ಕರ್ನಾಟಕದಲ್ಲಿ ಅತಂತ್ರ ಸರಕಾರ ಸೃಷ್ಟಿಯಾಗಲ್ಲ: ತಜ್ಞರ ಅಭಿಮತ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 13: 2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಇಡೀ ದೇಶವೇ ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ಕಾಂಗ್ರೆಸ್ ಕೈಯಲ್ಲಿ ಉಳಿದಿರುವ ಅತೀ ದೊಡ್ಡ ರಾಜ್ಯವನ್ನು ಯಾರು ಬಗಲಿಗೆ ಹಾಕಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ.

ಒಂದೊಮ್ಮೆ ಅತಂತ್ರ ಸರಕಾರ ಬಂದರೆ ಏನು ಮಾಡಬೇಕು ಎಂಬ ತಂತ್ರಗಳನ್ನೂ ಪ್ರಾದೇಶಿಕ ಪಕ್ಷಗಳು ಆದಿಯಾಗಿ ರಾಷ್ಟ್ರೀಯ ಪಕ್ಷಗಳೂ ಹಾಕಿಕೊಂಡಿವೆ.

ರಾಜ್ಯದ 224 ಕ್ಷೇತ್ರಗಳಿಗೂ ಒಂದೇ ಬಾರಿ ಚುನಾವಣೆ ಸಾಧ್ಯತೆ

ಆದರೆ ಕರ್ನಾಟಕದಲ್ಲಿ ಅತಂತ್ರ ಸರಕಾರದ ಸಾಧ್ಯತೆಗಳು ಇಲ್ಲ ಎನ್ನುತ್ತಾರೆ ಪ್ರಮುಖ ರಾಜಕೀಯ ತಜ್ಞ ಡಾ. ಸಂದೀಪ್ ಶಾಸ್ತ್ರಿ. "ಜನಾಭಿಪ್ರಾಯ ಸ್ಪಷ್ಟವಾಗಿರಲಿದೆ. ಅತಂತ್ರ ವಿಧಾನಸಭೆಯ ಸಾಧ್ಯತೆಗಳು ತೀರಾ ಕಡಿಮೆ," ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಯಾಕೆ ಅತಂತ್ರ ವಿಧಾನಸಭೆ ಸೃಷ್ಟಿಯಾಗುವುದಿಲ್ಲ ಎಂಬುದನ್ನು ಸಂದೀಪ್ ಶಾಸ್ತಿ ವಿವರಿಸಿದ್ದಾರೆ. 1983ರ ಉದಾಹರಣೆಯನ್ನು ಅವರು ನೀಡಿದ್ದಾರೆ. ಶಾಸ್ತ್ರಿ ಹೇಳಿದ್ದೇನು ಎಂಬುದನ್ನು ನೀವೇ ಓದಿ.

ಬಿಜೆಪಿ - ಕಾಂಗ್ರೆಸ್ ಹೋರಾಟ

ಬಿಜೆಪಿ - ಕಾಂಗ್ರೆಸ್ ಹೋರಾಟ

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವುದಿಲ್ಲ ಎಂಬುದಕ್ಕೆ ಎರಡು ಕಾರಣಗಳಿವೆ. ಒಂದು ಇವತ್ತು ಕರ್ನಾಟಕದಲ್ಲಿ ನಡೆಯುತ್ತರುವ ರಾಜಕೀಯ ಸಮರ. ಇನ್ನೊಂದು ಸಣ್ಣ ಮಟ್ಟಿಗಿನ ಪ್ರಭಾವವನ್ನಷ್ಟೇ ಉಳಿಸಿಕೊಂಡು ಮೂರನೇ ಸ್ಥಾನಕ್ಕೆ ಸೀಮಿತವಾಗಿರುವ ಪ್ರಾದೇಶಿಕ ಪಕ್ಷ ಜೆಡಿಎಸ್.

ಇದರಿಂದ ಮುಖ್ಯ ಸ್ಪರ್ಧೆ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯಲಿದೆ ಎನ್ನುತ್ತಾರೆ ಶಾಸ್ತ್ರಿ.

