ಲಲಿತಕಲಾ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ
ಬೆಂಗಳೂರು, ಜೂನ್ 28: ಹಿರಿಯ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ, ಎಂ.ಸಿ. ಚೆಟ್ಟಿ ಹಾಗೂ ವಿಜಯ ಬಾಗೋಡಿ ಅವರನ್ನು ಲಲಿತಕಲಾ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಚಿತ್ರಕಲಾ ಪ್ರಪಂಚಕ್ಕೆ ಜೀವಮಾನದ ಸೇವೆಯನ್ನು ಪರಿಗಣಿಸಿ, ಮೂವರು ಹಿರಿಯ ಕಲಾವಿದರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯು 2017ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಯನ್ನು ನೀಡಲು ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಗೌರವ ಪ್ರಶಸ್ತಿ ಪುರಸೃತರಿಗೆ ತಲಾ 50,000 ರುಪಾಯಿ ನಗದು, ಪ್ರಶಸ್ತಿ ಪತ್ರ, ಫಲಕ, ಬಹುಮಾನವನ್ನು ನೀಡಿ ವಾರ್ಷಿಕ ಕಲಾಪ್ರದರ್ಶನದಲ್ಲಿ ಗೌರವಿಸಲಾಗುವುದು.

46ನೇ ವಾರ್ಷಿಕ ಕಲಾಪ್ರದರ್ಶನದ ಬಹುಮಾನಿತರು
ಕರ್ನಾಟಕ ಲಲಿತಕಲಾ ಅಕಾಡೆಮಿಯು 2017-2018ನೇ ಸಾಲಿನ 46ನೇ ವಾರ್ಷಿಕ ಕಲಾಪ್ರದರ್ಶನ ಹಾಗೂ ಬಹುಮಾನಕ್ಕೆ 10 ಕಲಾವಿದರನ್ನು ಆಯ್ಕೆ ಮಾಡಿದೆ. ಇವರಿಗೆ ತಲಾ 25,000 ರುಪಾಯಿ ನಗದು, ಪ್ರಶಸ್ತಿ ಪತ್ರ, ಫಲಕ, ಬಹುಮಾನವನ್ನು ನೀಡಿ ವಾರ್ಷಿಕ ಕಲಾಪ್ರದರ್ಶನದಲ್ಲಿ ಗೌರವಿಸಲಾಗುವುದು.
46ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರ ಕಲಾಕೃತಿಗಳ ವಿವರ
ಕ್ರ.ಸಂ. ಬಹುಮಾನ ಪಡೆದವರ ಹೆಸರು ಮತ್ತು ಸ್ಥಳ ಕಲಾಕೃತಿಯ ವಿವರ ಮಾಧ್ಯಮ
1 ಶ್ರೀ ಪ್ರಕಾಶ್ ಗಡ್ಕರ್, ಕಲಬುರಗಿ ಅನ್‍ಟೈಟಲ್-I ತೈಲವರ್ಣ
2 ಶ್ರೀ ಚಂದ್ರಕಾಂತ ಸರೋದೆ, ಇಳಕಲ್ ಅನ್‍ಟೈಟಲ್-1 ತೈಲವರ್ಣ
3 ಶ್ರೀ ಮಹ್ಮದ ಇಸ್ಹಾಕ ಗುಲಾಬಶಾ ಮಕಾನದಾರ, ಬೆಳಗಾವಿ ನಿಸರ್ಗ ಚಿತ್ರ ಹಳ್ಳಿಯ ಮನೆ ಜಲವರ್ಣ
4 ಶ್ರೀ ಜಿ.ಆರ್.ಮಲ್ಲಾಪೂರ, ಹುಬ್ಬಳ್ಳಿ ಬಿಫೋರ್ ಎಂಡ್ ಅಕ್ರಲಿಕ್
5 ಶ್ರೀ ಪಾಲಯ್ಯ.ಎನ್. ಚಿತ್ರದುರ್ಗ ಪ್ರೆಶರ್ ಆಫ್ ಲೈಫ್ ಅಕ್ರಲಿಕ್
6 ಶ್ರೀ ನರಸಿಂಹ ಗಂಟಿ, ಯಾದಗಿರಿ ಆಚಾರ ಮತ್ತು ನಂಬಿಕೆ ಅಕ್ರಲಿಕ್
7 ಡಾ.ಅಶೋಕ.ಎಸ್.ಶಟಗಾರ, ಕಲಬುರಗಿ ಶೀರ್ಷಿಕೆ ರಹಿತ-01 ಮಿಶ್ರ ಮಾಧ್ಯಮ
8 ಶ್ರೀ ಜಯಪ್ರಕಾಶ್.ಎಂ.ಹೆಚ್, ಚಿಕ್ಕಮಗಳೂರು ಅನ್‍ಟೈಟಲ್-2 ಮಿಶ್ರ ಮಾಧ್ಯಮ
9 ಕು.ಪೂರ್ಣಿಮ.ಎನ್, ಮಂಡ್ಯ ಹಂಟಿಂಗ್ ಲಿಥೋಗ್ರಫಿ
10 ಶ್ರೀ ನಿಹಾಲ್ ವಿಕ್ರಂ ರಾಜು, ಬಳ್ಳಾರಿ ಅನ್‍ಟೈಟಲ್ ಪೆನ್ ಮತ್ತು ಇಂಕ್ (ಡ್ರಾಯಿಂಗ್)
2017-2018ನೇ ಸಾಲಿನ ಸುವರ್ಣ ಸಂಭ್ರಮ ಕಲಾ ಪುರಸ್ಕಾರ ವಿಶೇಷ ಬಹುಮಾನಕ್ಕೆ 10 ಕಲಾವಿದರಿಗೆ ತಲಾ 20,000 ನಗದು, ಪ್ರಶಸ್ತಿ ಪತ್ರ, ಫಲಕ, ಬಹುಮಾನವನ್ನು ನೀಡಿ ವಾರ್ಷಿಕ ಕಲಾಪ್ರದರ್ಶನದಲ್ಲಿ ಗೌರವಿಸಲಾಗುವುದು.
