ಕರ್ನಾಟಕದಲ್ಲಿ ಇ -ಸಿಗರೇಟ್ ಸಂಪೂರ್ಣ ನಿಷೇಧ

Posted By:
Subscribe to Oneindia Kannada

ಬೆಂಗಳೂರು, ಜೂನ್ 15: ರಾಜ್ಯದಲ್ಲಿ ಇ -ಸಿಗರೇಟ್ ಉತ್ಪಾದನೆ, ಮಾರಾಟ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಬುಧವಾರ(ಜೂನ್ 15) ಅಧಿಕೃತ ಅದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಈ ಬಗ್ಗೆ ವಿವರಣೆ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, ಇ-ಸಿಗರೇಟ್ ತಂಬಾಕುಪೂರಿತ ಸಿಗರೇಟ್​ಗೆ ಪರ್ಯಾಯವಲ್ಲ. 18 ವರ್ಷದ ಒಳಗಿನವರು ಇದನ್ನು ಉಪಯೊಗಿಸಬಾರದು ಎಂದು ಎಚ್ಚರಿಕೆ ನೀಡಿದರೂ ಬಳಕೆ ಜಾರಿಯಲ್ಲದೆ, ಇ ಸಿಗರೇಟ್ ನಿಂದ ದುಷ್ಪರಿಣಾಮಗಳಿಲ್ಲ ಎಂಬುದಕ್ಕೆ ಸರಿಯಾದ ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ ಇ -ಸಿಗರೇಟ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧದ ನಂತರವೂ ಮಾರಾಟ ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

Karnataka impose complete ban manufacture and sale of E-Cigarettes

ಧೂಮಪಾನಿಗಳನ್ನು ವ್ಯಸನಮುಕ್ತಗೊಳಿಸುವ ಉದ್ದೇಶ ಇ-ಸಿಗರೇಟ್ ಗಳು ಮಾರುಕಟ್ಟೆ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ನಿಕೋಟಿನ್ ಯುಕ್ತ ಮಾಮೂಲಿ ಸಿಗರೇಟ್ ಸೇದುವ ಚಟ ಬಿಟ್ಟವರು ಹಾಗೂ ಸಿಗರೇಟ್ ಸೇದುವ ಆಸೆಯುಳ್ಳವರು ಎಲ್ಲರೂ ಇ ಸಿಗರೇಟ್ ದಾಸರಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ವರದಿ ಪರಿಶೀಲಿಸಿ ಈ ಕ್ರಮ ತೆಗೆದುಕೊಂಡಿದೆ.

ಮಹಾರಾಷ್ಟ್ರ, ಚಂಡೀಗಢ, ಪಂಜಾಬ್​ಗಳಲ್ಲಿ ಈಗಾಗಲೇ ಇ-ಸಿಗರೇಟ್ ನಿಷೇಧಿಸಲಾಗಿದೆ. ಇ ಸಿಗರೇಟ್ ನಲ್ಲೂ ನಿಕೋಟಿನ್ ಅಂಶ ಇರುವುದರಿಂದ ನಿಷೇಧಿಸಲು ಅರ್ಹವಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸರ್ಕಾರಕ್ಕೆ ವರದಿ ನೀಡಿದ್ದರು.

ಆದರೆ, ಹಲವು ಮೆಡಿಕಲ್ ಸ್ಟೋರ್ ಗಳಲ್ಲಿ ಔಷಧಿಯಂತೆ ಇ ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಿಕ್ಕ ಬಳಿಕ, ಆರೋಗ್ಯ ಸಚಿವ ಖಾದರ್ ಅವರು ಇ ಸಿಗರೇಟು ಮಾರಾಟಕ್ಕೆ ನಿಷೇಧ ಹೇರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka government today(Jun 15) imposed complete ban on the manufacture and sale of E-Cigarettes in the State with immediate effect. Minister for Health and Family Welfare U T Khadar said that there is a lack of long-term scientific research that confirms whether e-cigarettes are safe
Please Wait while comments are loading...