Karnataka Dam Water Level Today: ಕಬಿನಿ, ಭದ್ರಾ ಸೇರಿ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಬೆಂಗಳೂರು, ಜೂನ್ 07: ರಾಜ್ಯದಲ್ಲಿ ಕೆಲವು ವಾರಗಳ ಹಿಂದೆಷ್ಟೆ ಬಣಗುಡುತ್ತಿದ್ದ ಜಲಾಶಯಗಳಲ್ಲಿ ಜೀವ ಕಳೆ ತುಂಬಿದೆ. ಭಾರೀ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ಕಬಿನಿ, ಘಟಪ್ರಭಾ, ಕೆಆರ್‌ಎಸ್ ಸೇರಿದಂತೆ ಹಲವು ಜಲಾಶಯಗಳ ನೀರಿನ ಸಂಗ್ರಹ, ಒಳಹರಿವು ಹೆಚ್ಚಾಗಿದೆ.
ಪ್ರಸ್ತುತ ವಾರಾಂತ್ಯಕ್ಕೆ ಮುಂಗಾರು ಮಳೆ ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲೂ ಮುಂಗಾರು ಪೂರ್ತಿ ವಿಸ್ತರಣೆಗೊಂಡು, ಭಾರೀ ಮಳೆ ಸುರಿಸುತ್ತಿದೆ. ಆಯಾ ಜಲಾಶಯಗಳ ಸುತ್ತಮುತ್ತ, ನದಿಗಳ ಮೂಲಗಳ ಪ್ರದೇಶದಲ್ಲಿ ಭರ್ಜರಿ ಮಳೆ ಆಗುತ್ತಿದೆ. ಹೀಗಾಗಿ ನದಿಗಳು ತುಂಬಿಕೊಂಡಿವೆ. ಜಲಾಶಯಗಳು ಭರ್ತಿ ಆಗಿವೆ.

ಭಾರೀ ಮಳೆ ಮುಂದುವರಿಯಲಿವೆ. ಇಂದು ಜೂನ್ 07ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಯಾವೆಲ್ಲ ಹೆಚ್ಚು ನೀರಿನ ಸಾಮರ್ಥ್ಯ ಹೊಂದಿವೆ. ಇಂದಿನ ನೀರಿನ ಮಟ್ಟ, ಒಳ ಮತ್ತು ಹೊರ ಹರಿವಿನ ಮಾಹಿತಿ ಇಲ್ಲಿದೆ.
* ಆಲಮಟ್ಟಿ ಜಲಾಶಯ
ಒಟ್ಟು ಸಾಮರ್ಥ್ಯ -123.8 ಟಿಎಂಸಿ
ಇಂದಿನ ನೀರಿನ ಸಂಗ್ರಹ - 20.55 ಟಿಎಂಸಿ
ಒಳ ಹರಿವು - 00
ಹೊರ ಹರಿವು - 1238 ಕ್ಯೂಸೆಕ್ಸ್
* ಕೆಆರ್‌ಎಸ್ ಜಲಾಶಯ
ಒಟ್ಟು ಸಾಮರ್ಥ್ಯ- 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 12.97 ಟಿಎಂಸಿ
ಒಳ ಹರಿವು - 1470 ಕ್ಯೂಸೆಕ್ಸ್
ಹೊರ ಹರಿವು - 550 ಕ್ಯೂಸೆಕ್ಸ್
* ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 3.63 ಟಿಎಂಸಿ
ಒಳ ಹರಿವು - 1581 ಕ್ಯೂಸೆಕ್ಸ್
ಹೊರ ಹರಿವು - 73 ಕ್ಯೂಸೆಕ್ಸ್

* ಮಲಪ್ರಭಾ ಜಲಾಶಯ
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಸಂಗ್ರಹ - 6.68 ಟಿಎಂಸಿ
ಒಳ ಹರಿವು - 00
ಹೊರ ಹರಿವು -194 ಕ್ಯೂಸೆಕ್ಸ್
* ಲಿಂಗನಮಕ್ಕಿ ಜಲಾಶಯ
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ - 13.62 ಟಿಎಂಸಿ
ಒಳ ಹರಿವು - 00
ಹೊರ ಹರಿವು - 2422 ಕ್ಯೂಸೆಕ್ಸ್
* ಕಬಿನಿ ಜಲಾಶಯ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ - 7.69 ಟಿಎಂಸಿ
ಒಳ ಹರಿವು - 475 ಕ್ಯೂಸೆಕ್ಸ್
ಹೊರ ಹರಿವು - 300 ಕ್ಯೂಸೆಕ್ಸ್
* ಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ - 14.37 ಟಿಎಂಸಿ
ಒಳ ಹರಿವು - 341 ಕ್ಯೂಸೆಕ್ಸ್
ಹೊರ ಹರಿವು - 341 ಕ್ಯೂಸೆಕ್ಸ್
* ಹಾರಂಗಿ ಜಲಾಶಯ
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ - 3.05 ಟಿಎಂಸಿ
ಒಳ ಹರಿವು - 296 ಕ್ಯೂಸೆಕ್ಸ್
ಹೊರ ಹರಿವು - 200 ಕ್ಯೂಸೆಕ್ಸ್
ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲೂ ಭಾರಿ ಮಳೆ ಆಗುತ್ತಿದೆ. ಮುಂದಿನ ಮೂರು ದಿನ ರಾಜ್ಯದ ಸುಮಾರು ಆರು ಜಿಲ್ಲೆಗಳಿಗೆ ಸುನಾಮಿ ಮಳೆ ಬರುವ ಕಾರಣಕ್ಕೆ ಐಎಂಡಿ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಇದರಿಂದ ಮುಂದಿನ ವಾರದ ಹೊತ್ತಿಗೆ ಜಲಾಶಯಗಳ ನೀರಿನ ಹರಿವು ಇನ್ನಷ್ಟು ಹೆಚ್ಚಾಗಲಿದೆ.












Click it and Unblock the Notifications