1983, 2004ರಲ್ಲಿ ಅತಂತ್ರ

1983, 2004ರಲ್ಲಿ ಅತಂತ್ರ

1983ರಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಇದಾದ ಬಳಿಕ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು 2004ರಲ್ಲಿ. ಈ ಎರಡೂ ಸಂದರ್ಭದಲ್ಲಿ ರಾಜಕೀಯ ಬದಲಾವಣೆಗೆ ಕರ್ನಾಟಕ ಸಾಕ್ಷಿಯಾಗಿದೆ.

1983ರಲ್ಲಿ ಏಕಪಕ್ಷದ ಪ್ರಾಬಲ್ಯ ಕೊನೆಯಾಯಿತು. 1983ರಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. ಆದರೆ ಜನತಾ ಪಾರ್ಟಿ ಕಾಂಗ್ರೆಸ್ ಗೆ ಪರ್ಯಾಯವಾಗುತ್ತದೆ ಎಂಬ ನಂಬಿಕೆ ಜನರಿಗೆ ಇರಲಿಲ್ಲ. ಪರಿಣಾಮ 1985ರಲ್ಲಿ ಜನತಾ ಪಕ್ಷ ಪೂರ್ಣ ಬಹುಮತ ಪಡೆಯಿತು.

1983-2004

1983-2004

1983ರಿಂದ 2004ರ ನಡುವೆ ಕಾಂಗ್ರೆಸ್ ಮತ್ತು ಜನತಾ ಪಕ್ಷದ ನಡುವೆ ನೇರ ಹಣಾಹಣಿ ಇತ್ತು. 2004ರಲ್ಲಿ ಈ ಪರಿಸ್ಥಿತಿ ಬದಲಾಯಿತು. ಮೂರನೇ ಸ್ಪರ್ಧಿಯಾಗಿ ಬಿಜೆಪಿ ಪ್ರವೇಶ ಪಡೆದುಕೊಂಡಿತು. 2004ರಲ್ಲಿ ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅದು ಜೆಡಿಎಸ್ ಮತ್ತು ಕಾಂಗ್ರೆಸ್ ಜತೆಗಿನ ಸ್ಪರ್ಧೆಯ ನಡುವೆ ಬಿಜೆಪಿ ಗಿಟ್ಟಿಸಿದ ಸ್ಥಾನಗಳು ಎಂದು ವಿವರಿಸುತ್ತಾರೆ ಶಾಸ್ತ್ರಿ.

ನಿಚ್ಚಳ ಬಹುಮತ ಪಕ್ಕಾ

ನಿಚ್ಚಳ ಬಹುಮತ ಪಕ್ಕಾ

ಇದೀಗ 2018ರಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಈ ವರ್ಷ ಯಾವುದೇ ರಾಜಕೀಯ ಬದಲಾವಣೆಯ ಸಾಧ್ಯತೆಗಳೂ ಇಲ್ಲ. ಹಾಗಾಗಿ ಈ ವರ್ಷ ಅತಂತ್ರ ವಿಧಾನಸಭೆ ಸೃಷ್ಟಿಯಾಗುವುದಿಲ್ಲ. ರಾಜ್ಯದ ರಾಜಕಾರಣ ಬದಲಾವಣೆಯ ಹಾದಿಯಲ್ಲಿದ್ದಾಗ ಮಾತ್ರ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎನ್ನುವುದು ಶಾಸ್ತ್ರಿಯವರ ವಾದ.

ಹಾಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೋ, ಕಾಂಗ್ರೆಸೋ ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ. ಈ ಉತ್ತರಕ್ಕಾಗಿ ಮೇ ವರೆಗೆ ಕಾಯಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All eyes are on the Karnataka Assembly Elections 2018. There are predictions already being made as to who would take the coveted states and many political parties are already conducting back-channel talks to take the seat of power at the Vidhana Soudha in case of a hung assembly. However leading political scientist Dr. Sandeep Shastri argues that the mandate would be a clear one and the chance of a hung assembly is very low.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