Karnataka dams water level: ಫೆಬ್ರವರಿ 07ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?-ಮಾಹಿತಿ
ಕರ್ನಾಟಕ, ಫೆಬ್ರವರಿ, 07: ಈಗಾಗಲೇ ಮಳೆಗಾಲ ಮುಗಿದಿದ್ದು, ಚಳಿಗಾಲ ಆರಂಭವಾಗಿದೆ. ಇದರ ನಡುವೆಯೂ ಮಧ್ಯಾಹ್ನ ಆಗುತ್ತಿದ್ದಂತೆ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ಧಗೆ ಏರುತ್ತಲೇ ಇದೆ. ಇನ್ನು ಬೇಸಿಗೆ ಬಂದರೆ ಇನ್ನಷ್ಟು ಬಿಸಿಲು ಇರಲಿದೆ ಎನ್ನುವ ಪ್ರಶ್ನೆ ಈಗಲೇ ಕಾಡುತ್ತಿದೆ. ಅಲ್ಲದೆ ಮತ್ತೊಂದೆಡೆ ಇದೀಗ ಪ್ರಮುಖ ಜಲಾಶಗಳಲ್ಲಿ ನೀರು ಬತ್ತಿಹೋಗುತ್ತಲೇ ಇದೆ.
ಸಿಲಿಕಾನ್ ಟಿಸಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಸಕ್ಕರೆ ನಾಡು ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯದಲ್ಲೂ ಕೂಡ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಹಾಗಾದರೆ ಇದನ್ನು ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಇಂದು (ಫೆಬ್ರವರಿ 07) ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 17.05 ಟಿಎಂಸಿ
* ಒಳಹರಿವು - 587 ಕ್ಯೂಸೆಕ್
* ಹೊರಹರಿವು - 501 ಕ್ಯೂಸೆಕ್
2. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಇಂದಿನ ನೀರಿನ ಮಟ್ಟ - 3.42 ಟಿಎಂಸಿ
* ಒಳಹರಿವು - 218 ಕ್ಯೂಸೆಕ್
* ಹೊರಹರಿವು - 200 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 51.77 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 1278 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 9.60 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 359 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.80 ಮೀಟರ್
* ಇಂದಿನ ನೀರಿನ ಮಟ್ಟ - 13.04 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಇಂದಿನ ನೀರಿನ ಮಟ್ಟ - 46.15 ಟಿಎಂಸಿ
* ಒಳಹರಿವು - 175 ಕ್ಯೂಸೆಕ್
* ಹೊರಹರಿವು - 3,280 ಕ್ಯೂಸೆಕ್
7. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಇಂದಿನ ನೀರಿನ ಮಟ್ಟ - 12.80 ಟಿಎಂಸಿ
* ಒಳಹರಿವು - 107 ಕ್ಯೂಸೆಕ್
* ಹೊರಹರಿವು - 700 ಕ್ಯೂಸೆಕ್
8. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಇಂದಿನ ನೀರಿನ ಮಟ್ಟ - 32.08 ಟಿಎಂಸಿ
* ಒಳಹರಿವು - 65 ಕ್ಯೂಸೆಕ್
* ಹೊರಹರಿವು - 250 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಇಂದಿನ ನೀರಿನ ಮಟ್ಟ - 33.67 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 119 ಕ್ಯೂಸೆಕ್
10. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಇಂದಿನ ನೀರಿನ ಮಟ್ಟ - 14.79 ಟಿಎಂಸಿ
* ಒಳಹರಿವು - 158 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್












Click it and Unblock the Notifications