ಹಂಸಲೇಖ, ದಿ.ಗೋಪಾಲ ವಾಜಪೇಯಿಗೆ ನಾಟಕ ಅಕಾಡೆಮಿ ಗೌರವ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ನಾಟಕ ಅಕಾಡೆಮಿಯು ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ಹಾಗೂ ದತ್ತಿ ನಿಧಿ ಪ್ರಶಸ್ತಿಗಳಿಗೆ ಅರ್ಹ ರಂಗಸಾಧಕರನ್ನು ಆಯ್ಕೆ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೃತ್ತಿರಂಗಭೂಮಿ, ಮಕ್ಕಳ ರಂಗಭೂಮಿ, ಹವ್ಯಾಸಿ, ಗ್ರಾಮೀಣ, ಪೌರಾಣಿಕ ರಂಗಭೂಮಿ ಹಾಗೂ ನೇಪಥ್ಯ, ಸಂಗೀತ, ಮೇಕಪ್, ರಂಗಸಂಗೀತ ಇತ್ಯಾದಿ ಪ್ರಕಾರಗಳಲ್ಲಿ ಶ್ರಮಿಸಿರುವವರಿಗೆ ಪ್ರಾತಿನಿಧ್ಯ ನೀಡಲಾಗಿದೆ.

ರಂಗಸಾಧನೆ ಗೌರವ ಪ್ರಶಸ್ತಿಗೆ 2015ನೇ ಸಾಲಿಗೆ ದಾವಣಗೆರೆಯ ಮಾನೂಬಾಯಿ ನಾಕೋಡ, 2016ನೇ ಸಾಲಿಗೆ ಹಂಸಲೇಖ ಆಯ್ಕೆಯಾಗಿದ್ದಾರೆ.[ಕರ್ನಾಟಕ ಕ್ರೀಡಾರತ್ನ ಮತ್ತು ಏಕಲವ್ಯ ಪ್ರಶಸ್ತಿ ಪ್ರಕಟ]

Hamsalekha

2015ನೇ ಸಾಲಿನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ.
ದೇವಿರಪ್ಪ ಶಿವಪ್ಪ ಬಣಕಾರ, ಹಾವೇರಿ-ನಟ, ವೆಂಕಟೇಶ ಕುಲಕರ್ಣಿ, ಬಾಗಲಕೋಟೆ-ನಾಟಕಮಾಸ್ತರು, ನಿರ್ದೇಶಕರು, ಕೆ.ವಿ.ಕೃಷ್ಣಯ್ಯ, ಬೆಂಗಳೂರು ನಗರ- ನಾಟಕಕಾರರು, ಪೂಜಾರ ಚಂದ್ರಪ್ಪ, ದಾವಣಗೆರೆ- ನಟ, ಹಾರ್ಮೋನಿಯಂ ಮಾಸ್ತರ್, ಟಿ.ಆರ್.ರಾಮಚಂದ್ರರಾವ್, ಬೆಂಗಳೂರು- ನೇಪಥ್ಯ, ಕೆ.ವಿ.ವೆಂಕಟೇಶ್, ಚಾಮರಾಜನಗರ- ನಟ.

ಎಸ್.ಕೆ. ಸೂರಯ್ಯ, ಚಿತ್ರದುರ್ಗ-ನಟ, ಸರೋಜಿನಿ, ಮೈಸೂರು- ನಟಿ, ವಿಠ್ಠಲಕೊಪ್ಪ, ಧಾರವಾಡ- ನಟ, ಕಿಶೋರ್ ಡಿ ಶೆಟ್ಟಿ, ಮಂಗಳೂರು- ನಟ, ಸಂಘಟಕ, ಚಂದ್ರು ಉಡುಪಿ, ಶಿರಸಿ, ಉತ್ತರ ಕನ್ನಡ- ನಟಿ, ನೇಪಥ್ಯ, ಮಾನಮ್ಮ ರಾಯನಗೌಡ, ರಾಯಚೂರು-ನಟಿ, ಗಾಯಕಿ, ವನಜಶ್ರೀ ಶೆಟ್ಟಿ, ಬೆಂಗಳೂರು- ನಟಿ, ಬಿ.ಇ.ತಿಪ್ಪೇಸ್ವಾಮಿ, ದಾವಣಗೆರೆ- ನಟ, ಹಾರ್ಮೋನಿಯಂ ಮಾಸ್ತರ್, ಪರಶುರಾಮ ಪ್ರಿಯ, ಕೊಪ್ಪಳ- ನಟ, ನಿರ್ದೇಶಕ.[ಈಬಾರಿ ಯಾರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದರೆ ಲೇಸು?]

