೆಸಲು ಸಜ್ಜಾಗಿದ್ದಾರೆ ಕರ್ನಾಟಕದ ರೈತರು.

ದಿಢೀರ್ 400 ರೂಪಾಯಿ ತಲುಪುತ್ತಾ ಚಿಕನ್?
ಚಿಕನ್ ಬೆಲೆ ಈಗಾಗಲೇ ಆಕಾಶ ಮುಟ್ಟಿದ್ದು, ಜನ ಚಿಕನ್ ಖರೀದಿ ಮಾಡಲು ಹಿಂದೆ & ಮುಂದೆ ಯೋಚನೆ ಮಾಡುವಂತೆ ಆಗಿದೆ. ನೋಡ ನೋಡುತ್ತಲೇ ಚಿಕನ್ ಬೆಲೆಯಲ್ಲಿ ಭಾರಿ ಏರಿಕೆ ಆಗಿ, ಹೊಸ ಚಿಂತೆ ಕೂಡ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ರೈತರು ಚಿಕನ್ ಸಪ್ಲೈ ಬಂದ್ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಇನ್ನಷ್ಟು ಸಂಚಲನಕ್ಕೂ ಕಾರಣವಾಗಿದ್ದು, ಈಗಾಗಲೇ 300 ರೂಪಾಯಿ ಆಸುಪಾಸು ಇರುವ ಸ್ಕಿನ್ ಲೆಸ್ ಚಿಕನ್ ಬೆಲೆಯು 400 ರೂಪಾಯಿ ತಲುಪುತ್ತಾ ಎಂಬ ಚಿಂತೆ ಶುರುವಾಗಿದೆ.
ಕನ್ನಡ ನಾಡಿನಲ್ಲಿ ರೈತರ ಹೋರಾಟ?
ನೆರೆಯ ತಮಿಳುನಾಡು ರಾಜ್ಯದಲ್ಲಿ ರೈತರು ಇದೇ ರೀತಿ ಚಿಕನ್ ಸಪ್ಲೈ ಬಂದ್ ಮಾಡಿ ಹೋರಾಟ ನಡೆಸಿದ್ದರು. ಆ ನಂತರ ದಾರಿಗೆ ಬಂದಿದ್ದ ಚಿಕನ್ ಸಪ್ಲೈ ಮಾಡುವ ಕಂಪನಿಗಳು, ಬೆಲೆಯನ್ನ ಏರಿಕೆ ಮಾಡಿ ರೈತರ ಹಲವು ಬೇಡಿಕೆ ಈಡೇರಿಸಿದ್ದಾರೆ. ಹೀಗಾಗಿ ತಮಿಳುನಾಡು ರೈತರಿಂದ ಈಗ ಸ್ಫೂರ್ತಿ ಪಡೆದಿರುವ ಕನ್ನಡ ನಾಡಿನ ರೈತರು, ಚಿಕನ್ ಸಪ್ಲೈ ಬಂದ್ ಮಾಡಿ ಹೋರಾಟವನ್ನ ನಡೆಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಇದೇ ವಾರದಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರವು ಹೊರ ಬೀಳುವ ಸಾಧ್ಯತೆ ಇದ್ದು, ಚಿಕನ್ ಪ್ರಿಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮತ್ತೊಂದು ಕಡೆ ರೈತರು ಹೋರಾಟ ಶುರು ಮಾಡುವ ಮೊದಲೇ ಅವರ ಬೇಡಿಕೆ ಈಡೇರಿಸಲಾಗುತ್ತಾ? ಎಂಬ ಕುತೂಹಲ ಕೂಡ ಇದೀಗ ರೈತರಲ್ಲಿ ಕಾಡುತ್ತಿದೆ.












Click it and Unblock the Notifications