ಮತ್ತೆ ಚುನಾವಣೆ ಪ್ರಕ್ರಿಯೆಯಲ್ಲಿ ಹಿಂಬಾಗಿಲ ಮೂಲಕ ಚಿಲುಮೆ ಸಂಸ್ಥೆ ಎಂಟ್ರಿ! ಟೆಂಡರ್ ಪಡೆಯಲು ಬಾರಿ ಸರ್ಕಸ್

ಬೆಂಗಳೂರು,ಏಪ್ರಿಲ್27:‌ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮತ್ತೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂಬಾಗಿಲ ಮೂಲಕ ಕೆಲ ರಾಜಕೀಯ ಮುಖಂಡರ ಜೊತೆ ಕೈಜೊಡಿಸಿರುವ ಚಿಲುಮೆ ಸಂಸ್ಥೆ ಎಂಟ್ರಿ ಕೊಡುತ್ತಿದೆ.

ಹೌದು, ದೇಶಾದ್ಯಂತ ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿದ್ದ ಚಿಲುಮೆ ಸಂಸ್ಥೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮತಗಟ್ಟೆಗಳಿಗೆ ಸಾಮಗ್ರಿ ಟೆಂಡರ್ ಪಡೆಯಲು ಬಾರಿ ಸರ್ಕಸ್ ಮಾಡುತ್ತಿದೆ.

karnataka polls: Polling Booth Material Issue Blacklisted Firm Chilume Participated In The Tender

ಮತದಾರರ ಮಾಹಿತಿ ಕಳವು ಮಾಡಿರುವ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯು ಶಿಕ್ಷಣ, ಸಂಸ್ಕೃತಿ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ನಗರದ ಮತಗಟ್ಟೆಗಳಿಗೆ ಸಾಮಗ್ರಿ ವಿತರಿಸುವ ಹಲವು ಟೆಂಡರ್‌ನಲ್ಲಿ ಭಾಗವಹಿಸಿದೆ. ಬಿಬಿಎಂಪಿ ಈ ಚಿಲುಮೆ ಸಂಸ್ಥೆಯನ್ನ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಿತ್ತು. ಅದರೂ ಸಹ ಈ ಬಾರಿ ವಿಧಾನಸಭಾ ಚುನಾವಣೆಗೆ ಮತಗಟ್ಟೆಗಳಿಗೆ ಬೇಕಾಗುವ ಸಾಮಗ್ರಿಗಳ ಪೂರೈಕೆ ಟೆಂಡರ್‍ನಲ್ಲಿ ಚಿಲುಮೆ ಸಂಸ್ಥೆ ಮತ್ತೆ ಭಾಗಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮತದಾರ ಮಾಹಿತಿ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯನ್ನೂ ಬಿಬಿಎಂಪಿ ಅಯುಕ್ತರು ಕಪ್ಪು ಪಟ್ಟಿಗೆ ಸೇರಿಸಿ, ಯಾವುದೇ ಪಾಲಿಕೆ ಟೆಂಡರ್ ನಲ್ಲಿ ಭಾಗವಹಿಸದಂತೆ ಆದೇಶ ನೀಡಿದ್ದರು. ಅದರೆ ಕೆಲ ರಾಜಕೀಯ ಮುಖಂಡರ ಜೊತೆ ಕೈಜೊಡಿಸಿರುವ ಚಿಲುಮೆ ಸಂಸ್ಥೆ ಮತ್ತೆ ಚುನಾವಣಾ ಹೊತ್ತಲಿ ಕೆಲ ರಾಜಕೀಯ ಮುಖಂಡದ ಜೊತೆಗೆ ಕೈ ಜೋಡಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಂದಾಗಿದೆ.

ನಗರ ಹೆಚ್ಚುವರಿ ಜಿಲ್ಲಾ ಚುನಾವಣೆ ಅಧಿಕಾರಿಗಳು ಮತದಾನದ ದಿನದಂದು ಮತಗಟ್ಟೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುವ ಹಿನ್ನೆಲೆ ಟೆಂಡರ್ ಕರೆದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿದ್ದ ಚಿಲುಮೆ ಸಂಸ್ಥೆಯೂ ಈ ಬಾರಿಯು ಹಲವು ಟೆಂಡರ್‌ಗಳಲ್ಲೂ ಪಾಲ್ಗೊಂಡಿದೆ. ಅದರೆ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಕೆಳಹಂತದ ಅಧಿಕಾರಿಗಳಲ್ಲಿ ಗೊಂದಲವಿತ್ತು. ತಾಂತ್ರಿಕ ಮೌಲ್ಯಮಾಪನದೊಂದಿಗೆ ಬಿಬಿಎಂಪಿಯ ಕೆಲವು ಅಧಿಕಾರಿಗಳು ಚಿಲುಮೆ ಟ್ರಸ್ಟ್‌ಗೆ ಟೆಂಡರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ಅವರು ಇತ್ತೀಚೆಗೆ ನೀಡಿದ್ದ ತನಿಖಾ ವರದಿಯಲ್ಲಿ ಚೆಲುಮೆ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿದ್ದು, ಅದನ್ನು ವಿದೇಶದ ಸರ್ವರ್‍ನಲ್ಲಿ ಸಂಗ್ರಹಿಸಿದೆ ಎಂಬ ವರದಿ ಕೂಡ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+