'ಸುವರ್ಣ ಸಂಭ್ರಮ ಕಲಾ ಪುರಸ್ಕಾರ' ವಿಶೇಷ ಬಹುಮಾನ
ಕ್ರ.ಸಂ. ಬಹುಮಾನ ಪಡೆದವರ ಹೆಸರು ಮತ್ತು ಸ್ಥಳ ಕಲಾಕೃತಿಯ ವಿವರ ಮಾಧ್ಯಮ
1 ಶ್ರೀ ರಂಗನಾಥ.ಡಿ.ಕೆ, ಮಹಾಲಿಂಗಪುರ ಭಾವಚಿತ್ರ ಜಲವರ್ಣ
2 ಶ್ರೀ ವಿರೂಪಾಕ್ಷ.ಎಸ್, ಚಾಮರಾಜನಗರ ಸ್ಮಾರಕ ಸ್ತಂಭ ಶ್ರೀರಂಗಪಟ್ಟಣ (ಪ್ರಕೃತಿ ಚಿತ್ರ) ಜಲವರ್ಣ
3 ಶ್ರೀಮತಿ ಶಾಂತಲ.ಹೆಚ್.ಪಿ, ಬೆಂಗಳೂರು ಬ್ಯಾಟಲ್ ಬಿಟ್ವೀನ್ ರಾಮ & ರಾವಣ ಜಲವರ್ಣ (ಸಾಂಪ್ರದಾಯಿಕ ಕಲೆ)
4 ಶ್ರೀ ಗಂಗಾಧರ.ಈ.ಬಂಡಾನವರ, ಕೊಪ್ಪಳ ಕ್ರೈಂ ನ್ಯೂಸ್ ಜಲವರ್ಣ
5 ಶ್ರೀ ವೀರೇಶ.ಎಂ.ರುದ್ರಸ್ವಾಮಿ, ಬಾಗಲಕೋಟೆ ಫ್ಲೋ ಆಫ್ ಮೈಂಡ್ ಅಕ್ರಲಿಕ್ ಆನ್ ಪೇಪರ್
6 ಡಾ.ಸುಭಾಷ ಕಮ್ಮಾರ, ಬೆಳಗಾವಿ ಅವನಂತಾಗಬೇಕು ಅಕ್ರಲಿಕ್
7 ಶ್ರೀ ರಾಮಲಿಂಗ ಬೆಳಕೋಟೆ, ಕಲಬುರಗಿ ದ ಕಾಂಕ್ರಿಟ್ ಫಾರೆಸ್ಟ್ ಮಿಶ್ರ ಮಾಧ್ಯಮ
8 ಶ್ರೀ ವೀರಣ್ಣ ಕರಡಿ, ಹುಣಸೂರು ಪರಿಸರ ಮಿಶ್ರ ಮಾಧ್ಯಮ
9 ಶ್ರೀ ಕೆ.ಎಸ್.ಪರಮೇಶ್ವರ, ಮೈಸೂರು ಪವರ್ ಆಫ್ ಬುಲ್ ವುಡ್
10 ಶ್ರೀ ಹೆಚ್.ಸತೀಷ್, ಬೆಂಗಳೂರು ಕವ್ರ್ಸ್ ಫೋಟೋಗ್ರಫಿ
ಪುಸ್ತಕ ಬಹುಮಾನ
2016 ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ 25,000 ನಗದು, ಪ್ರಶಸ್ತಿ ಪತ್ರ, ಫಲಕ, ಬಹುಮಾನವನ್ನು ನೀಡಿ ವಾರ್ಷಿಕ ಕಲಾಪ್ರದರ್ಶನದಲ್ಲಿ ಗೌರವಿಸಲಾಗುವುದು.
1. ಪ್ರೊ. ಎಸ್.ಸಿ.ಪಾಟೀಲ, ಕನ್ನಡ ವಿಶ್ವವಿದ್ಯಾಲಯ, ಹಂಪಿ- 2016ನೇ ಸಾಲಿನ ಬಹುಮಾನ ಪುರಸ್ಕೃತರು.
2. ಡಾ.ಮಲ್ಲಿಕಾರ್ಜುನ.ಸಿ.ಬಾಗೋಡಿ, ಕಲಬುರಗಿ - 2017ನೇ ಸಾಲಿನ ಬಹುಮಾನ ಪುರಸ್ಕೃತರು












Click it and Unblock the Notifications