GIM 2025: ಇನ್ವೆಸ್ಟ್ ಕರ್ನಾಟಕದಲ್ಲಿ ಘೋಷಿಸಿದ ಪ್ರಮುಖ 21 ಹೂಡಿಕೆಗಳು, ಪಟ್ಟಿ
ಬೆಂಗಳೂರು, ಫೆಬ್ರುವರಿ 12: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಫೆಬ್ರವರಿ 11ರಿಂದ ನಾಲ್ಕು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ 2025 ನಡೆಯುತ್ತಿದೆ. ಮೊದಲ ದಿನವೇ ಉದ್ಘಾಟನೆ ಬಳಿಕ ಪ್ರಮುಖ ಚರ್ಚೆಗಳು ನಡೆದು, ವಿದೇಶಿ ಕಂಪನಿಗಳು ರಾಜ್ಯದಲ್ಲಿ ಹೂಡಿಕೆಯ ಆಸಕ್ತಿ ಪ್ರಕಟಿಸಿವೆ. ಈ ಸಂಬಂಧ ಕರ್ನಾಟಕದೊಂದಿಗೆ ಒಪ್ಪಂದಕ್ಕೆ ಒಪ್ಪಿ, ಪ್ರಮುಖ ಹೂಡಿಕೆಗಳನ್ನು ಘೋಷಿಸಿವೆ. ಅವುಗಳ ಪಟ್ಟಿ, ಕಂಪನಿಗಳ ವಿವರ ನಿಮ್ಮ ಮುಂದಿದೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಈ ಇನ್ವೆಸ್ಟ್ ಕರ್ನಾಟಕವು ಫೆಬ್ರವರಿ 14ರವರೆಗೆ ನಡೆಯಲಿವೆ. 19 ವಿದೇಶಿ ಕಂಪನಿಗಳು ಭಾಗವಹಿಸಿವೆ. ಮೊದಲ ದಿನವೇ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಪ್ರಕಟವಾದ ಹೂಡಿಕೆಗಳ ಬಗ್ಗೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರ ಕಚೇರಿಯಿಂದಲೇ ಅಧಿಕೃತ ಮಾಹಿತಿ ತಿಳಿಸಲಾಗಿದೆ.

ಪ್ರಮುಖ 21 ಹೂಡಿಕೆಗಳು ಯಾವುವು? ಕಂಪನಿ ವಿವರ
1. ಜೆಎಸ್‌ಡಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್: ಸೌರ ಯೋಜನೆ , ಗಾಳಿ ಶಕ್ತಿ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ ₹ 56,000 ಕೋಟಿ ಹೂಡಿಕೆ.
2. ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಕಂಪನಿ: ಸಮಗ್ರ ಉಕ್ಕು ತಯಾರಿಕಾ ಸ್ಥಾವರಕ್ಕೆ ₹54,000 ಕೋಟಿ ಹೂಡಿಕೆಗೆ ಒಪ್ಪಿಗೆ.
3. ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಕಂಪನಿ - ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳು ಮತ್ತು ಮೇಲ್ಚಾವಣಿ ವಿದ್ಯುತ್ ಪರಿಹಾರಗಳ ಅಭಿವೃದ್ಧಿಗೆ ₹50,000 ಕೋಟಿ ಹೂಡಿಕೆಗೆ ಅಸ್ತು.
4. ರೆನ್ಯೂ ಪ್ರೈವೇಟ್ ಲಿಮಿಟೆಡ್: 4 ಗಿಗಾವಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹ 50,000 ಕೋಟಿ ಹೂಡಿಕೆಗೆ ಒಲವು.
5. ಸೆರೆಂಟಿಕಾ ರಿನ್ಯೂವೇಬಲ್ಸ್ ಇಂಡಿಯಾ ಪ್ರೈವೇಟ್ ಕಂಪನಿ - ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಗಾಗಿ ₹43,975 ಕೋಟಿ ಹೂಡಿಕೆ.
6. ಜೆಎಸ್‌ಡಬ್ಲ್ಯು ಗ್ರೂಪ್: ಜೆಎಸ್‌ಡಬ್ಲ್ಯು ಸಿಮೆಂಟ್ ಆ್ಯಂಡ್ ಸ್ಟೀಲ್ ಮತ್ತು ಅದರ ಅಂಗಸಂಸ್ಥೆಗಳಿಗೆ ₹ 43,900 ಕೋಟಿ ಹೂಡಿಕೆ.
7. ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಕಂಪನಿ: ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹35,000 ಕೋಟಿ ಹೂಡಿಕೆಗೆ ಒಲವು.
8. ಹೀರೋ ಫ್ಯೂಚರ್ ಎನರ್ಜಿಸ್: ನವೀಕರಿಸಬಹುದಾದ ಇಂಧನ, ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳ ಯೋಜನೆಗಳಿಗೆ ₹22,200 ಕೋಟಿ ಹೂಡಿಕೆಗೆ ವಿದೇಶ ಕಂಪನಿಗಳು ಆಸಕ್ತಿ ವಹಿಸಿವೆ.
9. ಸುಜ್ಲಾನ್ ಎನರ್ಜಿ ಕಂಪನಿ: ಪವನ ವಿದ್ಯುತ್ ಯೋಜನೆಗಳಿಗೆ ₹ 21,950 ಕೋಟಿ ಹೂಡಿಕೆ.
10. ಎಸ್ಸಾರ್ ರಿನ್ಯೂವೇಬಲ್ಸ್ ಕಂಪನಿ: ₹20,000 ಕೋಟಿ ಹೂಡಿಕೆ.

11. ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್: ₹18,000 ಕೋಟಿ ಹೂಡಿಕೆ ಒಪ್ಪಿದೆ.
12. ಎಪ್ಸಿಲಾನ್ ಗ್ರೂಪ್: ಆನೋಡ್ ಮತ್ತು ಕ್ಯಾಥೋಡ್ ಪದಾರ್ಥಗಳ ತಯಾರಿಕೆಗೆ ₹15,350 ಕೋಟಿ ಹೂಡಿಕೆ.
13. ಎಂ.ವಿ ಎನರ್ಜಿ ಪ್ರೈವೇಟ್ ಲಿಮಿಟೆಡ್: ಸೋಲಾರ ಫೊಟೊವೊಲ್ಟ್ಯಾಕ್ ಸೆಲ್ಸ್ ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ ₹ 15,000 ಕೋಟಿ ಹೂಡಿಕೆಗೆ ಒಪ್ಪಿಗೆ.
14. ಲ್ಯಾಮ್ ರಿಸರ್ಚ್: ಸೆಮಿಕಂಡಕ್ಟರ್ ಉಪಕರಣಗಳ ತಯಾರಿಕೆಗೆ ₹10,000 ಕೋಟಿ ಹೂಡಿಕೆ ಹರಿದು ಬರಲಿದೆ.
15. ಆಂಪಿನ್ ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್: ₹10,000 ಕೋಟಿ ಹೂಡಿಕೆಗೆ ಒಪ್ಪಿದೆ.
16. ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಲಿಮಿಟೆಡ್: ₹10,000 ಕೋಟಿ ಹೂಡಿಕೆ ಮಾಡಲು ಸಜ್ಜಾಗಿದೆ.
17. ಔ2 ಪವರ್ ಪ್ರೈವೇಟ್ ಲಿಮಿಟೆಡ್: ನವೀಕರಿಸಬಹುದಾದ ಇಂಧನ ಸೌರ ಮತ್ತು ಪವನ ಯೋಜನೆಗಳ ಸ್ಥಾಪನೆಗೆ ₹ 10,000 ಕೋಟಿ ಹೂಡಿಕೆಗೆ ಮುಂದೆ ಬಂದಿದೆ.
18. ಕಾಂಟಿನುಮ್ ಗ್ರೀನ್ ಎನರ್ಜಿ ಜಿಪಿ: ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು ₹10,000 ಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ.
19. ಸೋಟೆಫಿನ್ ಭಾರತ್ ಕಂಪನಿ: ಸಂಪೂರ್ಣ ಸ್ವಯಂಚಾಲಿತ ರೊಬೊಟಿಕ್ ಬಹುಮಹಡಿ ಕಾರ್ ಮತ್ತು ಬಸ್ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸ್ಥಾಪನೆಗೆ ಬರೋಬ್ಬರಿ ₹8,500 ಕೋಟಿ ಹೂಡಿಕೆ ಮಾಡಲಿದೆ.
20. ಶ್ರೀ ಸಿಮೆಂಟ್ ಲಿಮಿಟೆಡ್: ಇಂಟೆಗ್ರೇಟೆಡ್ ಸ್ಥಾವರ ಮತ್ತು ಕ್ಲಿಂಕರ್ ಗ್ರೈಂಡಿಂಗ್ ಘಟಕಕ್ಕೆ ₹8,350 ಕೋಟಿ ಹೂಡಿಕೆ.
21. ಹೆಕ್ಸಾ ಕ್ಲೈಮೇಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್: ₹8,000 ಕೋಟಿ ಹೂಡಿಕೆಯನ್ನು ಕರ್ನಾಟಕದಲ್ಲಿ ಮಾಡಲು ಮನಸ್ಸು ಮಾಡಿದೆ.












Click it and Unblock the Notifications