ಆಘಾತಕಾರಿ ವರದಿ: ಕರ್ನಾಟಕದಲ್ಲೇ ಆತ್ಮಹತ್ಯೆ ಹೆಚ್ಚು

ಬೆಂಗಳೂರು, ಸೆಪ್ಟೆಂಬರ್ 13: ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಘಟನೆಗಳು ನಡೆದಿರುವುದು ಕರ್ನಾಟದಲ್ಲಿಯೇ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಭಾರತದ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಜನ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತದೆ ಬುಧವಾರ ಪ್ರಕಟವಾಗಿರುವ ಒಂದು ಜಾಗತಿಕ ವರದಿ. ಕರ್ನಾಟಕದಲ್ಲಿ ಶೇ 30.7 ಆತ್ಮಹತ್ಯೆ ಪ್ರಮಾಣ ಕಳೆದ ವರ್ಷ ವರದಿಯಾಗಿದೆ.

ಕರ್ನಾಟಕದ ನಂತರ ತ್ರಿಪುರಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮಬಂಗಾಳ ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಆತ್ಮಹತ್ಯೆಗೆ ಶರಣಾಗುವ ಮಹಿಳೆ ಮತ್ತು ಪುರುಷರ ನಡುವಿನ ಅಂತರ ಪ್ರಮಾಣ ಕಡಿಮೆ ಇದೆ.

Karnataka is suicide capital of India

ಭಾರತದಲ್ಲಿ ವರಿಯಾಗುವ ಸಾವಿನ ಸಂಖ್ಯೆಯಲ್ಲಿ ಆತ್ಮಹತ್ಯೆಯಿಂದಾಗುವ ಸಾವೇ ಹೆಚ್ಚು. ಪುರುಷರಿಗಿಂತಲೂ ಮಹಿಳೆಯರೇ ಆತ್ಮಹತ್ಯೆಗೆ ಶರಣಾಗುವುದು ಹೆಚ್ಚು. ಪುರುಷರ ಆತ್ಮಹತ್ಯೆ ಪ್ರಮಾಣ 24 ಇದ್ದರೆ ಮಹಿಳೆಯರ ಪ್ರಮಾಣ 37 ಇದೆ.

ದೇಶದಲ್ಲಿ ವರದಿಯಾಗುವ ಶೇ 63 ಆತ್ಮಹತ್ಯೆ ಪ್ರಕರಣಗಳಲ್ಲಿ 15-39 ವಯಸ್ಸಿನವರೇ ಹೆಚ್ಚು. ಅದರಲ್ಲೂ ವಿವಾಹಿತ ಮಹಿಳೆಯರೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು ಎನ್ನುತ್ತದೆ ವರದಿ.

ಚಿಕ್ಕ ವಯಸ್ಸಿನಲ್ಲೇ ಮದುವೆ, ಆರ್ಥಿಕ ಸಮಸ್ಯೆ, ಎಳೆ ವಯಸ್ಸಿನಲ್ಲಿ ತಾಯ್ತನ, ಕೌಟುಂಬಿಕ ದೌರ್ಜನ್ಯ, ಆರ್ಥಿಕ ಪರಾವಲಂಬನೆ, ಅನಕ್ಷರತೆ, ಬಡತನ ಇನ್ನೂ ಮೊದಲಾದ ಕಾರಣಿಗಳಿಗಾಗಿ ಆತ್ಮಹತ್ಯೆಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+