ಸಿಎಂ ಸಿದ್ದರಾಮಯ್ಯಗೂ ತಲುಪಿತು ಹಾಸನ ಕಾಲೇಜಿನ J&K ವಿದ್ಯಾರ್ಥಿಗಳ ಗಡ್ಡದಾರೋಪ..
ಹಾಸನ, ನವೆಂಬರ್ 10: ಕರ್ನಾಟಕದ ನರ್ಸಿಂಗ್ ಕಾಲೇಜಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಹಲವು ವಿದ್ಯಾರ್ಥಿಗಳು ಮಾರ್ಗಸೂಚಿ ಪಾಲಿಸಬೇಕು. ಗಡ್ಡವನ್ನು ಟ್ರಿಮ್ ಮಾಡಿಸಬೇಕು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಇಲ್ಲವಾದರೆ ಕ್ಲಿನಿಕಲ್ ಚಟುವಟಿಕೆಗಳಿಗೆ ಗೈರು ಹಾಜರಾತಿ ನೀಡುವ ಬಗ್ಗೆ ಬೆದರಿಕೆ ಹಾಕಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮಧ್ಯಸ್ಥಿಕೆ ವಹಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವ ಘಟನೆ ನಡೆದಿದೆ.
ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ನರ್ಸಿಂಗ್ ಕಾಲೇಜಿನಲ್ಲಿ ಒಟ್ಟು ಸುಮಾರು 24 ಕಾಶ್ಮೀರಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಹೇಳುವಂತೆ ತಾವು ಗಡ್ಡವನ್ನು '01' ಪಾಯಿಂಟ್‌ನಷ್ಟು ಟ್ರಿಮ್ ಮಾಡುವಂತೆ, ಗಡ್ಡ ತೆಗೆದು ಕಾಲೇಜು, ಇತರ ಶೈಕ್ಷಣಿಕಗೆ ಚಟುವಟಿಕೆಗಳಲ್ಲಿ ಭಾಗವಹಿಸುಂತೆ ಕಾಲೇಜು ಆಡಳಿತ ಮಂಡಳಿ ಹೇಳಿದೆ ಎಂದು ಅವರು ಆರೋಪಿಸಿದ್ದಾರೆ.

ತರಗತಿಗಳಿಗೆ ಹಾಜರಾಗಲು ಗಡ್ಡ ಬೋಳಿಸಲು ಅಥವಾ ಟ್ರಿಮ್ ಮಾಡುವಂತೆ ನಮಗೆ ಕಾಲೇಜು ಆಡಳಿತ ಮುಖ್ಯಸ್ಥರು ಹೇಳಿದ್ದಾರೆ. ಕಾಲೇಜು ನಿರ್ದೇಶನ ಪಾಲಿಸುವಂತೆ ಸೂಚಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ದೂರಿದ್ದಾರೆ.
ಸಿಎಂ ಮಧ್ಯಸ್ಥಿಕೆಗೆ ಕಾಶ್ಮೀರಿ ವಿದ್ಯಾರ್ಥಿಗಳ ಮನವಿ
ತರಗತಿಗಳು, ಕಾಲೇಜಿನ ಇನ್ನಿತರ ಚಟುವಟಿಕೆಗಳು ಹಾಗೂ ಲ್ಯಾಬ್ ಗಳಲ್ಲಿ ಪಾಲ್ಗೊಳ್ಳಲು ಕ್ಲೀನ್-ಶೇವ್ ಇರಬೇಕು. ಒಂದು ವೇಳೆ ಹಾಗೆ ಬಂದರೆ, ಲ್ಯಾಬ್ ಚಟುವಟಿಕೆಗಳಲ್ಲಿ ಗೈರಾದಂತೆ ಎಂದು ತಿಳಿಸಿದ್ದಾರೆ. ಇದ ನಮ್ಮ ಕಾಲೇಜು ಹಾಜರಾತಿ ಇನ್ನಿತರ ಶೈಕ್ಷಣಿಕ ದಾಖಲೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಈ ಸಮಸ್ಯೆ ಬಗ್ಗೆ ಪರಿಹರಿಸಲು ಸಿಎಂ ಸಿದ್ದರಾಮಯ್ಯ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಸರ್ಕಾರಕ್ಕೆ ಪತ್ರ ಬರೆದಿದೆ.
ಕಾಲೇಜಿನ ನಿರ್ದೇಶನಗಳನ್ನು ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸಿದಂತಾಗುತ್ತದೆ ಎಂದು ಇದು ಸರಿಯಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ. ಸಿಎಂ ಮಧ್ಯಸ್ಥಿಕೆ ಕರೆ ನೀಡುತ್ತಿದ್ದಂತೆ ಸಮಸ್ಯೆ ತಿಳಿ ಆಯಿತು ಎನ್ನಲಾಗಿದೆ.
ಕಾಲೇಜು ಯಾರನ್ನು ಗುರಿಯಾಗಿಸಿಲ್ಲ
ವೈದ್ಯಕೀಯ ಕಾಲೇಜು ಆಡಳಿತವು ಯಾರನ್ನು, ವಿದ್ಯಾರ್ಥಿಗಳ ಯಾವ ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡಿಲ್ಲ ಎಂದು ತಿಳಿಸಿದೆ. ಕ್ಲಿನಿಕಲ್ ಚಟುವಟಿಕೆಗೆ ನೈರ್ಮಲ್ಯ ಅಗತ್ಯವಾಗಿರುತ್ತದೆ. ಅದರಲ್ಲಿ ಪಾಲ್ಗೊಳ್ಳಲು ಒಂದಷ್ಟು ಮಾನದಂಡ ಹೊಂದಿರಬೇಕಾಗುತ್ತದೆ. ಅದರಂತೆ ಇಲ್ಲಿನ ಕನ್ನಡಿಗ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಇದೆ. ಅದನ್ನು ಪಾಲಿಸುವಂತೆ ಸೂಚಿಸಿದ್ದೇವೆ ಎಂದು ಕಾಲೇಜು ಕ್ಲಿನಿಕಲ್ ಇನ್ಸ್‌ಪೆಕ್ಟರ್ ವಿಜಯಕುಮಾರ್ ಆರೋಪವನ್ನು ತಳ್ಳಿ ಹಾಕಿದ್ದಾರೆ.
"ಕಾಲೇಜಿನ ನಿರ್ದೇಶನದ ನಂತರವೂ, ವಿದ್ಯಾರ್ಥಿಗಳು ನರ್ಸಿಂಗ್ ಓದುವಾಗ ಅನುಸರಿಸಲಿಲ್ಲ, ಈ ಬಾರಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ" ಎಂದು ಕಾಲೇಜು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ. ಅಲ್ಲದೇ ಈ ಕಾಶ್ಮೀರಿ ವಿದ್ಯಾರ್ಥಿಗಳು ಧಾರ್ಮಿಕ ಪ್ರಾರ್ಥನೆಗೆ ಹಾಜರಾಗಲು ಹೇಳಿ ಆಗಾಗ ತರಗತಿಗಳಿಗೆ ಚಕ್ಕರ್ ಹೊಡೆಯುತ್ತಾರೆ ಎಂದು ಹೇಳಿದರು.












Click it and Unblock the Notifications