ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.30ರ ತನಕ ರಜೆ ಪಡೆದ ಲೋಕಾಯುಕ್ತ ಭಾಸ್ಕರರಾವ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆ. 31 : ಕರ್ನಾಟಕ ಲೋಕಾಯುಕ್ತದಲ್ಲಿನ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಇದರ ನಡುವೆಯೇ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು ಸೆಪ್ಟೆಂಬರ್ 30ರ ತನಕ ರಜೆಯನ್ನು ವಿಸ್ತರಣೆ ಮಾಡಿದ್ದಾರೆ. ಉಪ ಲೋಕಾಯುಕ್ತರಿಗೆ ಅವರು ತಮ್ಮ ಕೆಲಸಗಳನ್ನು ಹಸ್ತಾಂತರ ಮಾಡಿಲ್ಲ.

ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಬಂಧನವಾದ ನಂತರ ಲೋಕಾಯುಕ್ತರು ರಜೆ ಹಾಕಿದ್ದರು. ಜುಲೈ 17ರಿಂದ ಆ.17ರ ತನಕ ರಜೆ ಹಾಕಿದ್ದರು. ನಂತರ ಅದನ್ನು ಆ.31ರ ತನಕ ವಿಸ್ತರಣೆ ಮಾಡಿದರು. ಈಗ ಅದನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಿದ್ದಾರೆ. [15 ದಿನಗಳ ರಜೆ ಪಡೆದ ಭಾಸ್ಕರ ರಾವ್]

y bhaskar rao

ಸುದೀರ್ಘ ರಜೆ ಮೇಲೆ ತೆರಳುತ್ತಿರುವ ಲೋಕಾಯುಕ್ತರು ತಮ್ಮ ಕೆಲಸಗಳನ್ನು ಉಪ ಲೋಕಾಯುಕ್ತರಿಗೆ ವಹಿಸಿಲ್ಲ. ಆದ್ದರಿಂದ ನೂರಾರು ದೂರುಗಳು ಬಾಕಿ ಉಳಿದಿವೆ. ಹಿಂದೆ ದಾಖಲಾಗಿರುವ ಪ್ರಕರಣಗಳ ತನಿಖೆಯೂ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. [ಲೋಕಾಯುಕ್ತ ಪದಚ್ಯುತಿಗೆ ವಿಶೇಷ ಅಧಿವೇಶನ]

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಒನ್ ಇಂಡಿಯಾದೊಂದಿಗೆ ಮಾತನಾಡಿದ್ದು, 'ಲೋಕಾಯುಕ್ತರು ರಜೆ ತೆಗೆದುಕೊಳ್ಳಬಹುದು, ಆದರೆ, ಅವರು ತಮ್ಮ ಜವಾಬ್ದಾರಿಗಳನ್ನು ಉಪ ಲೋಕಾಯುಕ್ತರಿಗೆ ವಹಿಸಬೇಕು. ಆದರೆ, ಜವಾಬ್ದಾರಿ ಹಸ್ತಾಂತರ ಮಾಡಿಲ್ಲವಾದ್ದರಿಂದ ಕೆಲಸಗಳ ಬಾಕಿ ಉಳಿಯುತ್ತಿರಬಹುದು' ಎಂದು ಹೇಳಿದ್ದಾರೆ.

ಕರ್ನಾಟಕದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ -2015ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಸೆಪ್ಟೆಂಬರ್‌ನಲ್ಲಿ ವಿಶೇಷ ವಿಧಾನ ಮಂಡಲ ಅಧಿವೇಶನ ನಡೆಸಿ, ಲೋಕಾಯುಕ್ತರನ್ನು ಪದಚ್ಯತಿಗೊಳಿಸುವ ನಿರ್ಣಯವನ್ನು ಮಂಡನೆ ಮಾಡುವ ಸಾಧ್ಯತೆ ಇದೆ.

ಸರ್ಕಾರ ಮತ್ತು ಪ್ರತಿಪಕ್ಷಗಳು ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ವಿಚಾರದಲ್ಲಿ ಬ್ಯುಸಿಯಾಗಿವೆ. ಮೇಯರ್, ಉಪ ಮೇಯರ್ ಆಯ್ಕೆಯ ಚುನಾವಣೆ ಮುಗಿದ ಬಳಿಕ ಸರ್ಕಾರ ವಿಶೇಷ ಅಧಿವೇಶನದತ್ತ ಗಮನಹರಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಲೋಕಾಯುಕ್ತ ಪದಚ್ಯುತಿಗೆ ಈಗಾಗಲೇ ಬೆಂಬಲ ಸೂಚಿಸಿವೆ.

English summary
The functioning of the Karnataka Lokayukta has come to a complete standstill. Justice Y Bhaskar Rao, the Lokayukta of Karnataka has yet again extended his leave till September 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X