ವೈದ್ಯ ಶಿಕ್ಷಣ ಶುಲ್ಕ ಶೇ 10ರಷ್ಟು ಹೆಚ್ಚಳ, ಶುಲ್ಕ ಪಟ್ಟಿ
ಬೆಂಗಳೂರು, ಏ. 16 : ಕರ್ನಾಟಕ ಸರ್ಕಾರ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶ ಶುಲ್ಕಗಳನ್ನು ಶೇ 10ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. 2011ರ ಬಳಿಕ ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಏಪ್ರಿಲ್ 1ರಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆದ ಖಾಸಗಿ ವೈದ್ಯಕೀಯ ಕಾಲೇಜುಗಳ ಸಭೆಯಲ್ಲಿ ಶುಲ್ಕ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಬುಧವಾರ ಈ ಕುರಿತು ಆದೇಶ ಪ್ರಕಟಗೊಂಡಿದೆ. [ಮೇ ಮೊದಲ ವಾರ ದ್ವಿತೀಯ ಪಿಯು ಫಲಿತಾಂಶ]

ಇಂಜಿನಿಯರಿಂಗ್ ಕಾಲೇಜುಗಳು ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ. ಶುಲ್ಕ ಹೆಚ್ಚಳ ಮಾಡಿದ ನಂತರ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಕಾಲೇಜುಗಳು ಸರ್ಕಾರಕ್ಕೆ ಸ್ಪಷ್ಟಪಡಿಸಿವೆ. ಆದ್ದರಿಂದ ಇಂಜಿನಿಯರಿಂಗ್ ಪ್ರವೇಶ ಶುಲ್ಕಗಳು ಹೆಚ್ಚಳವಾಗುವ ಸಾಧ್ಯತೆ ಇದೆ.
ಸೀಟು ಮತ್ತು ಶುಲ್ಕ ಹೆಚ್ಚಳದ ಪಟ್ಟಿ
ವೈದ್ಯ ಪದವಿ
38,5000 ರಿಂದ 55,000 ರೂ.ಗೆ ಹೆಚ್ಚಳ (ಸರ್ಕಾರಿ ಕೋಟಾ)
3,57,500 ರಿಂದ 4,25,000 ರೂ.ಗೆ ಹೆಚ್ಚಳ (ಕಾಮೆಡ್-ಕೆ ಶುಲ್ಕ)
ವೈದ್ಯ ಸ್ನಾತಕೋತ್ತರ ಪದವಿ
3,35,000 ರಿಂದ 3,69,00 ರೂ.ಗೆ ಹೆಚ್ಚಳ
5,01,600 ರಿಂದ 5,52,000 ರೂ.ಗೆ ಹೆಚ್ಚಳ
ದಂತ ವೈದ್ಯ ಪದವಿ
27,500 ರಿಂದ 35,000 ರೂ.ಗಳಿಗೆ ಹೆಚ್ಚಳ
2,53,000 ರಿಂದ 2,75,500 ರೂ.ಗೆ ಹೆಚ್ಚಳ
ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ
1,71,600 ರಿಂದ 1,88,000 ರೂ.ಗಳಿಗೆ ಹೆಚ್ಚಳ
2,57,400 ರಿಂದ 2,90,900 ರೂ.ಗಳಿಗೆ ಹೆಚ್ಚಳ
ಪ್ರೀ ಕ್ಲಿನಿಕಲ್
42,009 ರಿಂದ 46,300 ರೂ.ಗೆ ಹೆಚ್ಚಳ
62,700 ರಿಂದ 69,000 ರೂ.ಗೆ ಹೆಚ್ಚಳ
ಪ್ಯಾರಾ ಕ್ಲಿನಿಕಲ್
83,600 ರಿಂದ 92,000 ರೂ.ಗೆ ಹೆಚ್ಚಳ
1,25,400 ರಿಂದ 1,38,000 ರೂ.ಗೆ ಹೆಚ್ಚಳ












Click it and Unblock the Notifications