PGCET 2022: ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ, ತಿಳಿಯಿರಿ
ಬೆಂಗಳೂರು, ನವೆಂಬರ್ 06: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2022 (PGCET 2022)ಯ ಪ್ರವೇಶ ಪತ್ರವನ್ನು ನವೆಂಬರ್ 07ರಂದು ಸೋಮವಾರ ಪ್ರಕಟಿಸುವುದಾಗಿ ತಿಳಿಸಿದೆ.
ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2022 (PGCET 2022) ಅಭ್ಯರ್ಥಿಗಳು ಪ್ರವೇಶ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಅದಕ್ಕಾಗಿ ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ನಮೂದಿಸಬೇಕು. ಈ ಕುರಿತು ಪ್ರವೇಶ ಪತ್ರದ ಪರಿಶೀಲನೆ, ಡೌನ್‌ಲೋಡ್‌ಗೆ ಇಲ್ಲಿನ ಮಾಹಿತಿ ಗಮನಿಸಬಹುದು.
ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET 2022) ಪ್ರವೇಶ ಪತ್ರವು ಅಧಿಕೃತ ವೆಬ್‌ಸೈಟ್ cetonline.karnataka.gov.in/kea ನಲ್ಲಿ ದೊರೆಯಲಿದೆ. ಅಭ್ಯರ್ಥಿಗಳು ನವೆಂಬರ್‌ನಲ್ಲಿ ನಡೆಯಲಿರುವ ಎರಡು ದಿನ ಪರೀಕ್ಷೆಗೆ ಸಿದ್ದರಾಗುವಂತೆ ತಿಳಿಸಿದೆ.

ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರವೇಶ ಕಾರ್ಡ್ ಪಡೆಯಲು ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ರುಜುವಾತುಗಳ ಅಗತ್ಯವಿದೆ. ಎಂಟೆಕ್ ಗೆ ನವೆಂಬರ್ 19 ರಂದು ಹಾಗೂ ಎಂಬಿಎ ಹಾಗೂ ಎಂಸಿಎಗೆ ಪ್ರವೇಶ ಪರೀಕ್ಷೆಯು ನವೆಂಬರ್ 20ರಂದು ನಡೆಯಲಿದೆ.
ಪ್ರವೇಶ ಪತ್ರದ ಡೌನ್‌ಲೋಡ್ ಹೇಗೆ
- ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮೊದಲು cetonline.karnataka.gov.in/kea ವೆಬ್‌ಸೈಟ್‌ಗೆ ಭೇಟಿ ನೀಡಿ.
- ಕರ್ನಾಟಕ PGCET 2022 ಪ್ರವೇಶ ಕಾರ್ಡ್ ಲಿಂಕ್ ಮೇಲೆ ಟ್ಯಾಪ್ ಮಾಡಿ.

- ಅದಾದ ಮೇಲೆ ತೆರೆಯುವ ಪರದೆ ಮೇಲೆ ಕೇಳಲಾಗುವ ಹುಟ್ಟಿದ ದಿನಾಂಕ ಮತ್ತು ನೋಂದಣಿ ಸಂಖ್ಯೆ ಹಾಗೂ ಅಗತ್ಯ ಮಾಹಿತಿ ಹಾಕಬೇಕು.
- ನಂತರ ಸಲ್ಲಿಸು (Submit) ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣುವ KEA PGCET 2022 ಪ್ರವೇಶ ಕಾರ್ಡ್ ಡೌನ್‌ಲೋಡ್ ಮೇಲೆ ಟ್ಯಾಪ್ ಮಾಡಿದರೆ ಪ್ರವೇಶ್ ಕಾರ್ಡ್ ಡೌನ್‌ಲೋಡ್ ಆಗುತ್ತದೆ.












Click it and Unblock the Notifications