2016ನೇ ಸಾಲಿನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿವರ
ಎಲ್.ರಾಮಕೃಷ್ಣ, ಬೆಂಗಳೂರು ಗ್ರಾಮಾಂತರ- ನಿರ್ದೇಶನ, ವಿರೂಪಾಕ್ಷರಾವ್ ಮೊರಗೇರಿ, ಬಳ್ಳಾರಿ- ತಬಲ, ಬಸವರಾಜ ಹೂಗಾರ, ವಿಜಯಪುರ- ತಬಲ, ಮಹಾಂತಯ್ಯ ಖಾನಪೂರ, ಯಾದಗಿರಿ- ಹಾರ್ಮೋನಿಯಂ, ಎಚ್.ಹನುಮಂತ ನರಬೋಳಿ, ಕಲಬುರ್ಗಿ- ತಬಲ, ಆಶೋಕ ನೇಸರಗಿ, ಬೆಳಗಾವಿ- ನಟ, ನಾಟಕಕಾರರು, ಸಿದ್ಧಪ್ಪ ನಿಂಗಪ್ಪ ಗುಳ್ಳೆ, ಗದಗ-ಹಾರ್ಮೋನಿಯಂ.

Karnataka nataka acadeny awardees list announced

ಭಾಗ್ಯಶ್ರೀ, ಬೆಂಗಳೂರು-ನಟಿ, ಮಹದೇವಪ್ಪ ಹುಣಶ್ಯಾಳ, ಬೀದರ್- ನೇಪಥ್ಯ, ಬೈರ್ನಯಳ್ಳಿ ಶಿವರಾಂ, ರಾಮನಗರ-ನಿರ್ದೇಶನ, ಚೌಡಶೆಟ್ಟಿ, ಮಂಡ್ಯ- ನಿರ್ದೇಶನ, ವೆಂಕಟೇಶ್, ಹಾಸನ- ನಟ, ವಾಸುದೇವರಾವ್, ಉಡುಪಿ- ನಟ, ಲಕ್ಷ್ಮಣದಾಸ್, ತುಮಕೂರು-ನಟ, ನಿರ್ದೇಶನ, ಚೇತನ ಡಿ ಪ್ರಸಾದ್, ಕೋಲಾರ- ನಟ.[ಯಕ್ಷಗಾನ ಅರ್ಥಧಾರಿ ಎಂಎ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ]

ಕಮಲಮ್ಮ ಬೀಳಗಿ, ಬಾಗಲಕೋಟೆ- ನಟಿ, ಆಂಜನೇಯ, ಬೆಂಗಳೂರು ಗ್ರಾಮಾಂತರ- ನಟ, ನಾಟಕಕಾರರು, ಲಲಿತಾ ಸಣ್ಣಂಗಿ, ಹಾವೇರಿ- ನಟಿ, ವಿಜಯಕಾಶಿ, ಶಿವಮೊಗ್ಗ-ನಟ, ಛಾಯಾ ರೆಡ್ಡಿ, ಧಾರವಾಡ-ನಟಿ, ಪ್ರೇಮಾ ಆರ್ ತಾಳೀಕೋಟಿ, ವಿಜಯಪುರ- ನಟಿ,
ವೆಂಕಟೇಶ್ ಹೆಗಡೆ, ಉತ್ತರ ಕನ್ನಡ-ನಟ, ಸುಂದರಮೂರ್ತಿ ಆಲೆಮನೆ, ಬೆಂಗಳೂರು-ಮೇಕಪ್, ಎ.ಭದ್ರಪ್ಪ, ದಾವಣಗೆರೆ-ಸಂಘಟಕ, ಜಿ.ಎಂ.ಸಿದ್ಧರಾಜು, ಮಂಡ್ಯ-ನಟ.

ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿ: 2015-ಮದುಕೇಶ್ ಚಿಂದೋಡಿ, ದಾವಣಗೆರೆ, 2016- ಮಹದೇವಪ್ಪ, ಬೆಂಗಳೂರು, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಪ್ರಶಸ್ತಿ: 2015- ಗೂಡು ಸಾಹೇಬ್ ಚಟ್ನಿಹಾಳ, ಬಾಗಲಕೋಟೆ,
2016- ಬಿ.ಗಂಗಾಧರ, ತುಮಕೂರು.['ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪಟ್ಟಿ ಪ್ರಕಟ]

ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ: 2015- ಮಮತಾ ಗುಡೂರು, 2016 ಉಮಾ, ರಾಣೆಬೆನ್ನೂರು, ರಂಗಭೂಮಿಯ ಪುಸ್ತಕ ಪುರಸ್ಕಾರ: 2014- ಪ್ರಕಾಶ ಗರುಡ- 'ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ', 2015- ದಿವಂಗತ ಗೋಪಾಲ ವಾಜಪೇಯಿ - 'ರಂಗದ ಒಳಗೆ-ಹೊರಗೆ'.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hamsalekha and Late Gopala Vajapayee awarded by Karnatka nataka academy. List of awardees announced for the year 2015-2016.
Please Wait while comments are loading...