Karnataka Police: ಕರ್ನಾಟಕ ಪೊಲೀಸರ ರಜೆ, ಗೃಹ ಸಚಿವರಿಗೆ ಸ್ಪೀಕರ್ ಪತ್ರ

ಬೆಂಗಳೂರು, ಜನವರಿ 25: ಕರ್ನಾಟಕದ ಸರ್ಕಾರಿ ನೌಕರರಿಗೆ ವಿವಿಧ ಮಾದರಿಯ ರಜೆಗಳಿವೆ. ಆದರೆ ಪೊಲೀಸ್ ಇಲಾಖೆಯ ರಜೆಯ ನಿಯಮಗಳು ಬೇರೆ ಇವೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಸದಾ ಕಾರ್ಯ ನಿರ್ವಹಣೆ ಮಾಡುವ ಪೊಲೀಸರ ರಜೆಯ ಕುರಿತು ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಗೃಹ ಸಚಿವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪೊಲೀಸರ ಕೋರಿಕೆಯನ್ನು ಪರಿಗಣಿಸಿ ಅಗತ್ಯಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಯು. ಟಿ. ಖಾದರ್ ತಮ್ಮ ಪತ್ರದಲ್ಲಿ ಪೊಲೀಸ್ ಇಲಾಖೆಯಲ್ಲಿ ಈ ಮೊದಲು ಪಿಸಿ ಹುದ್ದೆಯಿಂದ ಎಸ್‌ಐ ಹುದ್ದೆವರೆಗಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿ ವರ್ಷ ಪತ್ರಾಂಕಿತ ರಜೆಗಳಿಗೆ ಬದಲಾಗಿ, ಕ್ಯಾಲೆಂಡರ್ ವರ್ಷದಲ್ಲಿ ಸಾರ್ವತಿಕ ರಜಾ ದಿನಗಳಂದು ವಾಸ್ತವಾಗಿ ಕರ್ತವ್ಯ ನಿರ್ವಹಿಸಿದ ಅವಧಿಯ ಮುಕ್ತಾಯದ ನಂತರದಲ್ಲಿ, ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸಿರುವುದಕ್ಕಾಗಿ ಗರಿಷ್ಠ 30 ದಿನಗಳಿಗೆ ಒಳಪಟ್ಟು ಮುಕ್ತಾಯದ ದಿನದಂತೆ ಪಡೆಯುತ್ತಿದ್ದ ಸಂಬಳಕ್ಕೆ ಸಮಾನವಾದ ರಜಾ ಸಂಬಳವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.

Karnataka Police Leave Speaker UT Khader Letter

ಪ್ರಸ್ತುತ ಪಿಸಿ ಮತ್ತು ಹೆಚ್‌ಸಿ ದರ್ಜೆಯ ಸಿಬ್ಬಂದಿಗಳಿಗೆ ಪತ್ರಾಂಕಿತ ರಜೆಯ ದಿನಗಳಂದು ಕರ್ತವ್ಯ ನಿರ್ವಹಿಸಿದಕ್ಕಾಗಿ 30 ದಿನಗಳ ವೇತನವನ್ನು ಹಾಗೂ ಎಎಸ್‌ಐ ಮತ್ತು ಎಸ್‌ಐ ದರ್ಜೆಯ ಅಧಿಕಾರಿಗಳಿಗೆ 15 ದಿನಗಳ ವೇತನವನ್ನು ನೀಡಲಾಗುತ್ತಿದೆ. ವಾಸ್ತವವಾಗಿ ಪಿಸಿ ದರ್ಜೆಯಿಂದ ಎಸ್ಪಿ (ನಾನ್-ಐಪಿಎಸ್) ವರೆಗಿನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು (ಸಿವಿಲ್, ಸಶಸ್ತ್ರ, ಕೆಎಸ್‌ಆರ್‌ಪಿ, ಕೆ.ಎಸ್.ಐ.ಎಸ್.ಎಫ್, ನಿಸ್ತಂತು ಮತ್ತು ಬೆರಳಚ್ಚು) ಸರ್ಕಾರಿ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಮತ್ತು ಅವರ ಕೆಳಗಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪತ್ರಾಂಕಿತ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿರುವುದರಿಂದ 30 ದಿನಗಳ ವೇತನವನ್ನು ನೀಡಲಾಗುತ್ತಿದೆ.

ಅದರಂತೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಅವಿರತ ಸೇವೆಯನ್ನು ಗಮನದಲ್ಲಿರಿಸಿಕೊಂಡು, ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ, ಪಿಸಿ ದರ್ಜೆಯಿಂದ ಎಸ್ಪಿ (ನಾನ್-ಐಪಿಎಸ್) ದರ್ಜೆಯ ವರೆಗಿನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 30 ದಿನಗಳ ಪತ್ರಾಂಕಿತ ರಜಾ ವೇತನವನ್ನು ಮಂಜೂರು ಮಾಡಿಸಲು ಕ್ರಮಕೈಗೊಳ್ಳಬೇಕೆಂದು ಕೋರಿರುತ್ತಾರೆ.

ಸದರಿಯವರ ಕೋರಿಕೆಯನ್ನು ಪರಿಗಣಿಸಿ ಅಗತ್ಯಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರಗೆ ಸ್ಪೀಕರ್ ಯು. ಟಿ. ಖಾದರ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಪೊಲೀಸ್ ಸಿಬ್ಬಂದಿಯ ಉತ್ತಮ ದೈಹಿಕ ಮತ್ತು ವೃತ್ತಿಪರ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ವಾರದ ರಜೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆಗ ವಾರದ ರಜೆ ನೀಡುವ ಕುರಿತು ಸುತ್ತೋಲೆಯನ್ನು ಸಹ ಹೊರಡಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+