ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

139 ದಿನ ಕಲಾಪಕ್ಕೆ ಹಾಜರಾಗಿದ್ದಾರೆ ಕರ್ನಾಟಕದ ಶಾಸಕರು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಕರ್ನಾಟಕದ ಶಾಸಕರು ಸರಾಸರಿ 139 ದಿನ ಕಲಾಪಗಳಿಗೆ ಹಾಜರಾಗಿದ್ದಾರೆ ಹೀಗಂತ ವರದಿಯೊಂದು ಹೇಳಿದೆ. 14ನೇ ಕರ್ನಾಟಕ ವಿಧಾನಸಭೆಯಲ್ಲಿ 15 ಅಧಿವೇಶನಗಳು ನಡೆದಿವೆ. ಇದರಲ್ಲಿ ಪ್ರತಿ ವರ್ಷ ಸರಾಸರಿ 44 ದಿನ ಕಲಾಪಗಳು ನಡೆದಿವೆ.

ಆರ್.ಟಿ.ಐ ಮೂಲಕ ಪಡೆದ ಮಾಹಿತಿಗಳನ್ನು ಕ್ರೋಢೀಕರಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ವರದಿ ಬಿಡುಗಡೆ ಮಾಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

15ನೇ ಕರ್ನಾಟಕ ವಿಧಾನಸಭೆಯಲ್ಲಿ 2013ರಿಂದ 2017ರ ನಡುವೆ ಒಟ್ಟು 216 ದಿನಗಳ ಕಲಾ ಕಲಾಪ ನಡೆದಿದೆ. ಇದರಲ್ಲಿ 2015ರ ಜೂನ್ 29ರಿಂದ ನವೆಂಬರ್ 2015ರ ನಡುವೆ ಅತೀ ದೀರ್ಘ ಕಾಲ ಅಂದರೆ 32 ದಿನಗಳ ಕಾಲ ಕಲಾಪ ಪಡೆದಿದೆ. ಅಧಿವೇಶನದಲ್ಲಿ ಒಟ್ಟು 216 ಮಸೂದೆಗಳನ್ನು ಮಂಡಿಸಲಾಗಿದ್ದಾರೆ ಇವುಗಳಲ್ಲಿ 209 ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿದೆ.

Karnataka MLAs attended 139 days of assembly sessions: Report

ಅತೀ ಹೆಚ್ಚು ಹಾಜರಾತಿ

ಡಾ. ರಫೀಕ್ ಅಹಮದ್ (ಕಾಂಗ್ರೆಸ್) - ಶೇ. 95 ಹಾಜರಾತಿ (211 ಕಲಾಪಗಳಲ್ಲಿ ಭಾಗಿ)

ಕೆ.ಬಿ. ಪ್ರಸನ್ನ ಕುಮಾರ್ (ಕಾಂಗ್ರೆಸ್) - ಶೇ. 95 ಹಾಜರಾತಿ (211 ಕಲಾಪಗಳಲ್ಲಿ ಭಾಗಿ)

ಬಿ.ಎಂ.ನಾಗರಾಜ್ (ಕಾಂಗ್ರೆಸ್) - ಶೇ. 95 ಹಾಜರಾತಿ (211 ಕಲಾಪಗಳಲ್ಲಿ ಭಾಗಿ)

ಕೇಳಿದ ಪ್ರಶ್ನೆಗಳು

ಒಟ್ಟಾರೆ ಶಾಸಕರು 37,110 ಪ್ರಶ್ನೆಗಳನ್ನು ಕೇಳಿದ್ದಾರೆ. ಸರಾಸರಿ 178 ಪ್ರಶ್ನೆಗಳನ್ನು ಶಾಸಕರು ಕೇಳಿದ್ದಾರೆ.

ಜೆಡಿಎಸ್ ನ ಶಾಸಕ ಗೋಪಾಲಯ್ಯ ಬರೋಬ್ಬರಿ 885 ಪ್ರಶ್ನೆಗಳನ್ನು ಕೇಳಿದ್ದರೆ, ಜೆ.ಡಿ.ಎಸ್ ನ ಮತ್ತೋರ್ವ ಶಾಸಕ ಎಂ. ಸಿದ್ದರಾಮಪ್ಪ ಖೂಬಾ 795 ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ 750 ಪ್ರಶ್ನೆಗಳನ್ನು ಕೇಳಿದ್ದಾರೆ.

English summary
On an average, an MLA from Karnataka attended 139 days of assembly sessions. In all, there were 15 sessions in the 14th Karnataka Legislative Assembly and on an average, the assembly sat for 44 days per year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X