ಮಹಾರಾಷ್ಟ್ರ, ಕೇರಳದಲ್ಲಿ ಪ್ರಚಾರಕ್ಕೆ ಹೋಗಿದ್ದ ಸಿದ್ದರಾಮಯ್ಯ ಕಾಲ್ಗುಣ! ಆ ಕ್ಷೇತ್ರಗಳ ಫಲಿತಾಂಶ
ಪ್ರಸಕ್ತ ಕರ್ನಾಟಕ ರಾಜಕಾರಣದಲ್ಲಿ ಫುಲ್ ಸ್ವಿಂಗ್ ನಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಹಾರಾಷ್ಟ್ರ ಅಸೆಂಬ್ಲಿ ಮತ್ತು ಕೇರಳದ ಅಸೆಂಬ್ಲಿ ಉಪಚುನಾವಣೆಯ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದ ಮೇಲೆ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಬಂದಿದ್ದರು.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತಗಳಿಸಿದ್ದರೂ, 50:50 ಹಂಚಿಕೆಯ ವಿಚಾರದಲ್ಲಿ, ಎರಡು ಪಕ್ಷಗಳ ನಡುವೆ ಒಮ್ಮತ ಮೂಡುತ್ತಿಲ್ಲ. ಇನ್ನೆರಡು ದಿನಗಳಲ್ಲಿ, ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಸಿದ್ದರಾಮಯ್ಯ, ಮಹಾರಾಷ್ಟ್ರದ ಮೂರು ಅಸೆಂಬ್ಲಿ ಮತ್ತು ಕೇರಳದ ಒಂದು ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಆ ಕ್ಷೇತ್ರದ ಫಲಿತಾಂಶ, ಕಾಂಗ್ರೆಸ್ಸಿಗೆ ಲಾಭ ತಂದುಕೊಟ್ಟಿದೆಯೇ?

ಸಿದ್ದರಾಮಯ್ಯ ಪ್ರಚಾರ ಮಾಡಿದ ಕ್ಷೇತ್ರಗಳ ಫಲಿತಾಂಶ
ಸಿದ್ದರಾಮಯ್ಯ ಪ್ರಚಾರ ಮಾಡಿದ ಕ್ಷೇತ್ರಗಳ ಫಲಿತಾಂಶ ಏನೇ ಬರಲಿ, ಆದರೆ, ಕಾಂಗ್ರೆಸ್ ಹೈಕಮಾಂಡ್ ಅವರನ್ನು ಒಬ್ಬ ಮಾಸ್ ಲೀಡರ್ ಎಂದು ಪರಿಗಣಿಸಿದ್ದಂತೂ ಹೌದು. ಜೊತೆಗೆ, ಕಳೆದ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ (ಮಹಾರಾಷ್ಟ್ರ), ಈ ಬಾರಿ, ಕಾಂಗ್ರೆಸ್ಸಿನದ್ದು ನಿರಾಶದಾಯಕ ಸಾಧನೆಯಂತೂ ಅಲ್ಲ.

ಕಾಸರಗೋಡು, ಕೇರಳ
ವಿಜೇತ ಅಭ್ಯರ್ಥಿ: ಎಂ.ಸಿ.ಖಮರುದ್ದೀನ್
ಪಕ್ಷ: ಕಾಂಗ್ರೆಸ್ ಬೆಂಬಲಿತ ಐಯುಎಂಎಲ್ (ಮುಸ್ಲಿಂಲೀಗ್)
ವಿಜೇತ ಅಭ್ಯರ್ಥಿ ಪಡೆದ ಅಭ್ಯರ್ಥಿ: 65,407
ಪರಾಜಿತ ಅಭ್ಯರ್ಥಿ: ರವೀಶ್ ತಂತ್ರಿ (ಬಿಜೆಪಿ)
ಪರಾಜಿತ ಅಭ್ಯರ್ಥಿ ಪಡೆದ ಅಭ್ಯರ್ಥಿ: 56,870
ಗೆಲುವಿನ ಅಂತರ: 7,923

ಸಾಂಗ್ಲಿ, ಮಹಾರಾಷ್ಟ್ರ
ವಿಜೇತ ಅಭ್ಯರ್ಥಿ: ಧನಂಜಯ ಸುಧೀರ್ ಗಾಡ್ಗೀಳ್
ಪಕ್ಷ: ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಅಭ್ಯರ್ಥಿ: 93,6367
ಪರಾಜಿತ ಅಭ್ಯರ್ಥಿ: ಪೃಥ್ವಿರಾಜ್ ಪಾಟೀಲ್ (ಕಾಂಗ್ರೆಸ್)
ಪರಾಜಿತ ಅಭ್ಯರ್ಥಿ ಪಡೆದ ಅಭ್ಯರ್ಥಿ: 86,697
ಗೆಲುವಿನ ಅಂತರ: 6,939

ಜತ್, ಮಹಾರಾಷ್ಟ್ರ
ವಿಜೇತ ಅಭ್ಯರ್ಥಿ: ವಿ.ಬಾಳಾಸಾಹೇಬ್ ಸಾವಂತ್
ಪಕ್ಷ: ಕಾಂಗ್ರೆಸ್
ವಿಜೇತ ಅಭ್ಯರ್ಥಿ ಪಡೆದ ಅಭ್ಯರ್ಥಿ: 87,184
ಪರಾಜಿತ ಅಭ್ಯರ್ಥಿ: ಜೆ.ವಿಲಾಸ್ ರಾವ್ ನಾರಾಯಣ್ (ಬಿಜೆಪಿ)
ಪರಾಜಿತ ಅಭ್ಯರ್ಥಿ ಪಡೆದ ಅಭ್ಯರ್ಥಿ: 52,510
ಗೆಲುವಿನ ಅಂತರ: 34,674

ಅಕ್ಕಲಕೋಟ್, ಮಹಾರಾಷ್ಟ್ರ
ವಿಜೇತ ಅಭ್ಯರ್ಥಿ: ಕಲ್ಯಾಣಶೆಟ್ಟಿ ಸಚಿನ್ ಪಂಚಪ್ಪ
ಪಕ್ಷ: ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಅಭ್ಯರ್ಥಿ: 119,437
ಪರಾಜಿತ ಅಭ್ಯರ್ಥಿ: ಸಿದ್ದರಾಂ ಸತ್ಲಿಂಗ್ ಮೇತ್ರಿ (ಕಾಂಗ್ರೆಸ್)
ಪರಾಜಿತ ಅಭ್ಯರ್ಥಿ ಪಡೆದ ಅಭ್ಯರ್ಥಿ: 82,668
ಗೆಲುವಿನ ಅಂತರ: 36,769












Click it and Unblock the Notifications