• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೋನ್ ಟ್ಯಾಪಿಂಗ್ : ಸಿದ್ದರಾಮಯ್ಯ ವಿರುದ್ದ 'ಎಚ್ಡಿಕೆ - ಡಿಕೆಶಿ' ಒಂದಾದಾಗ!

|
   ಕುಮಾರಣ್ಣನ ಬೆಂಬಲಕ್ಕೆ ನಿಂತ ಡಿ ಕೆ ಶಿವಕುಮಾರ್..!

   ಬೆಂಗಳೂರು, ಆ 16: ಫೋನ್ ಕದ್ದಾಲಿಕೆ ಪ್ರಕರಣ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿರುಕು ಮೂಡಿಸುತ್ತಿರುವುದು ಒಂದು ಕಡೆಯಾದರೆ, ಕಾಂಗ್ರೆಸ್ ಪಕ್ಷದೊಳಗೆ ಹಿರಿಯ ಮುಖಂಡರುಗಳ ನಡುವಿನ ಹೊಂದಾಣಿಕೆಯಲ್ಲೂ ಏರುಪೇರು ಆಗುವಂತೆ ಮಾಡಿದೆ.

   ಪ್ರಮುಖವಾಗಿ, ಈ ಪ್ರಕರಣ ಮಾಜಿ ಸಿಎಂ ಕುಮಾರಸ್ವಾಮಿಯವರ ವಿರುದ್ದ ಸುತ್ತಲು ಆರಂಭಿಸಿರುವುದರಿಂದ, ಅವರ ಬೆನ್ನಿಗೆ ನಿಲ್ಲುವ ಹಾಗೇ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ನೀಡಿದ್ದಾರೆ. ಫೋನ್ ಟ್ಯಾಪಿಂಗ್ ನಡೆದೇ ಇಲ್ಲ ಎನ್ನುವ ಹೇಳಿಕೆಯನ್ನು ಡಿಕೆಶಿ ನೀಡುವ ಮೂಲಕ, ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಎಂ ಬಿ ಪಾಟೀಲರ ವಿರುದ್ದ ಎಚ್ಡಿಕೆ - ಡಿಕೆಶಿ ನಿಂತರಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

   ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ಘೋಷಿಸಿದ ಡಿಕೆಶಿ

   ಮಾಜಿ ಸಿಎಂ ಮತ್ತು ಸಿಎಲ್ಪಿ ಮುಖಂಡರಾಗಿರುವ ಸಿದ್ದರಾಮಯ್ಯನವರ ಫೋನೂ ಕದ್ದಾಲಿಕೆಯಾಗಿತ್ತು ಎನ್ನುವ ಸುದ್ದಿಯ ನಡುವೆ, ಡಿ ಕೆ ಶಿವಕುಮಾರ್ ಬಹಿರಂಗವಾಗಿಯೇ ಟ್ಯಾಪಿಂಗ್ ಆಗಿಲ್ಲ ಎನ್ನುವ ಹೇಳಿಕೆ, ಕುಮಾರಸ್ವಾಮಿಯವರನ್ನು ಸಮರ್ಥಿಸಿಕೊಂಡಂತಾಗಿದೆ, ಜೊತೆಗೆ, ಪಾಟೀಲರಿಗೂ ತಿರುಗೇಟು ನೀಡಿದಂತಾಗಿದೆ.

   ಟೆಲಿಫೋನ್ ಕದ್ದಾಲಿಕೆ ಪ್ರಕರಣ: ಸಂಕಷ್ಟದಲ್ಲಿ ಕುಮಾರಸ್ವಾಮಿ

   ಸಿದ್ದರಾಮಯ್ಯನವರ ಫೋನ್ ಕದ್ದಾಲಿಕೆಯಾಗಿರುವುದನ್ನು ಕಾಂಗ್ರೆಸ್ಸಿನ ಪ್ರಭಾವೀ ಮುಖಂಡರೊಬ್ಬರು ದಾಖಲೆ ಸಮೇತ ಹೈಕಮಾಂಡಿಗೆ ಸಲ್ಲಿಸಿದ್ದಾರೆ ಎನ್ನುವ ಸುದ್ದಿಯ ನಡುವೆ, ಡಿಕೆಶಿ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

   ಕುಮಾರಸ್ವಾಮಿ, ಡಿಕೆಶಿ ಇಬ್ಬರು ಮಾತ್ರ, ಫೋನ್ ಟ್ಯಾಪ್ ಆಗಿಲ್ಲ ಎನ್ನುವ ಹೇಳಿಕೆ

   ಕುಮಾರಸ್ವಾಮಿ, ಡಿಕೆಶಿ ಇಬ್ಬರು ಮಾತ್ರ, ಫೋನ್ ಟ್ಯಾಪ್ ಆಗಿಲ್ಲ ಎನ್ನುವ ಹೇಳಿಕೆ

   ಜೆಡಿಎಸ್ ಅಥವಾ ಕಾಂಗ್ರೆಸ್ಸಿನ ಯಾವುದೇ ಮುಖಂಡರು ಫೋನ್ ಕದ್ದಾಲಿಕೆಯಾಗಿಲ್ಲ ಎಂದು ಸಮರ್ಥಿಸಿಕೊಳ್ಳದಿರುವ ಈ ಹೊತ್ತಿನಲ್ಲಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಇಬ್ಬರು ಮಾತ್ರ, ಫೋನ್ ಟ್ಯಾಪ್ ಆಗಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. "ಯಾವ ಫೋನ್‌ ಸಹ ಟ್ಯಾಪ್‌ ಆಗಿಲ್ಲ.ಮುಖ್ಯಮಂತ್ರಿಗಳು ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ. ಇದರಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ " ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದ್ದರು.

   ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ

   ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ

   "ನಾನೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ ಎಂದು ಎಂ ಬಿ ಪಾಟೀಲ್ ಹೇಳಿದ್ದರು. ಇದನ್ನು ಉಲ್ಲೇಖಿಸಿದ ಡಿ ಕೆ ಶಿವಕುಮಾರ್, "ಪಾಟೀಲ್ ಸಾಹೇಬ್ರು ಈ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ" ಎಂದು ಹೇಳುವ ಮೂಲಕ ಅವರಿಗೆ ತಿರುಗೇಟು ನೀಡಿದ್ದಾರೆ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

   ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ

   ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ

   "ಡಿ ಕೆ ಶಿವಕುಮಾರ್ ನನ್ನ ಹೇಳಿಕೆಯನ್ನು ಸರಿಯಾಗಿ ಕೇಳಿಸಿಕೊಳ್ಲದೇ ಉತ್ತರ ನೀಡಿದ್ದಾರೆ. ಸರಿಯಾಗಿ ಕೇಳಿಸಿಕೊಂಡು ಕಾಮೆಂಟ್ ಮಾಡಬೇಕು. ನಾನು, ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಸಂಶಯವಿದೆ ಸರ್ ಎಂದು ಅವರುಗಳು ಹೇಳಿದ್ದಾರೆ. ಇದನ್ನು ಆಧರಿಸಿ, ಮುಖ್ಯಮಂತ್ರಿಗಳಿಗೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಿ" ಎಂದು ಹೇಳಿರುವುದು ಎಂದು ಎಂ ಬಿ ಪಾಟೀಲ್, ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

   ಒಂದು ವೇಳೆ ಟ್ಯಾಪಿಂಗ್ ಆಗಿದ್ದರೆ, ಯಾರ್ಯಾರ ಫೋನ್ ಟ್ಯಾಪ್ ಆಗಿದೆ

   ಒಂದು ವೇಳೆ ಟ್ಯಾಪಿಂಗ್ ಆಗಿದ್ದರೆ, ಯಾರ್ಯಾರ ಫೋನ್ ಟ್ಯಾಪ್ ಆಗಿದೆ

   " ಫೋನ್ ಕದ್ದಾಲಿಕೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು, ಅದರ ವರದಿ ಮೂರು ತಿಂಗಳೊಳಗೆ ಬರಬೇಕು. ಒಂದು ವೇಳೆ ಟ್ಯಾಪಿಂಗ್ ಆಗಿದ್ದರೆ, ಯಾರ್ಯಾರ ಫೋನ್ ಟ್ಯಾಪ್ ಆಗಿದೆ, ಟ್ಯಾಪ್ ಮಾಡಲು ಹೇಳಿರುವುದು ಯಾರು ಎನ್ನುವ ವಿಚಾರ ಹೊರಬರಬೇಕು" ಎಂದು ಎಂ ಬಿ ಪಾಟೀಲ್ ಮತ್ತೆ ಹೇಳಿಕೆ ನೀಡುವ ಮೂಲಕ, ಡಿಕೆಶಿಗೆ ಪ್ರತ್ಯುತ್ತರ ನೀಡಿದ್ದಾರೆ.

   ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು, ಸಿದ್ದರಾಮಯ್ಯ

   ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು, ಸಿದ್ದರಾಮಯ್ಯ

   "ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಕೇಳಿ ಬರುತ್ತಿರುವ ಆರೋಪಗಳ ಕುರಿತು ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು" ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಖಡಾಖಂಡಿತವಾಗಿ, ಡಿ ಕೆ ಶಿವಕುಮಾರ್, ಟ್ಯಾಪಿಂಗ್ ಆಗಿಲ್ಲ ಎಂದು ಹೇಳಿಕೆಯನ್ನು ನೀಡಿ, ಒಂದು ಕಡೆ, ಕುಮಾರಸ್ವಾಮಿಯವರನ್ನು ಸಮರ್ಥಿಸಿಕೊಂಡಂತಾಗಿದೆ, ಇನ್ನೊಂದು ಕಡೆ, ಸಿದ್ದರಾಮಯ್ಯ ಮತ್ತು ಎಂ ಬಿ ಪಾಟೀಲ್ ಹೇಳಿಕೆಗೆ ವಿರುದ್ದವಾಗಿ ನಿಂತುಕೊಂಡಂತಾಗಿದೆ.

   English summary
   Karnataka Phone Tapping: Congress Leaders Dual Stand, DK Shivakumar Stands With former CM HD Kumaraswamy. While Siddaramaiah and MB Patil demanding for enquiry, DK Shivakumar said, phone tapping news is a political drama.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X