Karnataka Dam Water Level: ಜೂನ್ 27ರಂದು ರಾಜ್ಯದ ಪ್ರಮುಖ ಡ್ಯಂಗಳ ನೀರಿನ ಮಟ್ಟ ಎಷ್ಟಿದೆ? ಮಾಹಿತಿ ಇಲ್ಲಿದೆ
Karnataka Dam Water Level: ಜೂನ್ ಆರಂಭದಿಂದಲೇ ಮುಂಗಾರು ಶುರುವಾಗಿ ಮತ್ತೆ ಮೂರನೇ ವಾರದಲ್ಲಿ ತಗ್ಗಿದ್ದು, ಇದೀಗ ಮತ್ತೆ ಚುರುಕು ಪಡೆದಿದೆ. ಈ ಹಿನ್ನೆಲೆ ಜಲಮೂಲಗಳಿಗೆ ಮತ್ತಷ್ಟು ನೀರು ಬರುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಮತ್ತೊಂದೆಡೆ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಲಿದೆ. ಹಾಗಾದರೆ ಇಂದು (ಜೂನ್ 27) ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕು ಪಡೆದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಗಾಗಾ ಸಾಧಾರಣ ಮಳೆಯಾಗಿ ಅದೇ ಬಿಸಿಲಿನ ವಾತಾವರಣ ಮುಂದುವರೆಯುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಭಾಗಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಈ ಹಿನ್ನೆಲೆ ಈ ಭಾಗದಲ್ಲಿರುವ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.

ಮತ್ತೊಂದೆಡೆ ಹಲವು ಜಲಾಶಯಗಳ ನೀರಿನ ಮಟ್ಟವು ಕೂಡ ಹಚ್ಚಾಗುತ್ತಿದೆ. ಹಾಗಾದರೆ ರಾಜ್ಯ ರಾಜಧಾನಿ ಬೆಂಗಳೂರು, ಸಾಂಸಕೃತಿಕ ನಗರಿ ಮೈಸೂರು, ಸಕ್ಕರೆ ನಾಡು ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿ ಇನ್ನುಳಿ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 92.97 ಅಡಿ
* ಒಳಹರಿವು - 167 ಕ್ಯೂಸೆಕ್
* ಹೊರಹರಿವು - 4,338 ಕ್ಯೂಸೆಕ್
ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 67 ಅಡಿ
* ಇಂದಿನ ನೀರಿನ ಮಟ್ಟ - 50.38 ಅಡಿ
* ಒಳಹರಿವು - 151 ಕ್ಯೂಸೆಕ್
* ಹೊರಹರಿವು - 2,150 ಕ್ಯೂಸೆಕ್
ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 117 ಅಡಿ
* ಇಂದಿನ ನೀರಿನ ಮಟ್ಟ - 69.07 ಅಡಿ
* ಒಳಹರಿವು - 80 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್
ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 129
* ಇಂದಿನ ನೀರಿನ ಮಟ್ಟ - 89.53
* ಒಳಹರಿವು - 110 ಕ್ಯೂಸೆಕ್
* ಹೊರಹರಿವು - 380 ಕ್ಯೂಸೆಕ್












Click it and Unblock the Notifications