ಕರ್ನಾಟಕದ ಇಂದಿನ ಸಖತ್ ಸುದ್ದಿಗಳು

ಬೆಂಗಳೂರು, ಸೆ. 30 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 5 ಗಂಟೆ : ನಕಲಿ ದಾಖಲೆ ನೀಡಿ ನಿವೇಶನ ಪಡೆದ ಆರೋಪ, ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ. [ವಿವರ ಇಲ್ಲಿದೆ ನೋಡಿ]

ಸಮಯ 4 ಗಂಟೆ : ನಕಲಿ ಕೆಲಸದ ಅನುಭವ ಪ್ರಮಾಣ ಪತ್ರ ನೀಡುತ್ತಿದ್ದ ಬೃಹತ್ ಜಾಲ ಬೆಂಗಳೂರಿನಲ್ಲಿ ಪತ್ತೆ, 20 ಜನರ ಬಂಧನ

ಸಮಯ 3.30 : ಜಯಲಲಿತಾ ಆರೋಗ್ಯ ಸ್ಥಿರವಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡುವುದಿಲ್ಲ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟನೆ

ಸಮಯ 3 ಗಂಟೆ : ಜಯಲಿತಾ ಜಾಮೀನು ಅರ್ಜಿ ಬುಧವಾರ ಹೈಕೋರ್ಟ್ ವಿಶೇಷ ಪೀಠದಲ್ಲಿ ವಿಚಾರಣೆ. [ಜಯಾ ಜಾಮೀನು ಅರ್ಜಿ ನಾಳೆ ವಿಚಾರಣೆ]

ಸಮಯ 2 ಗಂಟೆ : ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಜಯಲಲಿತಾ ಅವರ ಭೇಟಿ ರದ್ದಾಗಿದೆ. ನಿಮ್ಮ ಕೆಲಸವನ್ನು ನೋಡಿಕೊಳ್ಳಿ ಜೈಲಿಗೆ ಬರುವುದು ಬೇಡ ಎಂದು ಜಯಲಲಿತಾ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಸೆಲ್ವಂ ಸೋಮವಾರ ಸಂಜೆಯಿಂದ ಜಯಾ ಭೇಟಿಯಾಗಿ ಕಾದು ಕುಳಿತಿದ್ದರು.

ಸಮಯ 12 ಗಂಟೆ : ಜಯಲಲಿತಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ 50 ಕ್ಕೂ ಹೆಚ್ಚು ಅಮ್ಮಾ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಸಮೀಪ ಪ್ರತಿಭಟನೆ ನಡೆಸುತ್ತಿದ್ದಾರೆ.

papappamna agrahara

ಸಮಯ 11.45 : ಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ರಾಜೇಂದರ್ ಕುಮಾರ ಕಟಾರಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಸಮಯ 11.30 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ.

ಸಮಯ 10.30 : ಕರ್ನಾಟಕ ಹೈಕೋರ್ಟ್‌ ಕಲಾಪ ಆರಂಭವಾಗಿದೆ. ಜಯಲಲಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ಕೆಲವು ಹೊತ್ತಿನಲ್ಲಿ ನಡೆಯುವ ಸಾಧ್ಯತೆ ಇದೆ. ಕೋರ್ಟ್‌ ಹಾಲ್‌ನಲ್ಲಿ ನೂರಾರು ವಕೀಲರು ತುಂಬಿದ್ದು, ಕಲಾಪ ವೀಕ್ಷಿಸಲು ಕುತೂಹಲದಿಂದ ಕಾದು ನಿಂತಿದ್ದಾರೆ.

high court

ಸಮಯ 9.30 : ಕರ್ನಾಟಕದ ಎರಡನೇ ಹಂತದ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ಗುಲ್ಬರ್ಗ, ಶಿವಮೊಗ್ಗ, ಮೈಸೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದು, ನಂತರ ಹೈ ಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಸಮಯ 9 ಗಂಟೆ : ಜಯಲಲಿತಾ ಅವರ ಆರೋಗ್ಯ ಸ್ಥಿರವಾಗಿದೆ, ಅವರ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಮಂಗಳವಾರ ಬೆಳಗ್ಗೆ ಜಯಲಲಿತಾ ಅವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಜಯಲಲಿತಾ ಅವರು ಹೊರಗಿನಿಂದ ತಂದಿದ್ದ ದೋಸೆ ಮತ್ತು ಪೊಂಗಲ್‌ಅನ್ನು ಬೆಳಗಿನ ಉಪಹಾರಕ್ಕಾಗಿ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.

ಸಮಯ 8.30 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಇತರ ಮೂವರು ಅಪರಾಧಿಗಳು ಜಾಮೀನು ಕೋರಿ ಮತ್ತು ವಿಶೇಷ ನ್ಯಾಯಾಲಯದ ತೀರ್ಪಿಗೆ ತಡೆ ನೀಡುವಂತೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಇಂದು ನಡೆಯುವ ಸಾಧ್ಯತೆ ಇದೆ. ಜಯಲಲಿತಾ ಅವರು 52 ಪುಟಗಳ ಮೇಲ್ಮನವಿಯಲ್ಲಿ 136 ಕಾರಣಗಳನ್ನು ನೀಡಿ ಜಾಮೀನು ಕೋರಿದ್ದಾರೆ ಮತ್ತು ತಾತ್ಕಾಲಿಕವಾಗಿ ಶಿಕ್ಷೆಯನ್ನು ಅಮಾನತ್ತಿನಲ್ಲಿಡುವಂತೆಯೂ ಮನವಿ ಸಲ್ಲಿಸಿದ್ದಾರೆ.

ಸಮಯ 8 ಗಂಟೆ : ಮಂಗಳವಾರ ಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಮಂಡ್ಯ, ಗುಲ್ಬರ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+