ಕರ್ನಾಟಕ ಲಾಕ್‌ಡೌನ್: ಪ್ರಯಾಣಿಕರು ಓದಲೇಬೇಕಾದ ನಿಯಮಗಳು
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಕಟ್ಟಿ ಹಾಕುವ ಉದ್ದೇಶದಿಂದ 14 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದ ಮೇ 12ರವರೆಗೂ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ. ರಾಜ್ಯದ ಎಲ್ಲಾ ಗಡಿಗಳು ಬಂದ್ ಆಗಲಿದ್ದು, ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಕರ್ನಾಟಕ ಲಾಕ್‌ಡೌನ್ ವೇಳೆಯಲ್ಲಿ ಸಾರಿಗೆ ವ್ಯವಸ್ಥೆ ಹೇಗಿರಲಿದೆ. ಯಾವೆಲ್ಲ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಯಾವ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಕುರಿತು ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

ಯಾವ ಯಾವ ವಾಹನಗಳ ಸಂಚಾರಕ್ಕೆ ನಿಷೇಧ?
ರಾಜ್ಯದಲ್ಲಿ ಯಾವ ವಾಹನಗಳ ಸಂಚಾರಕ್ಕೆ ನಿರ್ಬಂಧ
- ಕೆಎಸ್ಆರ್ ಟಿಸಿ
- ಬಿಎಂಟಿಸಿ
- ಮೆಟ್ರೋ ರೈಲು
- ಟ್ಯಾಕ್ಸಿ
- ಆಟೋರಿಕ್ಷಾ
- ಕ್ಯಾಬ್
ಜನರ ಚಟುವಟಿಕೆ ಮತ್ತು ಪ್ರಯಾಣಕ್ಕೆ ನಿರ್ಬಂಧ
ರಾಜ್ಯ ಮತ್ತು ಅಂತಾರಾಜ್ಯ ಸಂಚಾರಕ್ಕೆ ನಿಯಮ?
- ಮಾರ್ಗಸೂಚಿಯಡಿ ಉಲ್ಲೇಖಿಸಿ ವಾಹನಗಳ ಹೊರತಾಗಿ ಯಾವುದೇ ಸರ್ಕಾರಿ ಮತ್ತು ಖಾಸಗಿ ವಾಹನಗಳು ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುಮತಿಯಿಲ್ಲ
- ರಾಜ್ಯದೊಳಗೆ ಮತ್ತು ಅಂತರ್-ರಾಜ್ಯ ಪ್ರಯಾಣಿಸಲು ತುರ್ತು ಸಂದರ್ಭ ಅಥವಾ ಮಾರ್ಗಸೂಚಿಯಡಿ ಉಲ್ಲೇಖಿಸಿದವರಿಗೆ ಮಾತ್ರ ಅವಕಾಶ
- ಅಂತರ್-ರಾಜ್ಯಗಳ ನಡುವೆ ವಾಹನ ಮತ್ತು ಪ್ರಯಾಣಿಕರ ಪ್ರಯಾಣವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ತೀರಾ ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಎಸ್ಓಪಿ ಅಡಿಯಲ್ಲಿ ಅನುಮತಿ ನೀಡಲಾಗುವುದು.
- ಪ್ರಯಾಣಿಸುವ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿ ಅಥವಾ ಅಧಿಕಾರಿಗಳು ತಮ್ಮ ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯ.
- ಸೂಕ್ತ ದಾಖಲೆಗಳನ್ನು ಹೊಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣಗಳ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ
- ತುರ್ತು ಸಂದರ್ಭಗಳಲ್ಲಿ ಮಾತ್ರ ಅಗತ್ಯ ದಾಖಲೆಗಳೊಂದಿಗೆ ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ












Click it and Unblock the Notifications