ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ನಂ.1: ಪ್ರಶಸ್ತಿ ಸ್ವೀಕರಿಸಿದ ಸಿದ್ದರಾಮಯ್ಯ

Written By: Ramesh
Subscribe to Oneindia Kannada

ನವದೆಹಲಿ, ನವೆಂಬರ್. 06 : ದೇಶದ ಆರ್ಥಿಕ ಪ್ರಗತಿಯಲ್ಲಿ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರಸ್ಥಾನ ದೊರೆತಿದೆ. ಶುಕ್ರವಾರ ದೆಹಲಿಯಲ್ಲಿ ಇಂಡಿಯಾ ಟುಡೇ ಆಯೋಜಿಸಿದ್ದ 'ಸ್ಟೇಟ್ ಆಫ್ ದಿ ಸ್ಟೇಟ್ಸ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.

ದೇಶದ ದೊಡ್ಡ ರಾಜ್ಯಗಳ ಪೈಕಿ ಆರ್ಥಿಕ ವಿಭಾಗದ ಇಂಡಿಯಾ ಟುಡೆ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. 2014ರಲ್ಲಿ 2,361 ಕೋಟಿ ರೂ. ಇದ್ದ ಬಂಡವಾಳ ಹೂಡಿಕೆ 2015ರಲ್ಲಿ 13,780 ಕೋಟಿ ರೂ.ಗೆ ಏರಿಕೆ ಆಗಿರುವುದರಿಂದ ಕರ್ನಾಟಕಕ್ಕೆ ನಂ.1 ಸ್ಥಾನ ಲಭಿಸಿದೆ.[ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕವೇ ನಂ.1]

CM Siddaramaiah Receiving the

ಇದರಲ್ಲಿ ಹೂಡಿಕೆಗೆ ಅಗತ್ಯವಾದ ವಾತಾವರಣ, ಕೃಷಿ, ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ಇ - ಆಡಳಿತವನ್ನು ಪರಿಗಣನೆಗೆ ತೆಗೆದುಕೊಂಡು ಇಂಡಿಯಾ ಟುಡೆ ಮ್ಯಾಗಜಿನ್ ಈ ಸಮೀಕ್ಷೆ ನಡೆಸಿತ್ತು.

ಕರ್ನಾಟಕದ ಜಿಡಿಪಿ ಪರ್ ಕ್ಯಾಪಿಟಾ ಶೇ.16ರಷ್ಟು ಹೆಚ್ಚಾಗಿದ್ದು, 2014-15ರಲ್ಲಿ 77,168 ರೂ ಇದ್ದದ್ದು 2015-16ರಲ್ಲಿ 89,545 ರೂ.ಗೆ ಏರಿಕೆ ಆಗಿದೆ.

ಇನ್ನು ಒಟ್ಟಾರೆ ಶ್ರೇಯಾಂಕದ ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ ಲಭಿಸಿದ್ದು ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದೆ. ಉತ್ತರಾಖಂಡ್ ಹಾಗೂ ಗುಜರಾತ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Receiving the "Most Improved State Award" for Karnataka, Chief Minister Siddaramaiah shared the strategy that helped his government to usher and sustain inclusive growth in Karnataka. Which also is the success mantra that helped the state bag the prestigious award at the India Today State of States Conclave.
Please Wait while comments are loading...